ಮೀಸಲಾತಿ ಬೇಡಿಕೆ ವಿಚಾರ : ಉನ್ನತ ಮಟ್ಟದ ಸಮಿತಿ ರಚನೆಗೆ ಸಂಪುಟ ಒಪ್ಪಿಗೆ: ಬಸವರಾಜ್ ಬೊಮ್ಮಾಯಿ
Team Udayavani, Mar 3, 2021, 4:44 PM IST
ಬೆಂಗಳೂರು : ಪಂಚಮಸಾಲಿ ಸಮುದಾಯ 2ಎಗೆ ಮೀಸಲಾತಿಯ ಬೇಡಿಕೆ, ವಾಲ್ಮೀಕಿ,ಕುರುಬ ಸಮುದಾಯ ಎಸ್ಟಿ ಪಟ್ಟಿಗೆ ಸೇರಿಸಲು ಮನವಿ ಮಾಡಿರುವುದರಿಂದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಜನರ ಉನ್ನತ ಮಟ್ಟದ ಸಮಿತಿ ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬೇಡಿಕೆಗಳನ್ನು ಒಪ್ಪಿಕೊಂಡರೆ ಮೀಸಲಾತಿ ಶೇ. 50 ಕ್ಕಿಂತ ಹೆಚ್ಚಾಗುತ್ತದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ಪ್ರಕಾರ ಮೀಸಲಾತಿ ಶೇ.50 ಮೀರುವಂತಿಲ್ಲ. ಒಂದು ವೇಳೆ ಹಾಗೆ ನೀಡಬೇಕಾದರೆ ಅದಕ್ಕೆ ವಿಶೇಷ ಅಂಶ ಪ್ರಸ್ತಾಪಿಸಬೇಕು. ಬೇರೆ ರಾಜ್ಯಗಳು ಶೇ 50 ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸುಪ್ರೀಂ ತಡೆ ಹಿಡಿದಿದೆ. ಹೀಗಾಗಿ ಈ ಗೊಂದಲದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಕಾರಣಕ್ಕೆ ಈ ಸಮಿತಿ ರಚನೆ ಮಾಡಲಾಗುತ್ತದೆ ಎಂದರು.
ಈ ಸಮಿತಿಯಲ್ಲಿ ಒಬ್ಬರು ನ್ಯಾಯಮೂರ್ತಿ, ಒಬ್ಬರು ಆಡಳಿತಾಧಿಕಾರಿ ಹಾಗೂ ಒಬ್ಬರು ಸಮಾಜ ವಿಜ್ಞಾನಿ ಇರುತ್ತಾರೆ. ಈ ಮೂವರನ್ನು ನೇಮಿಸುವ ಅಧಿಕಾರ ಸಿಎಂಗೆ ನೀಡಲಾಗಿದೆ. ಇದಕ್ಕೆ ಯಾವುದೇ ಸಮಯ ನಿಗದಿ ಮಾಡಿಲ್ಲ ಎಂದರು.
ಕರ್ನಾಟಕಕ್ಕೆ ಸಿವಿಲ್ ಸರ್ವಿಸ್ ಸೇವೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದವರಿಗೆ ನೀಡುವ 5000 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದರು.
ಇದನ್ನೂ ಓದಿ ; ಹೆಂಡತಿ ಗಂಡನ ಗುಲಾಮಳೆ..? : ‘ಸುಪ್ರೀಂ’ ಪ್ರಶ್ನೆ
ಸರ್ಕಾರಿ ಆಯುರ್ವೆದಿಕ್ ಕಾಲೇಜ್ ಲಕ್ಚರರ್ ಗೆ ಎಐಸಿಟಿ ವೇತನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕಾನೂನು ಇಲಾಖೆಯಲ್ಲಿ 2009 ವೇತನ ಪರಿಷ್ಕರಣೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದರು. ಸಣ್ಣ ನೀರಾವರಿ ಮಸ್ಕಿ ತಾಲೂಕಿನಲ್ಲಿ 1700 ಕೆರೆ ತುಂಬಿಸಲು 457 ಕೋಟಿ ಘಟನೋತ್ತರಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ರಮೇಶ್ ಜಾರಕಿಹೊಳಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ತನಿಖೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಸದ್ಯ ಕಬ್ಬನ್ ಪಾರ್ಕ್ ಪೋಲೀಸರು ತನಿಖೆ ಮಾಡಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.