ಕೆರೆ ನಿರ್ಮಾಣಕ್ಕೆ ಒತ್ತು : ಚಂದ್ರಪ್ಪ
Team Udayavani, Mar 3, 2021, 6:29 PM IST
ಹೊಳಲ್ಕೆರೆ: ಜೀವಜಲ ಉಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆರೆ ನಿರ್ಮಾಣಕ್ಕೆ ಒತ್ತು ನೀಡಿಲಾಗಿದ್ದು, ತಾಲೂಕಿನ ಕಡೂರು ಅಂತಾಪುರದ ಕಾವಲ್ ಭಾಗದಲ್ಲಿ 1 ಕೋಟಿ ಅನುದಾನದ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ಕಡೂರು ಹಾಗೂ ಅಂತಾಪುರ ಕಾವಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕೆರೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಎಲ್ಲಾ ಜೀವಿಗಳಿಗೆ ಅಗತ್ಯವಾದ ರುಚಿ ಸಹಿತವಾದ ಶುದ್ಧ ಕುಡಿಯುವ ನೈಸರ್ಗಿಕವಾಗಿ ನೀರು ಕಲ್ಪಿಸಲು ಸರಕಾರ ಸಾಕಷ್ಟು ಯೋಜನೆ ರೂಪಿಸುವ ಮೂಲಕ ನಾಗಕರಿಕ ಸಮಾಜಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿದೆ ಎಂದರು.
ಬರದ ನಾಡು ಎನ್ನುವ ಖ್ಯಾತಿಯಿಂದ ಹತ್ತಾರು ವರ್ಷಗಳಿಂದ ಕಡೂರು ಅಂತಾಪುರ ಗ್ರಾಮಗಳಿಲ್ಲಿ ಕುಡಿಯುವ ನೀರು ಎನ್ನುವುದು ಇಲ್ಲಿನ ಜನರಿಗೆ ಮರೀಚಿಕೆ ಎನ್ನುವಂತ ಸ್ಥಿತಿ ಇತ್ತು. ಇತ್ತೀಚೆಗೆ ಸರಕಾರಿ ಸೌಲಭ್ಯಗಳನ್ನು ಭರಪೂರವಾಗಿ ಕಲ್ಪಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ನೀರು ಹರಿದು ಬರುತ್ತಿದೆ. ಅದರೂ ಅಂತರ್ಜಲ ಕುಸಿದಾಗ ಕೊಳವೆ ಬಾವಿಗಳು ಬತ್ತಿ ನೀರಿಲ್ಲದೆ ಪರಿತಪಿಸುವಂತಹ ಸ್ಥಿತಿ ಸಾಮಾನ್ಯವಾಗಲಿದೆ. ಕೆರೆಗಳ ಕಟ್ಟುವುದು, ಅಭಿವೃದ್ಧಿಗೆ ಒತ್ತು ನೀಡುವುದು. ಹರಿಯುವ ನೀರು ತಡೆಯುವುದು ಸೇರಿದಂತೆ ನೀರು ನಿಲ್ಲಿಸುವ ಕೆಲಸಗಳನ್ನು ಹೆಚ್ಚಾಗಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರು ಉಳಿಸಲು ಸಂರಕ್ಷಣೆ ಮಾಡಬೇಕಿದೆ ಎಂದರು. ಜಿ.ಪಂ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.