ಮೊಡವೆ: ಯಾರಿಗೂ ಬೇಡದ ಒಡವೆ
Team Udayavani, Mar 3, 2021, 7:17 PM IST
ಹಣೆಯ ಮೇಲೆ, ಕೆನ್ನೆಯ ಮೇಲೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ನಮ್ಮ ಸೌಂದರ್ಯದ ಸ್ವರೂಪವನ್ನೇ ಬದಲಿಸಿಬಿಡುವ ಶತ್ರುವೆಂದರೆ- ಮೊಡವೆ.
ನಾವು ಅದೆಷ್ಟೇ ಬೇಡ ಬೇಡವೆಂದು ಗೋಗರೆದರೂ ಅವು ಬಂದುಬಿಡುತ್ತವೆ ಮತ್ತು ಆನಂತರದಲ್ಲಿ ತಿಂಗಳು ಗಳ ಕಾಲ ಅಥವಾ ವರ್ಷಗಟ್ಟಲೇ ಜೊತೆಗೆ ಇರುತ್ತವೆ. ಮೊಡವೆಯಿಂದ ಆಗುವ ಕಿರಿಕಿರಿ ಅದನ್ನು ಅನುಭವಿಸಿದವರಿಗೆ ಗೊತ್ತು. ಮೊಡವೆಗಳಿಂದ ಪಾರಾ ಗಲು ದಿನಕ್ಕೆ ಮೂರು ಬಾರಿ ಕ್ರೀಮ್ ಮೆತ್ತಿಕೊಳ್ಳುವ ಜನ ಪ್ರತಿ ಮನೆಯಲ್ಲೂ ಇದ್ದಾರೆ ಅಂದರೆ, ಮೊಡವೆಯಿಂದ ಆಗುತ್ತಿರುವ ಅನಾಹುತಎಂಥದೆಂದು ಅಂದಾಜುಮಾಡಿಕೊಳ್ಳಬಹುದು. ಮೊಡವೆಗಳುಬಾರದಂತೆ ನೋಡಿಕೊಳ್ಳಬೇಕು ಅನ್ನುವವರು ಇಲ್ಲಿರುವ ಸಲಹೆಗಳನ್ನು ಅನುಸರಿಸಬೇಕು.
- ಮುಖ ಒರೆಸಲು ಯಾವಾಗಲೂ ಶುದ್ಧವಾದ ವಸ್ತ್ರಗಳನ್ನು ಬಳಸಿ.
- ಹೊರಗೆ ಹೋಗುವಾಗ ಚರ್ಮವನ್ನು ಸೂರ್ಯನ ಬೆಳಕಿನಿಂದ ರಕ್ಷಿಸಿ
- ಹೆಚ್ಚು ನೀರು ಕುಡಿಯಿರಿ. ತರಕಾರಿ ಮತ್ತು ಹಣ್ಣಿನೊಂದಿಗೆ ಸಮತೋಲನ ಆಹಾರವನ್ನು ಸೇವಿಸಿ.
- ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಂಡರೆ ವೈದ್ಯರ ನಿರ್ದೇಶನದಂತೆ ಔಷಧಗಳನ್ನು ತೆಗೆದುಕೊಳ್ಳಿ.
- ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಬೇಡಿ.
- ಪದೇಪದೆ ಮುಖ ಮುಟ್ಟುತ್ತಾ ಮೊಡವೆಗಳನ್ನು ಉಜ್ಜಲು ಹೋಗಬೇಡಿ.
-ಡಾ.ದೀಪಾ.ಕೆ, ಅಪೋಲೋ ಆಸ್ಪತ್ರೆ, ಬೆಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.