ಕೇಂದ್ರ ಬಜೆಟ್-ಭಾರತದ ನಗರಗಳಿಗೆ ನವಯುಗ
Team Udayavani, Mar 5, 2021, 7:00 AM IST
ದಶಕಗಳಿಂದಲೂ ಭಾರತದ ನಗರಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ನಗ ರೀ ಕ ರ ಣದ ವಿಚಾ ರ ದಲ್ಲಿ ಹಿಂದಿನ ಸರಕಾರಗಳು ನಮ್ಮನ್ನು ದಿಕ್ಕೆಡಿಸಿದ ದುಃಸ್ವಪ್ನಗಳನ್ನು ಅವಗಣಿಸಿದವು ಅಥವಾ ಅಲ್ಪ ಪರಿಹಾರಗಳನ್ನು ನೀಡಿದವು. 2014ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಆರಂಭಿಸಿದ ಜಗತ್ತಿನ ಎಲ್ಲಿಯೂ ಕೈಗೊಳ್ಳದ ಅತ್ಯಂತ ವಿಸ್ತಾರವಾದ, ಯೋಜಿತ ನಗರೀಕರಣದ ಪ್ರಯತ್ನಕ್ಕೆ ಈಗ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2004-2014ರವರೆಗೆ ಯುಪಿಎ ಸರಕಾರದ ಹತ್ತು ವರ್ಷಗಳಲ್ಲಿ ನಗರ ವಲಯಕ್ಕೆ 1,57,000 ಕೋಟಿ ರೂ.ಗಳ ಹೂಡಿಕೆಗೆ ಹೋಲಿಸಿದರೆ ಮೋದಿ ಸರಕಾರದ ಆರು ವರ್ಷಗಳಲ್ಲಿ ಇದು ಆರು ಪಟ್ಟು ಹೆಚ್ಚಳವಾಗಿ ಸುಮಾರು 11 ಲಕ್ಷ ಕೋಟಿ ರೂ. ಆಗಿದೆ.
2021-22 ಕೇಂದ್ರ ಆಯವ್ಯಯ ಮತ್ತು 15ನೇ ಹಣಕಾಸು ಆಯೋಗದ ವರದಿಯು ಒಟ್ಟಾಗಿ ಭಾರತದ ನಗರಗಳ ಹೊಸ ಯುಗಕ್ಕೆ ನಾಂದಿ ಹಾಡಿವೆ. ಸಾಂಕ್ರಾಮಿಕ ವರ್ಷದಲ್ಲೂ ಅಭೂತಪೂರ್ವ ಬಜೆಟ್ ನಲ್ಲಿ ಸುಮಾರು 7 ಲಕ್ಷ ಕೋಟಿ ರೂ.ಗಳ ಅನುದಾನವು, ಐದು ವರ್ಷಗಳಲ್ಲಿ ನಮ್ಮ ನಗರಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಎನ್‌ಡಿಎ ಸರಕಾರದ ಬದ್ಧತೆಯನ್ನು ಪುನರುಚ್ಚರಿಸಿದೆ. ಇದು ಸುಗಮ ಜೀವನ ಮತ್ತು ಸುಲಲಿತ ವ್ಯವಹಾರವನ್ನು ಒಳಗೊಂಡಿದೆ. 7 ಲಕ್ಷ ಕೋಟಿ ರೂ.ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಒಳಗೊಂಡಂತೆ ನೀರು ಮತ್ತು ನೈರ್ಮಲ್ಯಕ್ಕಾಗಿ 5 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಮತ್ತು ಬಾಕಿ ಮೊತ್ತದಲ್ಲಿ ಮೆಟೊ›à ರೈಲಿಗೆ 88,000 ಕೋಟಿ ರೂ., ಆರೋಗ್ಯ ಸೇವೆಗಳಿಗೆ 26,000 ಕೋಟಿ ರೂ., ಬಸ್ ಸಾರಿಗೆಗೆ 18,000 ಕೋಟಿ, ಶುದ್ಧ ಗಾಳಿಗೆ 15,000 ಕೋಟಿ ಮತ್ತು ಹೊಸ ನಗರಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸೇವೆಗಳಿಗಾಗಿ 8,450 ಕೋಟಿ ರೂ.ಒದಗಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪುನಶ್ಚೇತನ ಮತ್ತು ನಗರ ಪರಿವರ್ತನೆಯ ಅಟಲ್ ಮಿಷನ್, ಸ್ವತ್ಛ ಭಾರತ ಅಭಿಯಾನ ಮತ್ತು ಸ್ಮಾರ್ಟ್ ನಗರ ಮಿಷನ್, ನಗರ ಆಡಳಿತದಲ್ಲಿ ಹೊಸ ವಿಧಾನವನ್ನು ಆರಂಭಿಸಿವೆ. ಏಕೆಂದರೆ ಮೋದಿ ಸರಕಾರವು ಹಿಂದಿನ ಪುರಾತನ ಕಲ್ಪನೆಗಳನ್ನು ಬದಿಗೊತ್ತಿ, ನಾಗರಿಕ ಕೇಂದ್ರಿತ ಮೂಲಭೂತ ಅಗತ್ಯಗಳನ್ನು ಒದಗಿಸುತ್ತಿದೆ. ಐದು ವರ್ಷಗಳಲ್ಲಿ 2.87 ಲಕ್ಷ ಕೋಟಿ ರೂ.ಗಳ ವಿನಿಯೋಗದೊಂದಿಗೆ ಜಲ ಜೀವನ್ ಮಿಷನ್ ಮತ್ತು 1.41 ಲಕ್ಷ ಕೋಟಿ ರೂ.ಗಳ ವಿನಿಯೋಗದೊಂದಿಗೆ ಸ್ವತ್ಛ ಭಾರತ ಮಿಷನ್, ನಾಗರಿಕ ಸೌಲಭ್ಯಗಳು ಮತ್ತು ಮೂಲಸೌಕ ರ್ಯಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಇದನ್ನು ದೇಶಾದ್ಯಂತ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ಮೇ 2014ರಿಂದ, ಭಾರತದಲ್ಲಿ ಆಕರ್ಷಕ ನಗರ ಪ್ರಯೋಗ ನಡೆಯುತ್ತಿದೆ. ಒಂದು ಮಾದರಿ ಬದಲಾವಣೆ ಯಲ್ಲಿ, ಕೇಂದ್ರ ಸರಕಾರವು ದೇಶದ ನಾಗರಿಕರ ಭವಿಷ್ಯವನ್ನು ಪುನರ್ ವ್ಯಾಖ್ಯಾನಿಸುತ್ತಿದೆ. ನಗರ ವ್ಯವಹಾರಗಳ ಅಡಿಯಲ್ಲಿ ಬರುವ ಪ್ರತಿಯೊಂದು ಅಭಿಯಾನಗಳು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಉತ್ಸಾಹವನ್ನು ತೋರುತ್ತಿವೆ. ನಗರಗಳ ಪರಿವರ್ತನೆಗಾಗಿ ಕೇಂದ್ರ ಸರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದೆ. ಆ ನಗರ ಯೋಜನೆ ಕ್ರಮೇಣ ಫಲ ಪ್ರದವಾಗುತ್ತಿದ್ದಂತೆ, ನಾಗರಿಕರು ಸ್ವತ್ಛ ನಗರ, ಸಾಂಸ್ಕೃತಿಕವಾಗಿ ಹೆಮ್ಮೆ ಪಡುವ ನಗರ; ಆಧುನಿಕ ತಂತ್ರಜ್ಞಾನ ಚಾಲಿತ ನಗರ, ಆದರೆ ತನ್ನ ಸಂಪ್ರದಾಯಗಳನ್ನು ಬಿಟ್ಟುಕೊಡದ ನಗರ, ಭೇಟಿ ನೀಡುವವರಿಗೆ ಮೋಡಿ ಮಾಡುವ ನಗರವನ್ನು ಹೊಂದಿರುತ್ತಾರೆ.
ಚೈತನ್ಯಯುಕ್ತ ನಗರಗಳ ಜತೆಗೆ, ಮತ್ತೂಂದು ಪ್ರಮುಖ ಅಂಶವೆಂದರೆ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಗಳು, ವಿಶೇಷವಾಗಿ ಸಮೂಹ ಸಾರಿಗೆ ವ್ಯವಸ್ಥೆಗಳು. ಸಣ್ಣ ನಗರಗಳಿಗೆ ಮೆಟ್ರರೋ ಲೈಟ್ ಮತ್ತು ಮೆಟ್ರೋ ನಿಯೋ ವಿಧಾನಗಳು ಸೇರಿದಂತೆ ಬಸ್ ಸಾರಿಗೆ ಮತ್ತು ಮೆಟೊ›à ರೈಲು ಯೋಜನೆಗಳಲ್ಲಿನ ಹೂಡಿಕೆಗಳು ಇದಕ್ಕೆ ಉದಾಹರಣೆಯಾಗಿವೆ. ಕೈಗೆಟುಕುವ ಸಾರ್ವಜನಿಕ ಸಾರಿಗೆಯು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಜೀವನೋಪಾಯಕ್ಕೆ ಹೆಚ್ಚು ಆಯ್ಕೆಗಳನ್ನು ನೀಡುತ್ತದೆ. ಜತೆಗೆ ಉದ್ಯೋಗಸ್ಥ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಆನ್‌ಲೈನ್ ಕಟ್ಟಡ ಯೋಜನೆ ಅನುಮತಿಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ನಗರಗಳಲ್ಲಿ ಪರವಾನಿಗೆ ವ್ಯವಸ್ಥೆಯ ಸರಳೀಕರಣಕ್ಕೆ ಒತ್ತು ನೀಡುವ ಮೂಲಕ ಕೇಂದ್ರ ಸರಕಾರವು ಮಾನವ ಸಂಪರ್ಕವನ್ನು ಕಡಿಮೆ ಮಾಡುವ, ವಿಶೇಷವಾಗಿ ಸ್ಥಳೀಯ ಸೇವೆಗಳನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ. ಪಾರದರ್ಶಕ, ಸದೃಢ, ತಂತ್ರಜ್ಞಾನ ಚಾಲಿತ ಸ್ಥಳೀಯ ಆಡಳಿತವು ನಿರ್ಣಾಯಕ ನಿಯತಾಂಕವಾಗಿದ್ದು, ಅದು ಸುಗಮ ಜೀವನಕ್ಕೆ ದಾರಿಮಾಡಿಕೊಡುತ್ತದೆ.
ನಗರ ಆಡಳಿತಕ್ಕೆ ಬಲವಾದ ಸಾಂಸ್ಥಿಕ ವ್ಯವಸ್ಥೆಗಳು ಪ್ರಮುಖವಾಗಿವೆ. ಪ್ರಮುಖ ಕಾರ್ಯಕ್ರಮಗಳ ಯೋಜನಾ ಮಧ್ಯಸ್ಥಿಕೆಗಳ ಜತೆಗೆ ನಮ್ಮ ನಗರಗಳ ಸ್ಥಳೀಯ ಆಡಳಿತಗಳನ್ನು ಬಲಪಡಿಸಲು ಒಂದು ಏಕೀಕೃತ, ಸಮಗ್ರ ಪ್ರಯತ್ನವನ್ನು ಮಾಡಲಾಗಿದೆ. ಈ ಎಲ್ಲ ಉಪಕ್ರಮಗಳು ಸ್ಥಳೀಯ ಆಡಳಿತಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಆಸ್ತಿ ತೆರಿಗೆ ಸುಧಾರಣೆ ಕ್ರಮಗಳ ಮೂಲಕ ಒತ್ತು ನೀಡಿವೆ. ವಾಸ್ತವವಾಗಿ ಒಂಬತ್ತು ನಗರ ಸ್ಥಳೀಯ ಸಂಸ್ಥೆಗಳು ಬಾಂಡ್‌ಗಳ ಮೂಲಕ ಯಶಸ್ವಿಯಾಗಿ 3,690 ಕೋಟಿ ರೂ. ಹಣವನ್ನು ಸಂಗ್ರಹಿಸಿವೆ, ಇದು ವ್ಯವಸ್ಥೆಯೊಳಗೆ ಕ್ರಮೇಣ ವಾಗಿ ವೃತ್ತಿಪರತೆಯನ್ನು ಬೆಳೆಸಿಕೊಳ್ಳುವುದರ ಸಂಕೇತವಾಗಿದೆ ಮತ್ತು ಅವುಗಳ ಕಾರ್ಯವನ್ನು ಸುಸ್ಥಿರ ಮತ್ತು ಪಾರದರ್ಶಕವಾಗಿಸುವ ವಿಶ್ವಾಸವೂ ಆಗಿದೆ. ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸಂಪನ್ಮೂಲಗಳ ವೃದ್ಧಿಗೆ ಈ ನಂಬಿಕೆಯ ಹಾದಿ ತುಳಿದಿವೆ.
ಬೃಹತ್ ನಗರಗಳು ಮಧ್ಯಮಾವಧಿಯಲ್ಲಿ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದಕತೆಯನ್ನು ಮುನ್ನಡೆಸುತ್ತವೆ. ಮಿಲಿಯನ್-ಪ್ಲಸ್ ಸಂಗ್ರಹಕ್ಕಾಗಿ 15ನೇ ಹಣಕಾಸು ಆಯೋಗದ 38,000 ಕೋಟಿ ರೂಪಾಯಿಗಳ ಮಿಲಿಯನ್ ಪ್ಲಸ್ ಚಾಲೆಂಜ್ ಫಂಡ್ ಸ್ವಾಗತಾರ್ಹ ಕ್ರಮವಾಗಿದೆ. ಇದು ಮಹಾನಗರಗಳಲ್ಲಿ ವಿವಿಧ ನಾಗರಿಕ ಸಂಸ್ಥೆಗಳ ನಡುವೆ ಅಗತ್ಯವಾದ ಏಕೀಕರಣ ಮತ್ತು ಸಮನ್ವಯವನ್ನು ಪ್ರೋತ್ಸಾಹಿಸುತ್ತದೆ. ಹೊಸ ನಗರಗಳಿಗೆ 8,000 ಕೋಟಿ ರೂ.ಗಳ ಮೂಲ ನಿಧಿಯು ಯೋಜಿತ ನಗರೀಕರಣದಲ್ಲಿ ರಾಜ್ಯಗಳಿಗೆ ಅನುಶೋಧನೆಗೆ ಅವಕಾಶ ಕಲ್ಪಿಸುತ್ತದೆ. ಸ್ಥಳೀಯ ಸಂಸ್ಥೆಗಳ ಸೇವೆಗಳ ಹಂಚಿಕೆಯ ಪರಿಕಲ್ಪನೆಯು ನಗರಗಳ ಸಾಮರ್ಥ್ಯವನ್ನು ಸಾಮೂಹಿಕವಾಗಿ ನಿರ್ಮಿಸಲು ಉತ್ತೇಜನ ನೀಡುತ್ತದೆ.
ಭವಿಷ್ಯದ ನಗರಗಳು ಎದುರಿಸುವ ಸಮಸ್ಯೆಗಳನ್ನು ನಿಭಾ ಯಿಸಲು ಸ್ಥಳೀಯ ಆಡಳಿತವು ಸೂಕ್ತ ಪರಿಣತಿಯನ್ನು ಹೊಂದಿ ರಬೇಕು. ಇಂದು ನಗರ ಸ್ಥಳೀಯ ಸಂಸ್ಥೆಗಳು ಅಸಮರ್ಪಕ ಕುಶಲ ಕಾರ್ಯಪಡೆಯ ಸವಾಲು ಎದುರಿಸುತ್ತಿವೆ. ಈ ಸವಾಲುಗಳನ್ನು ಗುರುತಿಸಿದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಅರ್ಬನ್ ಲರ್ನಿಂಗ್ ಇಂಟರ್ನ್ಶಿಪ್ ಪ್ರೋಗ್ರಾಂ’ (ಖಖೀಔಐಕ) ಪ್ರಾರಂಭಿಸಿದೆ. ಹೊಸ ಪದವೀಧರರು, ಡಿಪ್ಲೊಮಾ ಹೊಂದಿರುವವರು ಅಥವಾ ಸ್ನಾತಕೋತ್ತರ ಪದವೀಧರರಿಗೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ಮಾರ್ಟ್ ನಗರಗಳಲ್ಲಿ ನಗರ ಆಡಳಿತ ಕ್ಷೇತ್ರದಲ್ಲಿ ಇಂಟರ್ನ್ಶಿಪ್ ಅವಕಾಶಗಳನ್ನು ನೀಡಲಾಗುತ್ತದೆ. ಅಮೂಲ್ಯವಾದ ಕ್ಷೇತ್ರ ಅನುಭವವನ್ನು ಪಡೆಯುವ, ಕಲಿಯಲು ತಮ್ಮನ್ನು ಸಾಬೀತುಪಡಿಸಲು ಉತ್ಸುಕರಾಗಿರುವ ಚೈತನ್ಯಯುಕ್ತ ಯುವ ವಿದ್ಯಾರ್ಥಿಗಳಿಗೆ ಮತ್ತು ಹೊಸ ಆಲೋಚನೆಗಳನ್ನು ಪಡೆಯುವ ಯುಎಲ್‌ಬಿ ಗಳಿಗೆ ಇದು ಪರಸ್ಪರ ಗೆಲುವಿನ ಸನ್ನಿವೇಶವಾಗಿದೆ.
21ನೇ ಶತಮಾನದ ಸವಾಲುಗಳಿಗೆ ನಾಗರಿಕ ಸಮಾಜ, ಉದ್ಯಮ, ಶೈಕ್ಷಣಿಕ ಕ್ಷೇತ್ರ ಮತ್ತು ಎಲ್ಲ ಮಟ್ಟದ ಸರಕಾರಗಳ ನಡುವೆ ಸಹಭಾಗಿತ್ವ ಅಗತ್ಯವಾಗಿದೆ ಎಂಬುದನ್ನು ಕೋವಿಡ್-19 ಸಾಬೀತುಪಡಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಸ್ಮಾರ್ಟ್ ನಗರಗಳ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು (ಐಸಿಸಿಸಿಗಳು) ವಹಿಸಿದ ಪ್ರಮುಖ ಪಾತ್ರ ಈಗ ಎಲ್ಲರಿಗೂ ತಿಳಿದಿದೆ. ಈ ಐಸಿಸಿಸಿಗಳನ್ನು ಕೋವಿಡ್ ಸಮರ ಕೊಠಡಿಗಳಾಗಿ ಪರಿವರ್ತಿಸಲಾಯಿತು ಮತ್ತು ನಗರ ಆಡಳಿತಕ್ಕೆ ನಿರ್ಣಾಯಕವಾದ ನೈಜ ಸಮಯದ ಮಾಹಿತಿಯನ್ನು ಒದಗಿಸಲಾಯಿತು.
ರಾಜಕೀಯವಾಗಿ ನಿರ್ಣಾಯಕವಾದ ಪಾತ್ರ ವಹಿಸಿರುವ ಯುವ ಭಾರತೀಯರು ತಾಳ್ಮೆ ಹೊಂದಿದ್ದಾರೆ ಮತ್ತು ದೇಶವು ಈಗ ಪ್ರಗತಿಯತ್ತ ಮುನ್ನುಗ್ಗಬೇಕು ಎಂದು ಅವರು ಬಯಸಿದ್ದಾರೆ! ನಾವು ಅವರನ್ನು ನಿರಾಶೆಗೊಳಿಸಲು ಸಾಧ್ಯ ವಿಲ್ಲ ಮತ್ತು ನಾವು ಹಾಗೆ ಮಾಡುವುದೂ ಇಲ್ಲ!
ಹರ್‌ದೀಪ್ ಎಸ್ ಪುರಿ,
ಕೇಂದ್ರ ವಸತಿ ಮತ್ತು ನಗರ ವ್ಯವಹಾರ,
ನಾಗರಿಕ ವಿಮಾನ ಯಾನ, ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.