ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!
Team Udayavani, Mar 5, 2021, 7:15 AM IST
ಹೊಸದಿಲ್ಲಿ: ರಾಜಧಾನಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾದ ಮೇಲೆ ಜನರಿಗೆ ವಿವಿಐಪಿಗಳ ಓಡಾಟ, ಟ್ರಾಫಿಕ್ ಕಿರಿಕಿರಿಯ ಕಾಟ ತಪ್ಪಲಿದೆ!
ಬಹುನಿರೀಕ್ಷಿತ ಸೆಂಟ್ರಲ್ ವಿಸ್ತಾ ಯೋಜನೆಯಡಿ ಹೊಸ ಸಂಸತ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಪ್ರಧಾನಿ, ಉಪರಾಷ್ಟ್ರಪತಿ ಮತ್ತು ಸಂಸದರ ಚೇಂಬರ್
ಗಳ ಸಂಪರ್ಕಕ್ಕೆ ನೆಲದಡಿ ಪ್ರತ್ಯೇಕ ಸುರಂಗ ನಿರ್ಮಾಣ ಮಾಡಲಾಗುತ್ತದೆ.
ಈಗಿರುವ ಸೆಂಟ್ರಲ್ ವಿಸ್ತಾ ಯೋಜನೆ ಪ್ರಕಾರ, ಪ್ರಧಾನಿಯವರ ಹೊಸ ನಿವಾಸ ಮತ್ತು ಕಾರ್ಯಾಲಯವು ಸೌತ್ ಬ್ಲಾಕ್ ಕಡೆ ಇರಲಿದೆ. ಉಪರಾಷ್ಟ್ರಪತಿಗಳ ಹೊಸ ನಿವಾಸವು ನಾರ್ತ್ ಬ್ಲಾಕ್ ಕಡೆ ತಲೆಎತ್ತಲಿದೆ. ಸಂಸದರ ಚೇಂಬರ್ಗಳ ಕಟ್ಟಡವು ಹಾಲಿ ಸಾರಿಗೆ ಮತ್ತು ಶ್ರಮ ಶಕ್ತಿ ಭವನವಿರುವ ಕಡೆಯಲ್ಲಿ ನಿರ್ಮಾಣವಾಗಲಿದೆ.
ಏಕಮಾರ್ಗ :
ಮೂಲಗಳ ಪ್ರಕಾರ ಈ ಸುರಂಗಗಳು ಏಕಮಾರ್ಗವನ್ನು ಹೊಂದಿರುತ್ತವೆ. ಅಷ್ಟೇನೂ ದೊಡ್ಡದಾಗಿ ಇರುವುದಿಲ್ಲ. ಈ ಮಾರ್ಗಗಳಲ್ಲಿ ಕೇವಲ ವಿವಿಐಪಿಗಳಷ್ಟೇ ಓಡಾಡುತ್ತಾರೆ. ಇದಕ್ಕಾಗಿ ಗಾಲ್ಫ್ ಕಾರ್ಟ್ನಂಥ ವಾಹನ ಬಳಕೆ ಮಾಡಲಾಗುತ್ತದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ಸಾರಿಗೆ ಸಮಸ್ಯೆಯನ್ನು ಹೋಗಲಾಡಿಸುವುದು ಕೂಡ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸುರಂಗ ನಿರ್ಮಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ರಾಷ್ಟ್ರಪತಿ ಭವನಕ್ಕೆ ಬೇಕಿಲ್ಲ :
ಸದ್ಯ ಪ್ರಧಾನಿ ನಿವಾಸ, ಉಪರಾಷ್ಟ್ರಪತಿ ನಿವಾಸ ಮತ್ತು ಸಂಸದರ ಚೇಂಬರ್ಗಳಿಗೆ ಮಾತ್ರ ಸುರಂಗ ನಿರ್ಮಿಸಲಾಗುತ್ತಿದೆ. ಆದರೆ ರಾಷ್ಟ್ರಪತಿ ನಿವಾಸಕ್ಕೆ ಪ್ರತ್ಯೇಕ ಸುರಂಗ ಇರುವುದಿಲ್ಲ. ರಾಷ್ಟ್ರಪತಿಗಳು ಸಂಸತ್ ಭವನಕ್ಕೆ ಬರುವ ಸಂದರ್ಭಗಳು ಕಡಿಮೆ ಇರುವುದೇ ಇದಕ್ಕೆ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.