ಇರಾಕ್‌ಗೆ ಪೋಪ್ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ
Team Udayavani, Mar 5, 2021, 9:35 PM IST
ಬಾಗ್ಧಾದ್: ಯುದ್ದೋನ್ಮಾದದ ಜ್ವಾಲೆಯಲ್ಲಿ ಉರಿದುಹೋದ ಇಸ್ಲಾಂ ರಾಷ್ಟ್ರ ಇರಾಕ್ ಅನ್ನು ಕ್ರೈಸ್ತ ಸಮುದಾಯದ ನೆರವಿನಿಂದ ಮರುಕಟ್ಟಲು ಪೋಪ್ ಫ್ರಾನ್ಸಿಸ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಶುಕ್ರವಾರ ಪೋಪ್, ಇರಾಕ್‌ಗೆ ಐತಿಹಾಸಿಕ ಭೇಟಿ ನೀಡಿದ್ದಾರೆ.
ಧರ್ಮ ಸಂಘರ್ಷದ ಕಾರಣಕ್ಕೆ ಕಳೆದೆರಡು ದಶಕಗಳಲ್ಲಿ ಇರಾಕ್ನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಭಾರೀ ಕುಸಿತ ಕಂಡಿದೆ. ಪೋಪ್ ಭೇಟಿ ಮೂಲಕ ದೇಶದಲ್ಲಿ ಕ್ರೈಸ್ತರಿಗೆ ಸುರಕ್ಷಿತವಾಗಿ ನೆಲೆಸಲು ಅಭಯ ಸಿಕ್ಕಂತಾಗಿದೆ. “ಪೋಪ್ ಅವರ ಭೇಟಿಯನ್ನು ಇರಾಕಿಗಳು ತುಂಬು ಹೃದಯದಿಂದ ಸ್ವಾಗತಿಸುತ್ತಿರುವುದು, ಶಾಂತಿ ಮತ್ತು ಸಹಿಷ್ಣುತೆಯ ಸಂಕೇತ’ ಎಂದು ಇರಾಕ್ ವಿದೇಶಾಂಗ ಸಚಿವ ಫವಾದ್ ಹುಸ್ಸೇನ್ ಮೆಚ್ಚುಗೆ ಸೂಚಿಸಿದ್ದಾರೆ.
ಉಗ್ರರ ಅಟ್ಟಹಾಸ ಜೀವಂತವಿರುವ ಇರಾಕ್‌ನಲ್ಲಿ ಭಾರೀ ಭದ್ರತೆ ನಡುವೆ ಪೋಪ್ ಅವರ 3 ದಿನಗಳ ಭೇಟಿ ನಿಯೋಜನೆಗೊಂಡಿದೆ.
ವೈವಿಧ್ಯತೆ ಸ್ವೀಕರಿಸಿ: ಪೋಪ್ ಬುದ್ಧಿಮಾತು
“ಧಾರ್ಮಿಕ ಅಲ್ಪಸಂಖ್ಯಾತರ ಮೌಲ್ಯಗಳನ್ನು ಇರಾಕಿ ಪ್ರಜೆಗಳು ಗೌರವಿಸಬೇಕು. ಅಲ್ಪಸಂಖ್ಯಾತರನ್ನು ಹೊರಗಟ್ಟುವ ಬದಲು, ಅವರನ್ನು ಅಮೂಲ್ಯ ಸಂಪತ್ತು ಎಂದು ಪರಿಗಣಿಸಿ ಸಂರಕ್ಷಿಸಲು ಮುಂದಾಗಬೇಕು’- ಇದು ಪೋಪ್ ಫ್ರಾನ್ಸಿಸ್, ಇರಾಕಿಗಳಿಗೆ ಹೇಳಿದ ಬುದ್ಧಿಮಾತು!
“ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮೀರಿ ನೋಡಿದಾಗ, ಇತರ ಜನಾಂಗದ ಸದಸ್ಯರನ್ನೂ ನಮ್ಮ ಕುಟುಂಬದವರೆಂದು ಪರಿಗಣಿಸಿದಾಗ ಮಾತ್ರವೇ ರಾಷ್ಟ್ರವನ್ನು ಮರುಕಟ್ಟಲು ಸಾಧ್ಯ. ಮುಂದಿನ ಪೀಳಿಗೆ ಸುಖ-ಶಾಂತಿಯಿಂದ ಬದುಕಲೂ ಈ ನೀತಿ ಅಳವಡಿಕೆ ಅತ್ಯವಶ್ಯ’ ಎಂದು ತಿಳಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.