ಅಮೆರಿಕದಲ್ಲಿ ಭಾರತೀಯರ ಪಾರಮ್ಯ! ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ
Team Udayavani, Mar 6, 2021, 7:15 AM IST
ವಾಷಿಂಗ್ಟನ್: ಅಮೆರಿಕವನ್ನು ಭಾರತೀಯ ಮೂಲದ ಅಮೆರಿಕನ್ನರೇ ಹೆಚ್ಚು ಆಳುತ್ತಿದ್ದಾರೆ… ನಿಜಕ್ಕೂ ನೀವೆಲ್ಲ ಅಸಾಧಾರಣ ವ್ಯಕ್ತಿಗಳು!
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಭಾರತೀಯ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಹುರಿದುಂಬಿಸಿದ ಪರಿ ಇದು. ಮಂಗಳನ ಅಂಗಳದಲ್ಲಿ ನಾಸಾದ ಪರ್ಸಿವಿಯರೆನ್ಸ್ ರೋವರನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಶ್ರಮಿಸಿದ ಡಾ| ಸ್ವಾತಿ ಮೋಹನ್ ಮತ್ತು ತಂಡವನ್ನು ವರ್ಚುವಲ್ ಸಂವಾದದಲ್ಲಿ ಅಭಿನಂದಿಸಿದ ಬೈಡೆನ್, ಅಮೆರಿಕದ ಆಯಕಟ್ಟಿನ ಹುದ್ದೆಗಳಲ್ಲಿ ಭಾರತೀಯರೇ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಲೂ ಕನಸಿನಲ್ಲಿದ್ದೇನೆ: ಸ್ವಾತಿ
“ನಾನು ಈಗಲೂ ಕನಸಿನಲ್ಲೇ ಇದ್ದೇನೆ. ನಾವು ಒಗ್ಗಟ್ಟಾಗಿ ಮಹಾನ್ ಗುರಿ ತಲುಪಿದಾಗ ನಮ್ಮ ಫಲಿತಾಂಶ ನೋಡಿ ಅಚ್ಚರಿಯಾಗುತ್ತಿದೆ’ ಎಂದು ಡಾ| ಸ್ವಾತಿ ಮೋಹನ್ ಟ್ವೀಟ್ ಮಾಡಿ, ಬೈಡೆನ್ ಜತೆಗಿನ ಸಂವಾದದ ವೀಡಿಯೋ ಹಂಚಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷರ ಮುಂದೆ ಬೆಂಗಳೂರು ಮೂಲದ ಸ್ವಾತಿ ತಮ್ಮ ಬಾಹ್ಯಾಕಾಶ ವಿಜ್ಞಾನ ಲೋಕ ಪಯಣದ ಕಥೆಯನ್ನೂ ಹೇಳಿಕೊಂಡಿದ್ದಾರೆ. “ಜನಪ್ರಿಯ ಟಿವಿ ಶೋ ಸ್ಟಾರ್ ಟ್ರೆಕ್ ವೀಕ್ಷಿಸುತ್ತ ಬಾಹ್ಯಾಕಾಶ ವಿಜ್ಞಾನದೆಡೆ ಕುತೂಹಲ ಬೆಳೆಯಿತು. ಅಂದು ವೀಕ್ಷಿಸಿದ ದೃಶ್ಯಗಳು ನನ್ನೊಳಗಿವೆ. ಪ್ರಸ್ತುತ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತ, ನಿತ್ಯ ಹೊಸತನ್ನು ಕಲಿಯುತ್ತಿದ್ದೇನೆ’ ಎಂದು ತಿಳಿಸಿದರು.
ಥ್ಯಾಂಕ್ಯೂ ಇಂಡಿಯನ್ಸ್
“ಭಾರತೀಯ ಮೂಲದ ಅಮೆರಿಕನ್ನರೇ ಇಲ್ಲಿ ಹೆಚ್ಚಿನ ಹುದ್ದೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನೀವು (ಡಾ| ಸ್ವಾತಿ), ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್), ನನ್ನ ಭಾಷಣ ರಚನೆಕಾರ ವಿನಯ್ ರೆಡ್ಡಿ… ನಾನು ಏನು ಹೇಳಲಿ! ನಿಮಗೆಲ್ಲ ತುಂಬು ಧನ್ಯವಾದಗಳು. ನೀವೆಲ್ಲ ನಿಜಕ್ಕೂ ಅಸಾಧಾರಣ ವ್ಯಕ್ತಿಗಳು’ ಎಂದು ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.