ಭೂಸ್ವಾಧೀನ ಪ್ರಕ್ರಿಯೆ ನಡೆಸಿ: ಸಂಸದ ಮನವಿ
Team Udayavani, Mar 6, 2021, 2:52 PM IST
ಮೈಸೂರು: ಮೈಸೂರು ಭಾಗದ ಹಲವು ಕಾಮಗಾರಿಗಳು ಕೇಂದ್ರದಿಂದ ಅನುಮೋದನೆ ಪಡೆದರೂ ಭೂಸ್ವಾಧೀನ ಪ್ರಕ್ರಿಯೆ ನಡೆಯದೆ ನನೆಗುದಿಗೆ ಬಿದ್ದಿವೆ. ಈ ಬಾರಿಯರಾಜ್ಯ ಬಜೆಟ್‌ನಲ್ಲಿ ಭೂಸ್ವಾಧೀನ ನಡೆಸುವಂತೆಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆಮಾತನಾಡಿ,ಮೈಸೂರು-ಕುಶಾಲನಗರರೈಲ್ವೇ ಮಾರ್ಗ, ನಾಗನಹಳ್ಳಿ ಸ್ಯಾಟಲೈಟ್ ರೈಲು ನಿಲ್ದಾಣಕ್ಕೆಅನುಮೋದನೆ ನೀಡಿ 2 ವರ್ಷಗಳಾಗಿವೆ. ವಿಮಾನ ನಿಲ್ದಾಣ ಅಂಡರ್‌ಪಾಸ್ ನಿರ್ಮಾಣ, ರನ್ ವೇ ವಿಸ್ತರಣೆಗೆ
ಅನುಮೋದನೆ ದೊರೆತು 3 ವರ್ಷಗಳಾದರೂ, ಈ ಮೂರೂ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಈವರೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಇಷ್ಟೂ ಕಾಮಗಾರಿಗಳಿಗೆ ಭೂಸ್ವಾಧೀನ ಮಾಡಿಕೊಡಲು, ಮೈಸೂರಿಗೆ ಪ್ರತ್ಯೇಕ ಒಳಚರಂಡಿ ಹಾಗೂ ನೀರು ಸರಬರಾಜು ಸಂಸ್ಥೆಸ್ಥಾಪನೆಯಾಗಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಕ್ರೈಸ್ತಧರ್ಮಕ್ಕೆ ಮತಾಂತರವಾದ ದಲಿತರಿಗೆ ಮೀಸಲಾತಿ ನೀಡಬಾರದು ಎಂದು ಕಳೆದ ಜಿಪಂ ದಿಶಾ ಸಭೆಯಲ್ಲಿನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬುಡಕಟ್ಟು ಜನರು ಕಾಡಿನ ದೇವತೆಗಳನ್ನು ಪೂಜಿಸುತ್ತಾ, ನಾಗರಿಕ ಸಮಾಜದಿಂದ ದೂರವಿರುವವರು. ವಿಶಿಷ್ಟ ಸಂಸ್ಕೃತಿ, ಭಾಷೆ, ಆಚಾರ-ವಿಚಾರ ಅನುಸರಿಸುತ್ತಾರೆ ಎಂಬ ಕಾರಣದಿಂದಲೇ ಅವರಿಗೆ ಮೀಸಲಾತಿ ನೀಡುವುದು. ಅವರಿಗೆ ಏಸುವನ್ನು ದೇವರೆಂದು ಒಪ್ಪಿಕೊಳ್ಳುವಷ್ಟು ವಿವೇಚನೆ ಬಂದ ನಂತರ ಮೀಸಲಾತಿ ಅವಶ್ಯಕತೆ ಇಲ್ಲ ಎಂದರು.
ಆಮಿಷಗಳಿಗೆ ಒಳಗಾಗಿ ಮತಾಂತರವಾಗುವವರನ್ನು ತಡೆಯಬೇಕು,ಎಲ್ಲರೂ ಹೇಳುವ ಪ್ರಕಾರ ಕ್ರೈಸ್ತರಲ್ಲಿ, ಮುಸಲ್ಮಾನರಲ್ಲಿ ಜಾತಿ ಪದ್ಧತಿ ಇಲ್ಲ. ಈ ರೀತಿ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಆದ್ದರಿಂದ ಹಿಂದೂ ಧರ್ಮದಲ್ಲಿ ಇರುವವರಿಗೆ ಮಾತ್ರ ಅವರಿಗೆ ಮೀಸಲಾತಿ ನೀಡಲು ಸಾಧ್ಯ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.