ಕಸ ಸಂಗ್ರಹಕ್ಕೆ ಬೀದಿಗಿಳಿದ ಅಧ್ಯಕ್ಷರು
Team Udayavani, Mar 6, 2021, 3:49 PM IST
ಮಾಲೂರು: ಪಟ್ಟಣ ಪ್ರದೇಶದಲ್ಲಿ ಕಸದ ವಿಲೇವಾರಿ ದಿನದಿಂದ ದಿನಕ್ಕೆ ಜಠಿಲವಾಗು ತ್ತಿದ್ದು, ಪುರಸಭೆ ರೂಪಿಸುತ್ತಿರುವ ಕಾರ್ಯ ಕ್ರಮ ಗಳಿಂದಲೂ ನಿರ್ವಹಣೆ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಪುರಸಭೆಯ ಅಧ್ಯಕ್ಷ ಎನ್.ವಿ.ಮುರಳೀಧರ ಅವರೇ ಆಟೋ ಟಿಪ್ಪರ್‌ನೊಂದಿಗೆ ಪೇಟೆಯ ಬೀದಿ ಗಳಲ್ಲಿ ಕಸ ಸಂಗ್ರಹಕ್ಕೆ ರಸ್ತೆಗಿಳಿದ ಪ್ರಸಂಗ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ಪೇಟೆ ಬೀದಿಗಳಲ್ಲಿನ ಅಂಗಡಿಗಳು ಮತ್ತು ಫುಟ್‌ಪಾತ್ ಅಂಗಡಿಗಳ ಮಾಲೀಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚುವ ವೇಳೆಗೆ ದಿನದಲ್ಲಿ ತಮ್ಮ ತಮ್ಮ ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ರಸ್ತೆಗೆ ಸುರಿದು ಬೀಗ ಹಾಕಿಕೊಂಡು ಹೋಗುವ ವಾಡಿಕೆ ಸಾಮಾನ್ಯವಾಗಿದೆ. ಪುರಸಭೆಯಿಂದ ಅನೇಕ ಬಾರಿ ಮಾಹಿತಿ ನೀಡಿ ಉಚಿತವಾಗಿ ಕಸ ಸಂಗ್ರಹಣೆ ಡಬ್ಬಗಳನ್ನು ಕೊಟ್ಟ ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ಬೆಳಗ್ಗೆ ಸಂಜೆ ರಾತ್ರಿ ಬರುವ ಪುರಸಭೆಯ ಆಟೋಟಿಪ್ಪರ್‌ಗೆ ಹಾಕುವಂತೆ ಮಾಡಿದ ಮನವಿಗಳು ವಿಫಲವಾದ ಕಾರಣಗಳಿಂದ ಗುರು ವಾರ ರಾತ್ರಿ 8ರ ಸುಮಾರಿಗೆ ಪುರಸಭೆಅಧ್ಯಕ್ಷ ಎನ್.ವಿ.ಮುರಳೀಧರ ಅವರೇ ನೇರವಾಗಿ ಟಿಪ್ಪರ್‌ನೊಂದಿಗೆ ಕೈಯಲ್ಲಿ ಲೌಡ್‌ಸ್ಪೀಕರ್ ಹಿಡಿದು ಕಸ ಸಂಗ್ರಹಕ್ಕೆ ಮುಂದಾದರು.
ರಸ್ತೆಯ ಮೇಲಿದ್ದ ಫುಟ್‌ಪಾತ್ ಅಂಗಡಿಗಳನ್ನು ಹಿಂದೆ ಸರಿಸುವ ಕೆಲಸ ಮಾಡಿದರು. ಪ್ರತಿನಿತ್ಯ ದಿನದಲ್ಲಿ ಮೂರು ಬಾರಿ ಪೇಟೆ ಬೀದಿಯಲ್ಲಿ ಪುರಸಭೆಯ ಆಟೋ ಟಿಪ್ಪರ್ ಗಳಲ್ಲಿ ಕಸ ಸಂಗ್ರಹ ಕೆಲಸವಾಗಲಿದ್ದು,ಅಂಗಡಿಗಳ ಮಾಲೀಕರು ಕಸವನ್ನು ಪುರಸಭೆ ವಾಹನಗಳಿಗೆ ಹಾಕುವಂತೆ ಮನವಿ ಮಾಡಿದರು.
ಈ ಹಿಂದೆ ಅಧ್ಯಕ್ಷ ಎನ್ .ವಿ.ಮುರಳೀಧರ ನಡೆಸಿದ ಪ್ಲಾಸ್ಟಿಕ್‌ನಿಯಂತ್ರಣ ಅಂದೋಲನ ಸಾಕಷ್ಟುಪ್ರಮಾಣದಲ್ಲಿ ಯಶಸ್ವಿಯಾಗಿದ್ದು, ಪ್ರಸ್ತುತಕಸ ಸಂಗ್ರಹಣಾ ಜಾಗೃತಿಯೂ ಸಹಕಾರಿಯಾಗುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.