ಬ್ಯಾಡಗಿಯಲ್ಲಿ ಶೀಘ್ರ ಕಬಡ್ಡಿ ವಸತಿ ಕ್ರೀಡಾಶಾಲೆ
Team Udayavani, Mar 6, 2021, 6:49 PM IST
ಬ್ಯಾಡಗಿ: ಪಟ್ಟಣದಲ್ಲಿ ಶೀಘ್ರದಲ್ಲೇ ಕಬಡ್ಡಿ ವಸತಿ ಕ್ರೀಡಾಶಾಲೆ ಆರಂಭಿಸಲಾಗುವುದು ಎಂದುಹಿರಿಯ ಕಬಡ್ಡಿ ಕ್ರೀಡಾಪಟು ಹಾಗೂ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಖಜಾಂಚಿ ಗಂಗಣ್ಣ ಕಬಡ್ಡಿ ಹೇಳಿದರು.
ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಜ್ಯೂನಿಯರ್ ಬಾಲಕ-ಬಾಲಕಿಯರ ಕಬಡ್ಡಿ ತಂಡದ ಆಯ್ಕೆ ಹಿನ್ನೆಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ಆಯ್ಕೆ ಟ್ರಯಲ್ಸ್ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು. ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿಅಸೋಸಿಯೇಶನ್ ಸಂಸ್ಥೆಯಡಿ ಸುಮಾರು140ಕ್ಕೂ ಹೆಚ್ಚು ಕಬಡ್ಡಿ ಕ್ರೀಡಾಪಟುಗಳಿಗೆಉದ್ಯೋಗ ದೊರೆತಿದೆ. ಅಲ್ಲದೇ, 280 ಕ್ಕೂ ಅಧಿಕ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.
ಗ್ರಾಮೀಣ ಕ್ರೀಡೆಗಳ ಉತ್ತೇಜನ ಅವಶ್ಯ:
ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಯ ಉತ್ತೇಜನಕ್ಕೆ ಸರಕಾರಗಳೂ ಹೆಚ್ಚಿನ ಒತ್ತು ನೀಡಬೇಕಿದೆ. ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡಾಪಟುಗಳಿಗಾಗಿ,ಸಂಸ್ಥೆ ವಯಿತಿಂದ ಹತ್ತು ಹಲವು ಕ್ರೀಡಾಚಟುವಟಿಕೆಗಳನ್ನ ಹಮ್ಮಿಕೊಳ್ಳಲಾಗುತ್ತಿದೆ. ಇದರ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.
5 ಲಕ್ಷ ರೂ. ಕ್ರೀಡಾ ನಿಧಿ : ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ತಾಲೂಕಿನಪ್ರತಿಭಾವಂತ ಕ್ರೀಡಾಪಟುಗಳು ಹಾಗೂ ಕ್ರೀಡಾ ಚಟುವಟಿಕೆಗಳಿಗಾಗಿ ಪುರಸಭೆ ವತಿಯಿಂದ 5 ಲಕ್ಷ ರೂ. ಕ್ರೀಡಾ ನಿಧಿ ಮೀಸಲಿಡಲಾಗಿದೆ ಎಂದರು.ವದಂತಿಗೆ ಕಿವಿಗೊಡದಿರಿ: ಪ್ರಾಸ್ತಾವಿಕವಾಗಿಮಾತನಾಡಿದ ಕಾರ್ಯದರ್ಶಿ ಶಿವಾನಂದಮಲ್ಲನಗೌಡರ, ಸಂಸ್ಥೆಯ ವಿರುದ್ಧ ಕೆಲ ಪಟ್ಟ ಭದ್ರಹಿತಾಸಕ್ತಿಗಳು ಸುಳ್ಳು ವದಂತಿ ಹಾಗೂ ಇಲ್ಲಸಲ್ಲದಆರೋಪ ಮಾಡಿತ್ತಿದ್ದಾರೆ. ಜಿಲ್ಲೆಯ ಯಾವುದೇಕ್ರೀಡಾಪಟುಗಳು ಇದಕ್ಕೆ ಕಿವಿಗೊಡದಂತೆ ಮನವಿ ಮಾಡಿದರು.
ಟ್ರಯಲ್ಸ್‌ನಲ್ಲಿ ಸಿ.ಜಿ.ಚಕ್ರಸಾಲಿ, ಬಿ.ಎಚ್. ಎನ್.ರಾವಳ, ಶಿವಣ್ಣ ಜಂಗರೆಡ್ಡೆರ, ಮಾರುತಿ ಚೌಹಾಣ, ಜಿನ್ನಾ ಹಲಗೇರಿ, ಬಸವ ರಾಜಪ್ಪ,ಬಿ.ಎರ್.ಹುಲ್ಮನಿ, ಎಂ.ಆರ್.ಕೋಡಿಗಳ್ಳಿ,ಎ.ಟಿ.ಪೀಠದ, ಬಿ.ಸಿ.ದಾನಗಲ್, ಬಸವರಾಜಹೊಸಪೇಟಿ, ಎನ್.ವೀರೇಶ, ಎಸ್. ಎಂ.ಸೋಮನಹಳ್ಳಿ, ಎಂ.ಕೆ ಹೊಸಮನಿ,ವಿನಾಯಕ ಗಡಾದ, ಮಂಜುಳಾ ಭಜಂತ್ರಿ, ಎಪಿಎಂಸಿ ನಿರ್ದೇಶಕ ವಿಜಯಕುಮಾರ ಮಾಳಗಿ,ಪುರಸಭೆ ಸದಸ್ಯರಾದ ಈರಣ್ಣ ಬಣಕಾರ, ಹನುಮಂತ ಮ್ಯಾಗೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.