74 ವರ್ಷ ಬಳಿಕ ಸರ್ಕಾರಿ ಬಸ್ ಭಾಗ್ಯ!
ಕಣಕುಪ್ಪೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ! ತಳಿರು ತೋರಣದಿಂದ ಸಿಂಗರಿಸಿ, ಪೂಜೆ ಸಲ್ಲಿಕೆ
Team Udayavani, Mar 6, 2021, 6:51 PM IST
ಮಳಕಾಲ್ಮೂರು: ಸ್ವಾತಂತ್ರ್ಯಬಂದು 74 ವರ್ಷಗಳ ನಂತರ ತಾಲೂಕಿನ ಗಡಿಗ್ರಾಮ ಕಣಕುಪ್ಪೆ ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ.
ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ವಾಸ್ತವ್ಯ ಮಾಡಿದ್ದ ಮೊಳಕಾಲ್ಮುರು ತಾಲೂಕಿನ ಗಡಿಗ್ರಾಮ ಕಣಕುಪ್ಪೆ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಮೊಳಕಾಲ್ಮೂರು ತಹಶೀಲ್ದಾರ್ ಹಾಗೂ ಪ್ರೊಬೇಷನರಿ ಎ.ಸಿ ಮಾರುತಿ ಬ್ಯಾಕೋಡ್ ಅವರು ಶುಕ್ರವಾರ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡಿದ್ದ ವೇಳೆ ಗ್ರಾಮಸ್ಥರು ಬಸ್ ಸಂಪರ್ಕ ಕಲ್ಪಿಸಲು ಮನವಿ ಮಾಡಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾರ್ಚ್ ತಿಂಗಳಿಂದ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಈಗ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಬೇಡಿಕೆ ಈಡೇರಿಸಿದ್ದಾರೆ.
ಕಣಕುಪ್ಪೆಯಿಂದ ಬಳ್ಳಾರಿಗೆ ಬಸ್: ಜಿಲ್ಲೆಯ ಗಡಿಭಾಗ ಕಣಕುಪ್ಪೆ ಗ್ರಾಮದಿಂದ ಡಿ.ಹಿರೇಹಾಳ್, ಓಬಳಾಪುರಂ, ರಾಯದುರ್ಗ ಚೆಕ್‌ಪೋಸ್ಟ್, ಹಲಕುಂದಿ, ಮುಂಡರಗಿ ಮಾರ್ಗವಾಗಿ ಬಸ್ ಬಳ್ಳಾರಿ ತಲುಪಲಿದೆ. ವಿದ್ಯಾರ್ಥಿಗಳ, ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಪ್ರತಿ ನಿತ್ಯವೂ ಮುಂಜಾನೆ ಹಾಗೂ ಮಧ್ಯಾಹ್ನದ ವೇಳೆ ಎರಡು ಬಾರಿ ಬಸ್ ಸಂಚಾರ ಮಾಡಲಿದೆ. ಕಣಕುಪ್ಪೆ ಗ್ರಾಮಕ್ಕೆ ಯಾವುದೇ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಈಗ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಾರ್ಚ್ 5ರಂದು ಗ್ರಾಮಕ್ಕೆ ಬಂದ ಬಸ್‌ಗೆ ತಳಿರು ತೋರಣಗಳಿಂದ ಸಿಂಗರಿಸಿ, ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಕಣಕುಪ್ಪೆ ಗ್ರಾಮದಿಂದ ಬಳ್ಳಾರಿಗೆ ಸಂಚರಿಸಲಿರುವ ಸರ್ಕಾರಿ ಬಸ್‌ಗೆ ಚಾಲನೆ ನೀಡಿ ಪ್ರಭಾರಿ ತಹಶೀಲ್ದಾರ್ ಮಾರುತಿ ಮಾತನಾಡಿ, ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳ ಅನುಕೂಲತೆಗಾಗಿ ಕಲ್ಪಿಸಿರುವ ಸರ್ಕಾರಿ ಬಸ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮೊಳಕಾಲ್ಮೂರು ತಹಶೀಲ್ದಾರ್ ಹಾಗೂ ಪ್ರೊಬೇಷನರಿ ಎ.ಸಿ ಮಾರುತಿ ಬ್ಯಾಕೋಡ್, ಡಿಪೋ ಮ್ಯಾನೇಜರ್ ಶಿವಪ್ರಕಾಶ್, ಟಿ.ಸಿ. ಯರ್ರಿಸ್ವಾಮಿ, ಕಂದಾಯ ನಿರೀಕ್ಷಕ ಗೋಪಾಲ್, ಗ್ರಾಮ ಲೆಕ್ಕಾ ಧಿಕಾರಿ ಶ್ರೀನಿವಾಸ್ ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಪ್ಪ, ಮಾಜಿ ಸದಸ್ಯ ಸಣ್ಣಜೋಗಪ್ಪ, ಕಣಕುಪ್ಪೆ ಗ್ರಾಮದ ಮುಖಂಡರಾದ ನರಸಣ್ಣ, ನಾಗರಾರ್ಜುನ, ರಾಜಾ, ಸಣ್ಣಜೋಗಪ್ಪ ಹಾಗೂ ಗ್ರಾಮಸ್ಥರು, ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.