ನಟನೆಯಲ್ಲಿ ಬಾಲಿವುಡ್ ಮೀರಿಸುವ ರಂಗ ಕಲಾವಿದರು: ಡಾ| ಎಚ್.ಎಸ್. ಬಲ್ಲಾಳ್
Team Udayavani, Mar 7, 2021, 5:45 AM IST
ಉಡುಪಿ: ರಂಗಭೂಮಿ ಕಲಾವಿದರ ಅಭಿನಯ ಸಾಮರ್ಥ್ಯ ಬಾಲಿವುಡ್ ಕಲಾವಿದರಿಗಿಂತ ಉತ್ತಮವಾಗಿದೆ ಎಂದು ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಶನಿವಾರ ಇಂದ್ರಾಳಿ ಶಿವಪ್ರಭಾ ಯಕ್ಷಗಾನ ಕೇಂದ್ರದ ಸುವರ್ಣ ಮಹೋತ್ಸವದ ಪ್ರಯುಕ್ತ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರಿಗೆ ಮತ್ತು ರಂಗಕರ್ಮಿಗಳಿಗೆ ಉಚಿತ ಯಕ್ಷಗಾನ ಕಮ್ಮಟ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗಿರೀಶ್ ಕಾರ್ನಾಡ್, ಓಂಪುರಿ ಅಂತಹ ಶ್ರೇಷ್ಠ ಕಲಾವಿದರು ರಂಗಭೂಮಿಯ ಮೂಲಕ ಬೆಳೆದು ಬಂದವರು. ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಯಾವುದೇ ಒಂದು ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಯಾವುದೇ ಬಾರಿಗೆ ಮುಗಿಸುವ ಸಾಮರ್ಥ್ಯ ರಂಗಭೂಮಿ ಕಲಾವಿದರಿಗೆ ಇದೆ. ಇದಕ್ಕೆ ಮುಖ್ಯ ಕಾರಣ ವಿದ್ಯೆ ಹೇಳಿಕೊಟ್ಟ ಗುರುಗಳು ಎಂದು ಹೇಳಿದರು.
ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್, ಕೆಎಂಸಿ ನಿವೃತ್ತ ಡೀನ್ ಡಾ| ಪಿ.ಎಲ್.ಎನ್. ರಾವ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ, ಕೇಂದ್ರದ ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು.
ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮ್ಮಟದಲ್ಲಿ ದಿಲ್ಲಿ, ಮಹಾರಾಷ್ಟ್ರ, ಜೈಪುರ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 18 ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಿದರು.
ಯಕ್ಷಗಾನ ಕಮ್ಮಟ ಮಾ.10 ವರೆಗೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಯುವ ಕಲಾವಿದರು ಯಕ್ಷಗಾನ ಕಲೆಯ ರಾಯಭಾರಿಗಳು
ಕರಾವಳಿ ಜಿಲ್ಲೆಗೆ ಸೀಮಿತವಾಗಿರುವ ಯಕ್ಷಗಾನ ಕಲೆ ಎಲ್ಲೆಡೆ ಹರಡಬೇಕೆಂಬ ದೃಷ್ಟಿಯಿಂದ ಮಾಹೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯಕ್ಷಗಾನ ಕಮ್ಮಟದಲ್ಲಿ ಭಾಗವಹಿಸಿದ ಯುವ ಕಲಾವಿದರು ಯಕ್ಷಗಾನ ಕಲೆಯ ರಾಯಭಾರಿಗಳು. ಇಲ್ಲಿ ಕಲಿತ ವಿದ್ಯೆಯನ್ನು ನಿಮ್ಮ ರಾಜ್ಯಕ್ಕೆ ತೆರಳಿ ಅಲ್ಲಿಯೂ ಪ್ರದರ್ಶನ ನೀಡಬೇಕು. ಜತೆಗೆ ಯಕ್ಷಗಾನ ಕಲೆ ಮಹತ್ವವನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಮುಂದಿನ ದಿನದಲ್ಲಿ ಆಸ್ತಕರಿಗೆ ಯಕ್ಷಗಾನದಲ್ಲಿ ಹೆಚ್ಚಿನ ತರಬೇತಿಯನ್ನು ನೀಡಲಾಗುತ್ತದೆ ಎಂದು ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.