ಕಾವ್ಯ ಬರೆದ ಭಟ್ಟರು ಕ್ಯಾಸೆಟ್ಟೂ ಮಾರಿದ್ದ ಕಥೆ!


Team Udayavani, Mar 7, 2021, 12:07 PM IST

na-laxmi

ಕಾವ್ಯ ಕೃಷಿಯ ಜೊತೆ ಜೊತೆಗೆ ಸುಗಮಸಂಗೀತಕ್ಕೆ ನೆಲೆಯೊದಗಿಸುತ್ತಾ ಬಂದವರಲ್ಲಿ ಡಾ. ಎನ್‌.ಎಸ್‌. ಎಲ್. ಪ್ರಮುಖರು. ಅವರ ಆಪ್ತವಲಯದಲ್ಲಿ ಒಬ್ಬನಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಅವರೊಂದಿಗೆ ಕಳೆದ ಮಧುರ ಕ್ಷಣಗಳು ಹಾಗೂ ಅವರಲ್ಲಿದ್ದ ಶ್ರೇಷ್ಠ ಗುಣಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ನನ್ನದು.

ಇಂದಿನ ದಿನಗಳಲ್ಲಿ ನಾವುಗಳು ಒಂದು ಗೀತೆಯನ್ನು ಬೆಳೆಸಲು ಯೂಟ್ಯೂಬ್, ಫೇಸ್‌ಬು ಕ್‌, ಟ್ವಿಟರ್‌, ವಾಟ್ಸ್ ಆ್ಯಪ್‌ ಹೀಗೆ ಸಿಕ್ಕ ಸಿಕ್ಕ ಕಡೆ ಹಾಡನ್ನು ಹಾಕಿ ತಿಣುಕಾಡುತ್ತಿದ್ದೇವೆ. ಬರೀ ಕ್ಯಾಸೆಟ್‌ ಹಾಗೂ ರೇಡಿಯೋ ಇದ್ದ ಕಾಲದಲ್ಲಿ ಭಟ್ಟರು ಜನಗಳಿಗೆ ಹಾಡುಗಳನ್ನು ತಲುಪಿಸುತ್ತಿದ್ದ ರೀತಿಗೆ ಹಾಗೂ ಅವರ ಸರಳತನಕ್ಕೆ ಬೆರಗಾಗಿದ್ದೆ! ಅಂದು ಬಹು ಬೇಡಿಕೆಯ ಕವಿಯಾಗಿ ಹೆಸರಾಗಿದ್ದರೂ ಸಹ ತಾವೇ ಒಂದು ಸೂಟ್‌ಕೇ ಸ್‌ ನಲ್ಲಿ ಕ್ಯಾಸೆಟ್‌ಗಳನ್ನು ತುಂಬಿಕೊಂಡು ತಮ್ಮ ಭಾಷಣ ಮುಗಿಸಿ ಕೆಳಗಿಳಿದು ಬಂದು ಸೂ ಟ್‌ ಕೇಸ್‌ ತೆರೆದು ಕ್ಯಾಸೆಟ್‌ ಮಾರುತ್ತಿದ್ದರು. ಭಾವಗೀತೆಗಳ ಮಹತ್ವ ನಾಡಿಗೆ ತಿಳಿಯಬೇಕು ಎಂಬುದಷ್ಟೇ ಅವರ ಕಾಳಜಿಯಾಗಿತ್ತು.

ಸಮಯಪ್ರಜ್ಞೆಗೆ ಹಾಗೂ ಶಿಸ್ತಿಗೆ ಪ್ರಾಮುಖ್ಯತೆ ನೀಡುತ್ತಿದ್ದ ಭಟ್ಟರು, ಒಂದು ಪುಸ್ತಕವಾಗಲಿ, ಒಂದು ಕ್ಯಾಸೆಟ್‌ ಆಗಲಿ ಅದರ ಆರಂಭದಿಂದ ಬಿಡುಗಡೆಯ ದಿನದವರೆಗೂ ತಾವೇ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದರು. ಒಂದು ಸಣ್ಣ ತಪ್ಪಾದರೂ ಸಹಿಸುತ್ತಿರಲಿಲ್ಲ. ಅಲ್ಲದೇ, ಅಷ್ಟು ಸುಲಭವಾಗಿ ಯಾರನ್ನೂ ಒಪ್ಪುತ್ತಿರಲಿಲ್ಲ. ಕೆಲವೊಮ್ಮೆ ನಮಗೆ ಒಂದು ಕೆಲಸ ಕೊಟ್ಟು ಇದನ್ನು ಅಲ್ಲಿಗೆ ಇದೇ ಸಮಯಕ್ಕೆ ತಲುಪಿಸು ಎಂದು ಹೇಳಿ, ನಮ್ಮನ್ನು ಕಳುಹಿಸಿದ ನಂತರದಲ್ಲಿ ತಲುಪಬೇಕಿದ್ದ ವ್ಯಕ್ತಿಗೆ ಫೋನಾಯಿಸಿ, ನಾನು ಕಳಿಸಿದ ವಸ್ತು ಬಂದಿತೇ ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಯಾವುದೇ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ರೀತಿಗೆ ಇದೊಂದು ಉದಾಹರಣೆಯಷ್ಟೇ.

ಭಟ್ಟರನ್ನು ಭೇಟಿ ಮಾಡುವ ಸಂದರ್ಭವೂ  ವಿಶೇಷವಾಗಿರುತ್ತಿತ್ತು. ನಮ್ಮನ್ನು ಕಂಡಾಗ ಬರಮಾಡಿಕೊಂಡು, ಮೊದಲು ತಾವು ತಮ್ಮ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದ ನೋವು-ನಿರಾಸೆಗಳ ಕಥಾ ಹಂದರವನ್ನೇ ತೆರೆದಿಡುತ್ತಿದ್ದರು. ಅವರು ವಾರಾನ್ನ ತಿಂದು ಬೆಳೆದ ರೀತಿ, ಶಿವಮೊಗ್ಗದಲ್ಲಿ ಪ್ರವಾಹ ಬಂದ ಸಂದರ್ಭ, ಅವರ ನೆಚ್ಚಿನ ಕವಿಗಳ ಒಡನಾಟ, ಭಾವಗೀತೆಗಳುಬೆಳೆದ ರೀತಿ, ಅದರ ಹಿಂದಿನ ಸಂಕಟ, ಪ್ರಸ್ತುತ ಪ್ರಸಂಗಗಳು… ಹೀಗೆ ಒಂದೇ ಎರಡೇ, ಹಲವಾರು ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ, ಯಾವಾಗಲೋ ಒಮ್ಮೆ ನಮ್ಮ ಕಡೆತಿರುಗಿ ಏನು ಈ ಕಡೆ ಬಂದದ್ದು ಎನ್ನುತ್ತಿದ್ದರು. ಆ ಕ್ಷಣ ನಮಗೆ ಅವರಿಂದ ಆಗಬೇಕಿದ್ದ ಕೆಲಸವೇ ಮರೆತು ಹೋಗಿ ವಾಪಸ್ಸು ಬಂದ ಸಂದರ್ಭಗಳೇ ಜಾಸ್ತಿ ಇರುತ್ತಿತ್ತು. ಅಂದು ಅವರಾಡುತ್ತಿದ್ದ ಮಾತುಗಳು ನಮಗೆ ದಾರಿ ದೀಪವೂ ಆಗಿದೆ. ಭಟ್ಟರು ಹಲವು ಕಲಾವಿದರನ್ನು ಬೆಳೆಸಿದ್ದಾರೆ. ಇಂದು ಅವರೇ ಬರೆದ ಈ ಕವಿತೆ ಬಹುವಾಗಿ ಕಾಡುತ್ತಿದೆ.

“ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ’

ಮಕ್ಕಳ ಮನಸ್ಸಿನಲ್ಲೂ ಜಾಗ ಹಿಡಿದ ಜಾಣ…

ಮನೆಯಲ್ಲಿ ಬಡತನವಿದ್ದ ಕಾರಣದಿಂದ ಹಿರಿಯರಾದ ತ.ಸು. ಶಾಮರಾಯರ ಮನೆಯಲ್ಲಿ ವಾರಾನ್ನದ ವಿದ್ಯಾರ್ಥಿಯಾಗಿದ್ದುಕೊಂಡು ಎಂ.ಎ. ಓದಿದವರು ಲಕ್ಷ್ಮೀ ನಾರಾಯಣ ಭಟ್ಟ. ಮುಂದೆ ಅವರು ಶ್ರೇಷ್ಠ ಅಧ್ಯಾಪಕ, ವಾಗ್ಮಿ, ವಿಮರ್ಶಕ, ಹೆಸರಾಂತ ಕವಿ ಎಂದೆ ಹೆಸರು ಮಾಡಿದರು. ಭಟ್ಟರಿಗೆ 60 ವರ್ಷಗಳು ತುಂಬಿದಾಗ ಅವರ ಶಿಷ್ಯರು, ಅಭಿಮಾನಿಗಳು ಸೇರಿ “ನೀಲಾಂಜನ’ ಹೆಸರಿನ ಅಭಿನಂದನಾ ಗ್ರಂಥವನ್ನು ಅರ್ಪಿಸಿದರು. ಅದರಲ್ಲಿ ತಮ್ಮ ಶಿಷ್ಯನ ಬೆಳವಣಿಗೆಯನ್ನು ಕಂಡು ಶಾಮರಾಯರು ಅಭಿಮಾನದಿಂದ ಬರೆದಿದ್ದ ಮಾತುಗಳಿವು: “..ಭಟ್ಟ ತನ್ನ ಯೋಗ್ಯತೆಗೆ ಅರ್ಹವಾದ ಪದವಿಯನ್ನೆಲ್ಲ ಪಡೆದ. ಅಧ್ಯಾಪಕನಾದ, ಪ್ರಾಧ್ಯಾಪಕನಾದ, ಕನ್ನಡ ವಿಭಾಗದ ನಿರ್ದೆಶಕನಾದ, ಹುಡುಗರಿಗೆಲ್ಲ ಮೆಚ್ಚಿನ ಗುರುವಾದ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಒಳಗಿನ ಶಕ್ತಿಯನ್ನು ಬರೆಹದಲ್ಲಿ ಎಲ್ಲರೂ ಮೆಚ್ಚುವ ಹಾಗೆ ಹೊರಹಾಕಿದ. ಅವನ ಕೆಲಸದ ಸಾಮರ್ಥ್ಯ, ಅವನಿಗೆ ದೊರೆತಿರುವ ಜನಪ್ರೀತಿ ನೋಡಿದಾಗ ಈ ಹುಡುಗ ನೋಡನೋಡುತ್ತಲೇ ಎಲ್ಲಿಂದೆಲ್ಲಿಗೆ ಏರಿಬಿಟ್ಟ ಅನ್ನಿಸಿ ಸಂತೋಷ ಆಶ್ಚರ್ಯ ಎರಡೂ ಆಗುತ್ತದೆ. ಮೊನ್ನೆ ನನ್ನ ಮೊಮ್ಮಗುವೊಂದು “ಅಜ್ಜ ಒಂದು ಹಾಡು ಹೇಳ್ತಿನಿ ಕೇಳು’ ಅಂತ ಹೇಳಿ “ಭಾಳ ಒಳ್ಳೆಯೋರು ನಮ್ಮ ಮಿಸ್ಸು’ ಅನ್ನೋ ಹಾಡನ್ನು ಬಹಳ ಹಿಗ್ಗಿನಿಂದ ಹೇಳಿತು. ಅದನ್ನ ಬರೆದವನು ಭಟ್ಟ! ದೊಡ್ಡವರು ಸರಿಯೇ, ಮಕ್ಕಳ ಮನಸ್ಸಿನಲ್ಲೂ ಇವನು ಹೇಗೆ ಜಾಗ ಗಿಟ್ಟಿಸಿಕೊಂಡಿದ್ದಾನಲ್ಲ, ಗಟ್ಟಿಗೆ ಅನ್ನಿಸಿತು.

ಉಪಾಸನಾ ಮೋಹನ್‌

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.