ಪೈರಸಿ ವಿರುದ್ಧ ಗುಡುಗಿದ ‘ರಾಬರ್ಟ್’ ನಿರ್ಮಾಪಕ ಉಮಾಪತಿ
Team Udayavani, Mar 7, 2021, 10:22 PM IST
ಬೆಂಗಳೂರು: ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಪೈರಸಿ ವಿರುದ್ಧ ಗುಡುಗಿದ್ದಾರೆ. ಸಿನಿಮಾ ಕಳ್ಳರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಇದೇ ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿರುವ ರಾಬರ್ಟ್ ಚಿತ್ರಕ್ಕೆ ಇದೀಗ ಪೈರಸಿ ಭಯ ಶುರುವಾಗಿದೆ. ಚಿತ್ರಮಂದಿರದಲ್ಲಿ ನೋಡಬೇಕಾದ ಸಿನಿಮಾ ಮೊಬೈಲ್‍ಗಳಲ್ಲಿ ಹರಿಬಿಟ್ಟು ಚಿತ್ರತಂಡದ ಶ್ರಮ ಹಾಗೂ ಹಣ ನೀರುಪಾಲು ಮಾಡುವುದೇ ಪೈರಸಿ ಮಾಡುವವರ ಕುಕೃತ್ಯ.
ರಾಬರ್ಟ್ ಸಿನಿಮಾ ಪೈರಸಿ ಆಗದಂತೆ ಚಿತ್ರತಂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಮಾತಾಡಿರುವ ನಿರ್ಮಾಪಕರು, ಪೈರಸಿ ಮಾಡಬೇಡಿ. ಒಂದು ವೇಳೆ ಪೈರಸಿ ಮಾಡಿದ್ರೆ ಕಾನೂನು ಬದ್ಧವಾಗಿ ಕ್ರಮ ಜರುಗಿಸಲಾಗುತ್ತದೆ. ಅವರ ಇಡೀ ಜೀವನ ಕೋರ್ಟ್ ಕಚೇರಿಗೆ ಅಲೆಯುವುದರಲ್ಲೇ ಮುಗಿದು ಹೋಗುವಂತೆ ಮಾಡುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.
ಇನ್ನ ರಾಬರ್ಟ್ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಸಾರಥಿಗೆ ಜೋಡಿಯಾಗಿ ಆಶಾ ಭಟ್ ಸಾಥ್ ನೀಡಿದ್ದಾರೆ. ಚೌಕ ಖ್ಯಾತಿಯ ನಿರ್ದೇಶಕ ತರುಣ್ ರಾಬರ್ಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು ಚಿತ್ರರಂಗದ ಖಳನಟ ಜಗಪತಿ ಬಾಬು ರಾಬರ್ಟ್ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಬಹುಬಜೆಟ್ ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ವಿನೋದ್ ಪ್ರಭಾಕರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಬಹುತಾರಾಗಣದ ಈ ಸಿನಿಮಾ ಶಿವರಾತ್ರಿ ನಿಮಿತ್ತ ಮಾರ್ಚ್ 11 ರಂದು ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಸುಮಾರು 1800 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
Umapathy Sir ??????????????????
Piracy ಮಾಡಿ ಜೀವನ ಪೂರ್ತಿ ಶಿಕ್ಷೆಗೆ ಒಳಗಾಗಬೇಡಿ…
Beaware before u think of piracy@dasadarshan @TharunSudhir @UmapathyFilms @umap30071 @StarAshaBhat pic.twitter.com/UzW4uEIAYi— Thoogudeepa Group’s – R (@Thoogudeepa_TM) March 7, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.