ಹದಗೆಟ್ಟ ತಾಲೂಕು ಆಡಳಿತ ವ್ಯವಸ್ಥೆ: ಆರೋಪ
Team Udayavani, Mar 8, 2021, 1:52 PM IST
ಕನಕಪುರ: ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರೈತರು ಕೆಲಸಕ್ಕೆ ಕಚೇರಿಗೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ನೂಲೂಕು ಅಧ್ಯಕ್ಷ ಶಶಿಕುಮಾರ್ ಆರೋಪಿಸಿದರು.
ನಗರದ ಕೋಟೆ ಗಣೇಶನ ದೇವಾಲಯದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿ ರಾಜು ನೇತೃತ್ವದಲ್ಲಿ ನಡೆದ ತಾಲೂಕು ರೈತ ಸಂಘದ ಪದಾಧಿಕಾರಿ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಲಂಚ ಕೊಡದೆಯಾವುದೇ ಕೆಲಸ ಮಾಡಿ ಕೊಡುವುದಿಲ್ಲ ಎಂಬ ದೂರು ರೈತರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಧಿಕಾರಿಗಳ ನಡೆಗೆ ರೈತರು ಬೇಸತ್ತಿದ್ದಾರೆ. ಅಧಿಕಾರಿಗಳು ರೈತರಿಂದ ಲಂಚ ಪಡೆಯದೆ ಕೆಲಸವನ್ನು ಮಾಡಿಕೊಡಬೇಕೆಂದು ತಹಶೀಲ್ದಾರ್ ಕೂಡಲೇ ಸೂಚನೆ ನೀಡಬೇಕು. ಒಂದು ವೇಳೆ ಅಧಿಕಾರಿಗಳ ಪ್ರವೃತ್ತಿ ಬದಲಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಪದಾಧಿಕಾರಿಗಳು: ಗೌರವ ಅಧ್ಯಕ್ಷರಾಗಿ ರಂಗಪ್ಪ, ಅಧ್ಯಕ್ಷರಾಗಿ ಶಶಿಕುಮಾರ್, ಉಪಾಧ್ಯಕ್ಷರಾಗಿ ಬಸವರಾಜು, ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಕಾರ್ಯದರ್ಶಿ ಕುಮಾರ್, ಯುವ ಘಟಕದ ಅಧ್ಯಕ್ಷ ಹರೀಶ್, ಮರಳವಾಡಿ ಹೋಬಳಿಯಅಧ್ಯಕ್ಷ ಶಿವಕುಮಾರ್, ಹಾರೋಹಳ್ಳಿ ಹೋಬಳಿ ಅಧ್ಯಕ್ಷ ಕೆಂಪೇಗೌಡ, ಉಯ್ಯಂಬಳ್ಳಿ ಚಿಕ್ಕ ಲಕ್ಷ್ಮಣ, ಕಸಬಾ ಸಿದ್ದರಾಜು ಆಯ್ಕೆಯಾದರು.
ಜಿಲ್ಲಾ ಮುಖಂಡ ಕುಮಾರ್, ಮರಿಯಪ್ಪ, ಮಂಜುನಾಥ್, ಚಿನ್ನಪ್ಪ, ಸುನಿಲ್, ಸಂತೋಷ್, ರಾಘವೇಂದ್ರ ಸ್ವಾಮಿ, ಮುನಿ ಬಸವ, ಶಿವನಗೌಡ, ಸಿಂಗ್ರಯ್ಯ, ಸಿದ್ದರಾಮೇಗೌಡ, ಮುನಿಬಸವೇಗೌಡ, ಬಸವರಾಜು, ರಾಜು, ಬಾಳೇಗೌಡ, ವೀರಭದ್ರಾಚಾರಿ ಇದ್ದರು.
ಸುಂದರ ಪರಿಸರಕ್ಕಾಗಿ ಸ್ವಚ್ಛತೆ ಕಾಪಾಡಲು ಸಹಕರಿಸಿ :
ಮಾಗಡಿ: ಸುಂದರ ಪರಿಸರಕ್ಕಾಗಿ ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಪುರಸಭಾ ಸದಸ್ಯ ಎಚ್.ಜೆ.ಪುರುಷೋತ್ತಮ್ ತಿಳಿಸಿದರು.
ಪಟ್ಟಣದ 2ನೇ ವಾರ್ಡ್‌ನಲ್ಲಿ ಪ್ರತಿ ಮನೆ,ಮನೆಗೆ ತ್ಯಾಜ್ಯ ಸಂಗ್ರಹದ ತಲಾ ಎರಡು ಬುಟ್ಟಿಗಳನ್ನು ವಿತರಿಸಿ ಮಾತನಾಡಿದ ಅವರು, ಪುರಸಭೆಯಿಂದ ಪ್ರತಿಯೊಂದು ಕುಟುಂಬಕ್ಕೂ ತಲಾ ಎರಡು ತ್ಯಾಜ್ಯದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ. ತಮ್ಮಮನೆಯ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ, ಬುಟ್ಟಿಗಳಲ್ಲಿ ಸಂಗ್ರಹಿಸಿಡಬೇಕು. ಪ್ರತಿದಿನ ಬೆಳಗ್ಗೆ ತಮ್ಮ ಮನೆ ಬಾಗಿಲಿಗೆಬರುವ ಪುರಸಭಾ ತ್ಯಾಜ್ಯ ಸಂಗ್ರಹದ ವಾಹನಗಳಿಗೆ ಹಾಕಬೇಕು ಎಂದರು.
ಸ್ವಚ್ಛ ಪರಿಸರದಿಂದ ತಮ್ಮ ಮನೆ ಮತ್ತು ಪರಿಸರ ಸುಂದರವಾಗಿ ಕಾಣುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯ. ಸ್ವಚ್ಛ ಪರಿಸರಕ್ಕಾಗಿ ಎಲ್ಲರೂ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದರು.
ಮುಖಂಡ ರಂಗಸ್ವಾಮಿ, ಜಯರಾಮು, ಶಿವಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.