ಮಹಿಳೆಯರ ಸೇವೆಯಲ್ಲೇ ಬಾಬಾರನ್ನು ಕಾಣುವ ವಿನುತಾಕೃಷ್ಣ!


Team Udayavani, Mar 8, 2021, 3:27 PM IST

ಮಹಿಳೆಯರ ಸೇವೆಯಲ್ಲೇ ಬಾಬಾರನ್ನು ಕಾಣುವ ವಿನುತಾಕೃಷ್ಣ!

ಕೋಲಾರ: ಅಗತ್ಯವಿರುವವರಿಗೆ ಅರ್ಜಿ ಬರೆದುಕೊಡುವುದರಿಂದ ಹಿಡಿದು ಸ್ತ್ರೀಶಕ್ತಿ ಸಂಘಗಳನ್ನು ಹುಟ್ಟು ಹಾಕಿ, ವೃತ್ತಿ ಕೌಶಲ್ಯ ತರಬೇತಿ ಕಲ್ಪಿಸುತ್ತಾ, ಸರಿದಾರಿಯ ಮಾರ್ಗದರ್ಶನ ನೀಡಿ ಆರ್ಥಿಕ ಸ್ವಾವಲಂಬನೆಗೆ ನೆರವಾಗುವವರೆಗೂ ಪ್ರತಿನಿತ್ಯವೂ ಸುತ್ತಮುತ್ತಲ ಮಹಿಳೆಯರ ಸೇವೆಗೆ ಸದಾ ಸಿದ್ಧ ಎನ್ನುತ್ತಾರೆ ಕೋಲಾರ ವಿನುತಾಕೃಷ್ಣ.

ಕೋಲಾರದ ದೊಡ್ಡಪೇಟೆಯ ತನ್ನ ಊದುಬತ್ತಿ ಅಂಗಡಿಯನ್ನೇ ಮಹಿಳೆಯರ ಮಾಹಿತಿ ಮಾರ್ಗ  ದರ್ಶನ ಕೇಂದ್ರವನ್ನಾಗಿಸಿ ಕೊಂಡಿರುವ ವಿನುತಾಕೃಷ್ಣ, ಸರ್ಕಾರಿ ಸೇವೆಗಳ ಪಡೆಯಲು ಯಾರೇ ಯಾವಾಗ ಅರ್ಜಿ ಬರೆದು ಕೊಡುವಂತೆ ಬಂದರೂ ತನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅರ್ಜಿ ಬರೆದುಕೊಟ್ಟು ಅಗತ್ಯ ಸಲಹೆ ಸೂಚನೆ ನೀಡುತ್ತಾರೆ.

ಬ್ಯಾಂಕ್‌ಗಳಲ್ಲಿ ಖಾತೆ ಆರಂಭ, ಅನಕ್ಷರಸ್ಥ  ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ, ಅಂಚೆ ಕಚೇರಿಯಲ್ಲಿ ಆರ್‌ಡಿ ಖಾತೆ ಮಾಡಿಸುವ ಮೂಲಕ ಉಳಿತಾಯ ಮನೋಭಾವ ಬೆಳೆಸುವುದು, ವಿಮೆಯ ಮಹತ್ವ ತಿಳಿಸಿ ವಿಮಾ ಸೌಲಭ್ಯ ಕಲ್ಪಿಸುವುದು, ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಸಾರಥ್ಯವಹಿಸಿ ನೆರವಾಗುವುದು ಇವರ ಮೆಚ್ಚಿನ ನಿತ್ಯದ ಹವ್ಯಾಸವಾಗಿದೆ.

ಹದಿನೈದು ವರ್ಷಗಳಿಂದಲೂ ಪ್ರಕೃತಿ ನಗರ ಸ್ತ್ರೀಶಕ್ತಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಇತರ ಮಹಿಳಾ ಸ್ವಸಹಾಯ ಸಂಘಗಳಿಗೆ ಜಿಲ್ಲೆಯಲ್ಲಿಯೇ ಮಾದರಿಯಾಗಿಸಿದ್ದಾರೆ. ಸಹಕಾರ ಬ್ಯಾಂಕ್‌ಗಳಿರಲಿ ಕೋಲಾರ ಜಿಲ್ಲೆಯ ಯಾವುದೇ ವಾಣಿಜ್ಯ ಬ್ಯಾಂಕ್‌ ಇವರ ಸಂಘಕ್ಕೆ ಸಾಲ ಸೌಲಭ್ಯ ಕಲ್ಪಿಸಲು ಪೈಪೋಟಿ ನಡೆಸುವುದು ಇವರ ಸಂಘ ನಡೆಸುವ ರೀತಿಗೆ ಸಿಗುತ್ತಿರುವ ಗೌರವವಾಗಿದೆ.

ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ಕೋಲಾರ ದೊಡ್ಡಪೇಟೆ ಸುತ್ತಮುತ್ತಲ ವಾರ್ಡ್‌ಗಳಲ್ಲಿ ಮಹಿಳೆಯರ ಪ್ರೀತಿ ಪಾತ್ರ ಮಾರ್ಗದರ್ಶಕರಾಗಿದ್ದರೂ ವಿನೀತಭಾವ ಹೊಂದಿದ್ದಾರೆ. ಸಾಯಿಬಾಬಾರ ನಿಷ್ಠ ಭಕ್ತರಾಗಿರುವ ವಿನುತಾಕೃಷ್ಣ ಮಹಿಳೆಯರ ಸೇವೆ ಯಲ್ಲಿಯೇ ಬಾಬಾರನ್ನು ಕಾಣುತ್ತಾ ಇದು ವರೆಗೂ ಯಾವುದೇ ಸೇವೆಗೆ ಪ್ರಚಾರ ಫ‌ಲಾಪೇಕ್ಷೆ ಬಯಸದೆ ಎಲೆಮರೆಕಾಯಿ  ಯಂತೆ ಕೈಲಾದ ಸೇವೆ ಸಲ್ಲಿಸುತ್ತಾ ಬದುಕುತ್ತಿದ್ದಾರೆ.

 

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.