ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್ ಸಾಹಸ ಯಾನ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
Team Udayavani, Mar 8, 2021, 8:05 PM IST
ಮಲ್ಪೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಲ್ಪೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್ ಸಾಹಸ ಯಾತ್ರೆ ಮಲ್ಪೆ ಬೀಚ್‌ನಿಂದ ಸೈಂಟ್‌ಮೇರೀಸ್ ದ್ವೀಪದ ವರೆಗೆ ಸಾಗಿತು.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಜ್ಜರಕಾಡು ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಾಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸಾಹಸ ಪ್ರದರ್ಶನ ಆಯೋಜಿಸಲಾಗಿತ್ತು.
ಕ್ರೀಡಾ ವಸತಿ ಶಾಲೆ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿಗಳು ಸೈಂಟ್‌ಮೇರಿ ದ್ವೀಪದವರೆಗೆ ತೆರಳಿ ಸುಮಾರು 4-5 ಗಂಟೆಗಳ ಕಾಲ ಕಯಾಕಿಂಗ್ ಯಾನ ನಡೆಸಿ ಸಾಹಸ ಮೆರೆದರು. ಮಹಿಳೆಯರ ಕಯಾಕಿಂಗ್ ಸಮುದ್ರದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದು ಕೋವಿಡ್ ಬಳಿಕ ಮಲ್ಪೆಯಲ್ಲಿ ನಡೆಯುತ್ತಿರುವ ಪ್ರಥಮ ಸಾಹಸ ಕ್ರೀಡೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರ ನಾಯಕ್ ಕಾಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.
ಪಡುಕರೆಯಲ್ಲಿ ಅಕಾಡೆಮಿ ಶಾಖೆ:
ಪ್ರಾಸ್ತವಿಕವಾಗಿ ಮಾತನಾಡಿದ ಕ್ರೀಡಾ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಅವರು ಮಲ್ಪೆ ಪಡುಕರೆ ಭಾಗದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಶಾಖೆಯನ್ನು ಆರಂಭಿಸಿಲು 2 ಎಕ್ರೆ ಜಾಗವನ್ನು ಮೀಸಲಿರಿಸಲಾಗಿದೆ. ವಸತಿ ಸಹಿತವಾದ ವ್ಯವಸ್ಥೆಯನ್ನು ಮಾಡಿಕೊಂಡು ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ ಎಂದರು.
ಸಮುದ್ರದಲ್ಲಿ ಪ್ರಪ್ರಥಮ
ಪ್ರಪ್ರಥಮ ಬಾರಿಗೆ ಸಮುದ್ರದಲ್ಲಿ ಕಯಾಕಿಂಗ್ ಸಾಹಸ ಯಾತ್ರೆಯನ್ನು ಆಯೋಜಿಸಲಾಗಿದೆ. ಕಳೆದ ವರ್ಷ ಮಹಿಳಾ ದಿನಾಚರಣೆಯಂದು ಭದ್ರನದಿಯಲ್ಲಿ 110 ಕಿ. ಮೀ ದೂರ 7ದಿನಗಳ ಪರ್ಯಾಂತ ಕಯಾಕಿಂಗ್ ಯಾತ್ರೆಯನ್ನು ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲ ಮಹಿಳೆಯರಿಗೂ ಸಾಹಸ ಕ್ರೀಡೆಯ ಬಗ್ಗೆ ಅರಿವು ಮೂಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಯೋಗಿಕವಾಗಿ ಬೀಚ್‌ನಿಂದ ಸೈಂಟ್‌ಮೇರಿಸ್‌ಗೆ ಯಾನವನ್ನು ಆರಂಭಿಸಿದ್ದೇವೆ. ಸಮುದ್ರದ ಅಲೆ ಮತ್ತು ಗಾಳಿಗೆ ಸ್ವಲ್ವ ಕಷ್ಟಕರವಾದರೂ, ವಿದ್ಯಾರ್ಥಿಗಳು ಉತ್ಸಾಹದಿಂದ ಸಾಹಸದಲ್ಲಿ ಪಾಲ್ಗೊಂಡಿದ್ದರು ಎಂದು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಚೀಫ್ ಇನ್‌ಸ್ಟ್ರಕ್ಟರ್ ದಿನೇಶ್ ಸುವರ್ಣ ಅವರು ಹೇಳಿದರು.
ಕಯಾಕಿಂಗ್‌ನಲ್ಲಿ ಯಾವ ರೀತಿ ಪಡೆಲ್ ಮಾಡುವುದು, ಕ್ರಾಸ್ ಮಾಡುವುದು, ರಿವರ್ಸ್ ಹೇಗೆ ಬರುವುದು ಎಂಬುವುದನ್ನು ಈ ಮೊದಲೇ ತರಬೇತುದಾರರು ಹೇಳಿಕೊಟ್ಟರು. ಸಮುದ್ರದಲ್ಲಿ ಏಳುವ ಅಲೆಗಳಿಂದಾಗಿ ಲೈಪ್‌ಜಾಕೇಟ್ ಇದ್ದರೂ ಭಯವಾಗುತ್ತಿತ್ತು. ಧೈರ್ಯ ತಂದುಕೊಂಡು ಮುಂದೆ ಸಾಗಿ ಗುರಿಮುಟ್ಟಿದಾಗ ಖುಷಿಯಾಯಿತು. ಈ ಕ್ರೀಡೆಯಲ್ಲಿ ಮುಂದುವರಿಯುವ ಇರಾದೆಯೂ ಇದೆ.
-ರಕ್ಷಿತಾ, ಸರಕಾರಿ ಮಹಿಳಾ ಪ್ರ. ದ. ಕಾಲೇಜು ಅಜ್ಜರಕಾಡು
ಮೊದಲ ಅನುಭವ, ಸಮುದ್ರ ನೋಡುವಾಗಲೇ ಭಯವಾಗುತ್ತಿತ್ತು. ಕಯಾಕಿಂಗ್ ಬಗ್ಗೆ ಏನು ಗೊತ್ತಿರಲಿಲ್ಲ. ತರಬೇತುದಾರರು ಹೇಳಿಕೊಟ್ಟರು. ಸಮುದ್ರ ಮಧ್ಯೆ ಹೋಗುವಾಗ ಭಯವಾದರೂ ಲೈಪ್ ಜಾಕೆಟ್ ಇರುವುದರಿಂದ ನೀರಿಗೆ ಬಿದ್ದರೂ ಏನು ಆಗುವುದಿಲ್ಲ ಎಂದು ಸರ್‌ನವರು ಧೈರ್ಯ ಕೊಟ್ಟರು. ಆಮೇಲೆ ನೀರಿನಿಂದ ಮೇಲೆ ಬರಲು ಮನಸೇÕ ಆಗಲಿಲ್ಲ.
-ಸಂಧ್ಯಾ ಉಡುಪಿ ವಸತಿ ಶಾಲೆಯ ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.