ಕಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ
Team Udayavani, Mar 9, 2021, 3:23 PM IST
ಶಿಗ್ಗಾವಿ: ಪ್ರಧಾನಿ ಮೋದಿ ಸಂಕಲ್ಪದಂತೆ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಮನೆಮನೆಗೆ ತಲುಪಿಸುವ ಜಲಜೀವನ ಮಿಷ್‌ನ (ಜೆಜೆಎಂ) ಯೋಜನೆಯಡಿ ಕ್ಷೇತ್ರಕ್ಕೆ 63 ಕೋಟಿರೂ. ಮಂಜೂರಾತಿಯಾಗಿದ್ದು, ಹಂತಹಂತ ವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ವನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಮನಹಳ್ಳಿ ಗ್ರಾಮದಮನೆಮನೆಗೆ ನಲ್ಲಿ ನೀರು ಸರಬರಾಜುಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದಯೋಜನೆಯಾಗಿದ್ದು, ಒಟ್ಟಾರೆಜಿಲ್ಲೆಗೆ 240 ಕೋಟಿಗೂ ಹೆಚ್ಚು ಹಣ ಮಂಜೂರಾಗಿದೆ. ಮೊದಲ ಹಂತದಲ್ಲಿ67 ಗ್ರಾಮಗಳಲ್ಲಿ ಯೋಜನೆಯನ್ನು ಚಾಲನೆ ದೊರಕಲಿದೆ. ಅದರಲ್ಲಿಕಾಮನಹಳ್ಳಿ ಗ್ರಾಮವೂ ಸೇರಿದೆ.
ಇಲ್ಲಿನ 131 ಮನೆಗಳಿಗೆ ನೀರು ತಲುಪಿಸಿ ನಂತರ ಅಲ್ಲದೇ ಉಳಿದಗ್ರಾಮಗಳನ್ನು ಎರಡನೇ ಹಂತದಲ್ಲಿಯೋಜನೆ ವಿಸ್ತರಿಸಲಾಗುವುದು. ಅಲ್ಲದೇ ಗ್ರಾಮಕ್ಕೆ 25 ಲಕ್ಷದವೆಚ್ಚದಲ್ಲಿ ಸಿಸಿ ರಸ್ತೆ ಮಂಜೂರಾತಿ ಮಾಡಲಾಗಿದೆ. ಇಲ್ಲಿನ ಗ್ರಾಮದಲ್ಲಿ ಪಂಢರಪುರ ವಿಠೊಭಾ ರುಕ್ಮಣಿನೂತನ ದೇವಸ್ಥಾನವನ್ನು ಹಾಗೂ ಸಂತ ತುಕಾರಾಮರ ಪ್ರತಿಮೆಯನ್ನುಗುರು ಹಿರಿಯರು ಸೇರಿ ಸ್ಥಾಪಿಸಿದ್ದು ಸಂತಸ ತಂದಿದೆ ಎಂದರು. ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ. ಅರ್ಜುನ ಹಂಚಿನಮನಿ, ಕೇದಾರಪ್ಪ ಬಗಾಡೆ, ರಾಜು ಕುನ್ನೂರು, ವನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಯಲ್ಲಪ್ಪ ಸಿಂಧೆ ಉಪಸ್ಥಿತರಿದ್ದರು.
ಎಲ್ಲ ಬಸ್ ಮಾರ್ಗ ಮತ್ತೆ ಆರಂಭಿಸಿ: ಬಣಕಾರ :
ಹಿರೇಕೆರೂರ: ಕೋವಿಡ್ ಅವಧಿಯಲ್ಲಿ ರದ್ದು ಮಾಡಿದ್ದ ತಾಲೂಕಿನ ಎಲ್ಲ ಬಸ್ ಮಾರ್ಗಗಳನ್ನು ಮತ್ತೆ ಆರಂಭಿಸಬೇಕು ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರು ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೋವಿಡ್ ನಂತರ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಶಾಲೆ, ಕಾಲೇಜುಗಳು ಆರಂಭವಾಗಿವೆ.ಬಹುತೇಕ ಜನತೆ ವಾಯವ್ಯ ಸಾರಿಗೆ ಮೇಲೆ ಅವಲಂಬಿತರಾಗಿದ್ದಾರೆ. ಬಸ್‌ಗಳು ಇಲ್ಲದೇ ತೊಂದರೆಅನುಭವಿಸುತ್ತಿದ್ದಾರೆ. ಹಿರೇಕೆರೂರ ಸಾರಿಗೆ ಘಟಕದಿಂದಅರಳಿಕಟ್ಟಿ, ಅಬಲೂರು, ಆನವಟ್ಟಿ, ಕುಡುಪಲಿಗ್ರಾಮಗಳಿಗೆ ಹೋಗುವ ರಾತ್ರಿ ಬಸ್‌ಗಳು ಹಾಗೂರಾತ್ರಿ 10ಕ್ಕೆ ರಾಣಿಬೆನ್ನೂರಿನಿಂದ ಬರುತ್ತಿದ್ದ ಕೋಡ್ ಮಾರ್ಗ ಹಾಗೂ ಮಾಸೂರು-ರಟ್ಟಿಹಳ್ಳಿ ಮಾರ್ಗದಬಸ್‌ಗಳನ್ನು ಬಂದ್ ಮಾಡಿರುವುದರಿಂದಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಎಲ್ಲ ಬಸ್‌ಗಳನ್ನು ಪುನಃ ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.