ಹಲವು ನಿರೀಕ್ಷೆ ಹುಸಿಗೊಳಿಸಿದ ಬಿಎಸ್‌ವೈ ಬಜೆಟ್
Team Udayavani, Mar 9, 2021, 3:34 PM IST
ಹಾವೇರಿ: ಪ್ರತ್ಯೇಕ ಡಿಸಿಸಿ ಬ್ಯಾಂಕ್, ಮೆಗಾ ಡೈರಿ, ಕೃಷಿ ಆಧಾರಿತ ಕೈಗಾರಿಕೆ, ನೀರಾವರಿ ಯೋಜನೆಗಳ ನಿರೀಕ್ಷೆಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೋಮವಾರ ಮಂಡಿಸಿದ ಬಜೆಟ್‌ನಲ್ಲಿಯೂ ಹುಸಿಯಾಗಿವೆ.
ಹೇಳಿಕೊಳ್ಳುವಂತಹ ಯಾವ ಕೊಡುಗೆಯೂ ಜಿಲ್ಲೆಗೆ ಸಿಕ್ಕಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಈ ಹಿಂದೆ ಯಾವ ಸರ್ಕಾರದಲ್ಲೂ ಇಲ್ಲದ ರಾಜಕೀಯಪ್ರಾತಿನಿಧ್ಯ ಜಿಲ್ಲೆಗೆ ದೊರಕಿದೆ. ಗೃಹ, ಕಾನೂನುಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ,ಕೃಷಿ ಸಚಿವ ಬಿ.ಸಿ.ಪಾಟೀಲ, ತೋಟಗಾರಿಕೆ ಸಚಿವ ಆರ್.ಶಂಕರ್ ಈ ಮೂವರೂ ಸಚಿವರು ಯಡಿಯೂರಪ್ಪ ಸಂಪುಟದಲ್ಲಿ ಪ್ರಭಾವಿ ಖಾತೆಹೊಂದಿದ್ದರಿಂದ ಬಜೆಟ್‌ನಲ್ಲಿ ಜಿಲ್ಲೆಗೆ ಬಂಪರ್ ಯೋಜನೆಗಳು ಸಿಗಬಹುದೆಂದು ಜನರು ನಿರೀಕ್ಷೆಹೊಂದಿದ್ದರು. ಆದರೆ ಹೇಳಿಕೊಳ್ಳುವಂತಹ ವಿಶೇಷ ಯೋಜನೆ, ಅನುದಾನ ಸಿಗದಿರುವುದು ಜನರಲ್ಲಿ ಬೇಸರ ತಂದಿದೆ.
ನೀರಾವರಿ, ಆರೋಗ್ಯ, ಕೃಷಿ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳು ಜಿಲ್ಲೆಗೆ ಒದಗಿಬರಬಹುದೆಂಬ ಆಶಾಭಾವ ಹೊಂದಲಾಗಿತ್ತು. ಪ್ರಮುಖವಾಗಿಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಅನುದಾನಸಿಗುವ ನಿರೀಕ್ಷೆಯಿತ್ತು. ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಪೂರಕವಾಗಿ ಮೆಗಾ ಡೇರಿಸ್ಥಾಪನೆಗೆ ಅನುದಾನ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌ಘೋಷಣೆ ಮಾಡಬಹುದೆಂಬ ನಿರೀಕ್ಷೆಯಿತ್ತು.ಆದರೆ ಇದಾವುದೂ ಸಿಗದಿರುವುದಕ್ಕೆ ನಿರಾಸೆ ಮೂಡಿದೆ.
ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?: ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗಂಗೀಬಾವಿಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 10ನೇ ಬೆಟಾಲಿಯನ್ ಸಶಕ್ತಗೊಳಿಸಲು 8 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ. ನೂತನವಾಗಿ ಜಿಲ್ಲಾ ಪೊಲೀಸ್ ಸಂಕೀರ್ಣನಿರ್ಮಿಸಲು 8 ಕೋಟಿ ರೂ. ಘೋಷಿಸಲಾಗಿದೆ.ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ4 ಕೋಟಿ ರೂ. ವೆಚ್ಚದಲ್ಲಿ ಆಧುನಿಕಗುಣ ವಿಶ್ಲೇಷಣಾ ಘಟಕ ಸ್ಥಾಪನೆ, ಹಾವೇರಿಯಲ್ಲಿ ನಡೆಯಲಿರುವ86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿಆಯೋಜಿಸಲು ಸರ್ಕಾರ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಿದೆ ಎಂದು ತಿಳಿಸಲಾಗಿದೆ.
ಬೇಡ್ತಿ-ವರದಾ ನದಿ ಜೋಡಣೆಯಡಿ 22 ಟಿಎಂಸಿ ನೀರು ಬಳಸಿಕೊಳ್ಳಲು ಯೋಜನಾ ವರದಿ ಸಿದ್ಧಪಡಿಸಲು ರಾಷ್ಟ್ರೀಯ ಜಲ ಅಭಿವೃದ್ಧಿಸಂಸ್ಥೆಗೆ ಮನವಿ ಮಾಡಲಾಗಿದೆ. ತಾಂತ್ರಿಕಸಾಧ್ಯಾಸಾಧ್ಯತೆಗೆ ಅನುಗುಣವಾಗಿ ಯೋಜನೆರೂಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಉತ್ತರಕರ್ನಾಟಕದ ಜಿಲ್ಲೆಗಳಿಗೆ ಇದರಿಂದಅನುಕೂಲವಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.
ಜಿಲ್ಲೆಯ ಜನರ ನಿರೀಕ್ಷೆ ಏನಿತ್ತು?: ಕೋವಿಡ್ ಆರ್ಥಿಕ ಸಂಕಷ್ಟದನಡುವೆಯೂ ಈ ಬಾರಿಯಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಹೊಂದಲಾಗಿತ್ತು. ಅದರಲ್ಲೂ ಕೃಷಿ,ಕೈಗಾರಿಕೆ, ಹೈನುಗಾರಿಕೆ, ಪ್ರವಾಸೋದ್ಯಮಅಭಿವೃದ್ಧಿಗೆ ಪೂರಕವಾದ ಯೋಜನೆ ಸಿಗುವಆಶಯವಿತ್ತು. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿತ್ತು.ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪನೆವಿಚಾರ ಇಟ್ಟುಕೊಂಡು ಬಸವರಾಜ ಬೊಮ್ಮಾಯಿನೇತೃತ್ವದಲ್ಲೇ ಹೋರಾಟ ನಡೆಸಿದ್ದರು. ಈಗಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಈಬಗ್ಗೆ ಆಯವ್ಯಯದಲ್ಲಿ ಪ್ರಸ್ತಾಪವಾಗಿಲ್ಲ.ಧಾರವಾಡ ಒಕ್ಕೂಟ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಾಲಿನಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಯಿಂದ ಪೂರೈಕೆಯಾಗುತ್ತಿದೆ. ಅದಕ್ಕಾಗಿಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ಸ್ಥಾಪನೆಯಾಗಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಸಾಧ್ಯತಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇಲ್ಲಿ ಸಂಗ್ರಹವಾಗುವ ಹಾಲಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸುವುದು, ಹಾಲು ಶೀತಲೀಕರಣ ಘಟಕ, ಹಾಲಿನ ಉಪಉತ್ಪನ್ನ ತಯಾರಿಕೆಗೆ ಅಗತ್ಯ ಮೂಲಸೌಲಭ್ಯ ಮಾಡಿಕೊಳ್ಳಬೇಕಿದೆ. ಅದಕ್ಕಾಗಿಮೆಗಾ ಡೈರಿ ಸ್ಥಾಪನೆಯಾಗಬೇಕಿದ್ದು, 90 ಕೋಟಿ ರೂ. ಅನುದಾನ ಬೇಡಿಕೆ ಇಡಲಾಗಿತ್ತು. ಬಜೆಟ್‌ನಲ್ಲಿ ಇದಕ್ಕೆ ಅನುದಾನ ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಅದೇ ರೀತಿ ಮೆಣಸಿನಕಾಯಿ ಸಂಸ್ಕರಣಘಟಕ, ಬ್ಯಾಡಗಿ ಎಪಿಎಂಸಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಬೇಡಿಕೆಯೂ ಈಡೇರಿಲ್ಲ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ,ನೂತನ ತಾಲೂಕುಗಳ ರಚನೆ, ನೂತನ ರಟ್ಟಿಹಳ್ಳಿ ತಾಲೂಕು ಅಭಿವೃದ್ಧಿ, ಪ್ರವಾಸಿ ತಾಣಗಳಅಭಿವೃದ್ಧಿಗೂ ವಿಶೇಷ ಕೊಡುಗೆ ನೀಡದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.
ಇದು ರೈತ ವಿರೋಧಿ ಬಜೆಟ್ :
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ 2021-22ನೇ ಸಾಲಿನ ಆಯ್ಯವ್ಯಯದಲ್ಲಿರೈತರಿಗೆ ಯಾವುದೇ ಪೂರಕವಾದ ಯೋಜನೆಗಳಿಲ್ಲ. ರೈತ ವಿರೋಧಿ ಬಜೆಟ್ ಇದಾಗಿದೆ. ಹಾವೇರಿ ಜಿಲ್ಲೆಗೆ ಯಾವುದೇ ಘೋಷಣೆ ಮಾಡಿಲ್ಲ. ಅಡುಗೆ ಅನಿಲ,ಪೆಟ್ರೋಲ್ ಮತ್ತು ಡಿಸೆಲ್ ಸೇರಿದಂತೆ ದಿನಬಳಕೆಯವಸ್ತುಗಳು ಭಾರಿ ದುಬಾರಿಯಾಗಿದ್ದು, ರಾಜ್ಯ ಸರ್ಕಾರ ಕರಕಡಿಮೆಗೊಳಿಸಿಲ್ಲ. ಇದರಿಂದ ಮಧ್ಯಮ ವರ್ಗದ ಜನಹಾಗೂ ರೈತರ ಜೀವನ ಕಷ್ಟಕರವಾಗಿದೆ. ಈ ದಿಶೆಯಲ್ಲಿಮುಂಗಡ ಪತ್ರದಲ್ಲಿ ಯಾವುದೇ ಅನುಕೂಲ ಇಲ್ಲ. ಈಬಜೆಟ್ ಜನರನ್ನು ಮೋಸಗೊಳಿಸುವ ತಂತ್ರವಾಗಿದೆ. ಒಟ್ಟಾರೆ ಬಜೆಟ್ ನಿರಾಶದಾಯಕವಾಗಲಿದೆ. -ಕೆ.ಬಿ.ಕೋಳಿವಾಡ, ವಿಧಾನಸಭಾ ಮಾಜಿ ಸಭಾಪತಿಗಳು.
ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ :
ಯಾವುದೇ ಹೆಚ್ಚುವರಿ ತೆರಿಗೆ ವಿಧಿಸದೇ 2021-22 ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮಹಿಳೆಯರ ಸ್ವಾವಲಂಬನೆ ಮತ್ತು ಮಹಿಳಾಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಬೇಡ್ತಿ-ವರದಾ ನದಿಜೋಡಣೆಯಡಿ ಒಟ್ಟು 22 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲುಯೋಜನಾ ವರದಿ ಸಿದ್ಧಪಡಿಸಲು ಆದೇಶಿಸಿರುವುದು ಉತ್ತರಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಾಗೂ ಕುಡಿಯುವನೀರಿನ ಯೋಜನೆಗೆ ಅನುಕೂಲವಾಗಲಿದೆ. ಬ್ಯಾಡಗಿಯಲ್ಲಿಮೆಣಸಿನಕಾಯಿ ಸಂಶೋಧನಾ ಕೇಂದ್ರ ಸ್ಥಾಪಿಸಲುಘೋಷಿಸಿರುವುದು ಸ್ವಾಗತಾರ್ಹ. ರಾಜ್ಯದ ನಗರಾಭಿವೃದ್ಧಿ,ಗ್ರಾಮೀಣಾಭಿವೃದ್ಧಿ, ಇಂಧನ, ವಸತಿ, ಆರೋಗ್ಯ, ಶೈಕ್ಷಣಿಕ, ರಸ್ತೆ ಹಾಗೂ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. –ಶಿವಕುಮಾರ ಉದಾಸಿ, ಸಂಸದರು
ಸಮತೋಲನದಿಂದ ಕೂಡಿದೆ..:
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಸಾಲಿನ ಆಯವ್ಯಯ ಮುಂಗಡ ಪತ್ರ ಸಮತೋಲನದಿಂದ ಕೂಡಿದೆ. ಶಿಕ್ಷಣ ಕ್ಷೇತ್ರಕ್ಕೆ, ಸರಕಾರಿ ಶಾಲೆಗಳ ಮೂಲಬೂತ ಸೌಕರ್ಯ ಪಾಠ ಮತ್ತು ಪಿಠೊಪಕರಣ,ಶೌಚಾಲಯ, ಕಂಪ್ಯೂಟರ್ ಪ್ರಯೋಗಾಲಯ,ಉರ್ದುಶಾಲೆಗಳಿಗೆ ಅನುದಾನ ಹಿಗೆ ಶಿಕ್ಷಣ ಕ್ಷೇತ್ರಕ್ಕೆ ರೂ.2968 ಕೋಟಿ ಅನುದಾನ, ಕೃಷಿ, ರೇಷ್ಮೆ, ತೋಟಗಾರಿಕೆ, ಮತೊÕದ್ಯಮ, ಕಳಸಾಬಂಡೂರಿ ಯೋಜನೆಗೆ ರೂ. 1677 ಕೋಟಿ, ಭದ್ರಾಮೇಲ್ದಂಡೆ ಯೋಜನಿಗಳಿಗೆ ಅನುದಾನ, ಬೇಡ್ತಿ ಮತ್ತು ವರದಾ ನದಿಜೋಡಣೆ, ಕೃಷಿ ಉತ್ಪನ್ನಗಳ ಸಂಗ್ರಹಣೆಗೆ ರಿಯಾಯಿತಿ. ಹೂವುಹಾಗೂ ತರಕಾರಿ ಮಾರುಕಟ್ಟೆಗಳ ಸ್ಥಾಪನೆಗೆ ಒಟ್ಟು ರೂ.3100 ಕೋಟಿಮೀಸಲು. ರೈಲ್ವೆಗೆ ಸಂಬಂಧಿಸಿದಂತೆ ರೂ.3990 ಕೋಟಿ ಮೀಸಲು, ಧಾರವಾಡ -ಕಿತ್ತುರು-ಬೆಳಗಾವಿ ರೈಲು ಯೋಜನೆಗೆ 463 ಕೋಟಿರೂ. ಮೀಸಲು ನೀಡಿರುವುದು ಬಜೆಟ್ ಸ್ವಾಗತಾರ್ಹವಾಗಿದೆ. – ಗದಿಗಪ್ಪಗೌಡ ಹೊಟ್ಟಿಗೌಡ್ರ ಉಪಾಧ್ಯಕ್ಷರು, ಕರ್ನಾಟಕ ವಾಣಜ್ಯೋಧ್ಯಮ ಸಂಸ್ಥೆಯ ಹುಬ್ಬಳ್ಳಿ ಹಾಗೂ ವರ್ತಕರು ರಾಣಿಬೆನ್ನೂರ.
ಮಹಿಳಾ ಸಬಲೀಕರಣಕ್ಕೆ ಒತ್ತು :
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ2021-2022ನೇ ಸಾಲಿನಆಯವ್ಯಯ ಮುಂಗಡ ಪತ್ರಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರಿಗಾಗಿ ಭರಪೂರಕೊಡುಗೆ ನಿಡಿದ್ದಾರೆ. ಮಹಿಳಾ ಉದ್ದಿಮೆದಾರರಿಗೆಶೇ 4 ಬಡ್ಡಿಯಂತೆ 2ಕೋಟಿಯವರಗೆ ಸಾಲ, ಬಿಎಂಟಿಸಿಯಲ್ಲಿ ರಿಯಾತಿ ದರದಲ್ಲಿ ಪ್ರಯಾಣ ಬಸ್‌ಪಾಸ್, ಎಪಿಎಂಸಿ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ ಹಂಚಿಕೆಯಲ್ಲಿಶೇ.10 ಮಿಸಲಾತಿ, ಗೃಹೋದ್ಯಮಕ್ಕೆ ಅನುದಾನಹೀಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ.– ಭಾರತಿ ಕುಮಾರ ಜಂಬಗಿ ಬಿಜೆಪಿ ಯುವ ನಾಯಕಿ ರಾಣಿಬೆನ್ನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.