ಬೇಡ್ತಿ-ವರದಾ ತಿರುವಿಗೆ ಮತ್ತೆ ಯೋಜನೆ


Team Udayavani, Mar 9, 2021, 4:24 PM IST

ಬೇಡ್ತಿ-ವರದಾ ತಿರುವಿಗೆ ಮತ್ತೆ ಯೋಜನೆ

ಶಿರಸಿ: ಬೇಡ್ತಿ ನದಿ ನೀರನ್ನು ಬಯಲು ಸೀಮೆಗೆ ಒಯ್ಯುವ ಬೇಡ್ತಿ ವರದಾ ನದಿ ಜೋಡಣಾ ಯೋಜನೆಗೆ ಬಜೆಟ್‌ನಲ್ಲಿ ಸಾಧ್ಯತಾ ವರದಿ ಪ್ರಸ್ತಾಪಿಸಿದ್ದು, ಬೇಡ್ತಿ ಕೊಳ್ಳದ ಪರಿಸರದ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿನ ನೆಪದದಲ್ಲಿ ನದಿ ಜೋಡಣೆ ಪ್ರಸ್ತಾಪಿಸಿರುವುದು ಈಗ ಭುಗಿಲೆದ್ದ ಆಕ್ರೋಶವಾಗಿದೆ. 15 ವರ್ಷಗಳ ಹಿಂದೆಯೇ ಕೇಳಿ ಬಂದಿದ್ದ ಬೇಡ್ತಿ ವರದಾ ಜೋಡಣೆ ಯೋಜನೆ ಕೇಂದ್ರಸರಕಾರದ ಗಂಗಾ ಕಾವೇರಿ ಲಿಂಕಿಂಗ್‌ಪ್ರಾಜೆಕ್ಟ್ ಭಾಗವಾಗಿತ್ತು. ಆಗಲೇ ಬೇಡ್ತಿಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಇದನ್ನು ವಿರೋಧಿಸಿತ್ತು. ಅಂದೇ ಶಾಲ್ಮಲಾ ನದಿಯಲ್ಲಿಸಹಸ್ರಲಿಂಗಕ್ಕಿಂತ ಕೆಳಭಾಗದಲ್ಲಿ ಅಣೆಕಟ್ಟು ಕಟ್ಟಿ ಅದನ್ನೂ ಕಾಡಿನಲ್ಲಿ ಚಾನೆಲ್‌ ಸೃಷ್ಟಿಸಿ ವರದಾ ನದಿಗೆ ಜೋಡಿಸುವ ಪ್ರಸ್ತಾಪ ಇತ್ತು. ಇಲ್ಲಿಂದನೀರು ಒಯ್ದರೆ ನದಿಯ ಕೆಳ ಭಾಗದ ಜನರ ಕಥೆ ಏನು ಎಂಬುದು ಪ್ರಶ್ನೆಯಾಗಿತ್ತು. ಇದೇಕಾರಣಕ್ಕೆ ಅನೇಕ ಹೋರಾಟಗಳೂ ನಡೆದವು. ಈ ಮೊದಲು ಬೇಡ್ತಿಗೆ ಅಣೆಕಟ್ಟು ಕಟ್ಟುವಪ್ರಸ್ತಾವ ಬಂದಾಗಲೂ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಹೋರಾಟ, ಪಾದಯಾತ್ರೆ ಎಲ್ಲ ನಡೆದಿತ್ತು. ಆ ಯೋಜನೆ ಕೂಡ ಕೈ ಬಿಡಲಾಗಿತ್ತು.

ಆದರೆ, ಈಗ ರಾಜ್ಯ ಸರಕಾರ ಮರಳಿ ವರದಾ ನದಿಗೆ ಬೇಡ್ತಿ ನದಿ ನೀರನ್ನು ಒಯ್ಯುವ ಪ್ರಸ್ತಾವಮಾಡಲಾಗಿದೆ. ಹೀಗೆ ನದಿ ನೀರನ್ನು ಒಯ್ದರೆ ಅದು ಹಾವೇರಿ ಹಾಗೂ ಮುಂದೆ ಕೃಷ್ಣಾ ನದಿಪ್ರದೇಶದ ಜನರಿಗೂ ಅನುಕೂಲವಾಗಲಿದೆ ಎಂಬುದು ಮೇಲ್ನೋಟದ ಆಶಯ. ಆದರೆ, ಮಲೆನಾಡಿನ ಪ್ರದೇಶದಲ್ಲಿಈಗಾಗಲೇ ಕುಡಿಯುವ ನೀರಿನ ತುಟಾಗ್ರತೆಕೂಡ ಉಂಟಾಗಿದೆ. ಜಿಲ್ಲೆಯಲ್ಲಿ ಟ್ಯಾಂಕರ್‌ಮೂಲಕ ನೀರು ಕೊಡುವ ಸ್ಥಿತಿ ಇದೆ. ಇದೇ ಬೇಡ್ತಿ ನದಿ ನೀರನ್ನು ಬಳಸಿಕೊಂಡು ಸಾವಿರಾರು ಹಳ್ಳಿಗಳು, ಕೃಷಿ ಕುಟುಂಬಗಳು ನಡೆಯುತ್ತಿವೆ.

ಮುಖ್ಯವಾಗಿ ವನ್ಯಜೀವಿಗಳಿಗೂ ಇದೇ ಬೇಡ್ತಿ ನೀರು ಬೇಕು. ನೀರಿನ ಸಹಜ ಹರಿವು ಕಡಿಮೆ ಆದರೂ ಅನೇಕ ಸಂಕಷ್ಟಗಳು ಎದುರಾಗುವಾಗ ಈಗ ಮತ್ತೆ ನೀರನ್ನು ಒಯ್ದರೆ ಕತೆಏನಾಗಬಹುದು ಎಂಬುದು ಪ್ರಶ್ನೆಯಾಗಿದೆ.ವರದಾ ನದಿಯಿಂದ ಬನವಾಸಿ, ಗುಡ್ನಾಪುರ,ಭಾಶಿ ಮುಂದುವರಿದು ದಾಸನಕೊಪ್ಪ, ಅಂಡಗಿ ಭಾಗದಲ್ಲಿ ಕೆರೆಗೆ ನೀರು ತುಂಬಿಸುವ, ಬನವಾಸಿ ಭಾಗಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಯೋಜನೆ ಇದೆ. ನೂರಾರು ಕೋಟಿ ರೂ. ಮೊತ್ತದಲ್ಲಿ ಯೋಜನೆ ಅನುಷ್ಠಾನದಲ್ಲಿದೆ.

ಸಚಿವ ಶಿವರಾಮ ಹೆಬ್ಟಾರ ಅವರ ಕನಸಿನ ಯೋಜನೆಯಾಗಿದೆ. ಈಗ ಬೇಡ್ತಿ ನದಿ ನೀರನ್ನುಪಶ್ಚಿಮದಿಂದ ಪೂರ್ವಕ್ಕೆ ಪೈಪ್‌ಲೈನ್‌ ಅಳವಡಿಕೆ ಮಾಡಿ ಒಯ್ಯುವ ಕುರಿತು ಸರ್ವೆಗೆ ಸರಕಾರ ಬಜೆಟ್‌ ಅನುಮೋದನೆ ನೀಡಿದೆ. ಹೀಗಾದರೆಬೇಡ್ತಿ ಹಾಗೂ ಗಂಗಾವಳಿ ಕೆಳ ಭಾಗದಲ್ಲಿ ನೀರಿನ ಹರಿವು ಬೇಸಿಗೆಯಲ್ಲಿ ನಿಂತು ಕೃಷಿ, ಮೀನುಗಾರಿಕೆಗೆ ಏಟಾಗುತ್ತದೆ ಹಾಗೂ ಉಪ್ಪುನೀರು ಗಂಗಾವಳಿಯಲ್ಲಿ ಹಿಮ್ಮುಖ ಬರುತ್ತದೆಎಂಬುದು ಇನ್ನೊಂದು ಆತಂಕವಾಗಿದೆ.

ಈಗಾಗಲೇ ಬೇಡ್ತಿ ನೀರನ್ನು ಯಲ್ಲಾಪುರ ಪಟ್ಟಣಕ್ಕೆ ಒಯ್ಯಲಾಗುತ್ತಿದೆ. ಗಂಗಾವಳಿ ನದಿನೀರನ್ನು ಕುಮಟಾ, ಅಂಕೋಲಾ, ಕಾರವಾರಕ್ಕೂ ಒಯ್ಯುವ ಪ್ರಸ್ತಾವ ಸರಕಾರದ ಮುಂದಿದೆ.ಹೀಗಿದ್ದಾಗಲೂ ಜಲಮೂಲ ಹೆಚ್ಚಿಸಿಕೊಳ್ಳುವ ಯೋಜನೆ ಜಾರಿಗೆ ತರುವ ಬದಲು ಇದ್ದಜಲ ಮೂಲವನ್ನೇ ಎತ್ತಿಕೊಂಡು ಹೋಗುವಯೋಜನೆ ಸಾಧುವಲ್ಲ. ಇದರ ವ್ಯತಿರಿಕ್ತ ಪರಿಣಾಮ ಕೂಡ ನೋಡಬೇಕಾಗಿದೆ. ನೀರು ಕೊಡುವುದಕ್ಕೆ ವಿರೋಧವಲ್ಲ,

ಬದಲಿಗೆ ಇಲ್ಲಿಯೂ ನೀರಿಲ್ಲ, ಅಲ್ಲಿಯೂ ಏನಿಲ್ಲ ಆಗುತ್ತದೆ ಎಂಬುದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ಅಂತರಂಗದ ಆತಂಕ. ಇದು ವಾಸ್ತವಿಕವಾಗಿಯೂ ನಿಜವಾದ ಉದಹಾರಣೆ ಎತ್ತಿನಹೊಳೆ ಯೋಜನೆಯಲ್ಲೂ ಇದೆ.ಈ ಮಧ್ಯೆ ಇದೇ ಬಜೆಟ್‌ನಲ್ಲಿ ಪಶ್ಚಿಮವಾಹಿನಿಗೆ ಮುಂದಿನ ಐದು ವರ್ಷದಲ್ಲಿ3986 ಕೋಟಿ ರೂ. ಮೊತ್ತದಲ್ಲಿ 1348ಕಿಂಡಿ ಅಣೆಕಟ್ಟು ಹಾಗೂ ಪ್ರಸಕ್ತ 500ಕೋ.ರೂ. ಮಂಜೂರಿ ಪ್ರಸ್ತಾವ ಇದೆ. ಇದಕ್ಕೆನೀರು ಸಿಗುವುದು ಎಲ್ಲಿಂದ? ಬೇಡ್ತಿ ಹಾಗೂ ಅದರ ಉಪ ನದಿ ಬಿಟ್ಟು ಮಾಡುತ್ತಾರಾ? ಹಾಗೆಮಾಡಿದರೆ ಆ ಭಾಗದ ರೈತರಿಗೆ ಅನ್ಯಾಯ ಆಗದೇ ಎಂಬುದೂ ಶಂಕೆ ಉಳಿದಿದೆ.

ಏನಿದು ಪ್ರಸ್ತಾವ?: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬೇಡ್ತಿನದಿಯಿಂದ 22 ಟಿಎಂಸಿ ನೀರನ್ನು ಒಯ್ಯುವ ಕುರಿತು ಸಾಧ್ಯತಾ ವರದಿ ಸಿದ್ಧಪಡಿಸಲು ಎನ್‌ ಡಬ್ಲ್ಯೂಡಿಎಗೆ ಪ್ರಸ್ತಾವ ಮಾಡಲಾಗಿದೆ. ಪರಿಸರಾಸಕ್ತರ ಸಭೆ: ಈಗಾಗಲೇ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನದಿಜೋಡಣೆಯ ಬೇರೆ ಬೇರೆ ರೂಪದ ಕುರಿತುಶಂಕಿಸಿ ಮಾ.24 ರಂದು ಶಿರಸಿಯಲ್ಲಿ ಬೃಹತ್‌ಪರಿಸರಾಸಕ್ತರ ಸಭೆ ಕರೆದಿದೆ. ಈ ಸಮಿತಿಗೆಸ್ವರ್ಣವಲ್ಲೀ ಶ್ರೀಗಳು ಗೌರವಾಧ್ಯಕ್ಷರು, ಜೀವ ವೈವಿಧಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ,ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಮಿತಿ ಸದಸ್ಯರೇ ಆಗಿದ್ದಾರೆ!.

 

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.