ಕೀಳರಿಮೆ ಬಿಟ್ಟು ಸಾಧನೆಯತ್ತ ಸಾಗಿ: ಡಾ.ಸನ್ಮತಿ


Team Udayavani, Mar 9, 2021, 4:53 PM IST

ಕೀಳರಿಮೆ ಬಿಟ್ಟು ಸಾಧನೆಯತ್ತ ಸಾಗಿ: ಡಾ.ಸನ್ಮತಿ

ಚನ್ನಪಟ್ಟಣ: ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬು ದಕ್ಕೆ ಸಾಕಷ್ಟು ಉದಾಹರಣೆ ಕಣ್ಣ ಮುಂದಿವೆ. ವಿದ್ಯಾರ್ಥಿನಿಯರು ಕೀಳರಿಮೆ ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಜ್ಜಾಗಬೇಕು ಎಂದು ಆಯುರ್ವೇದ ಸ್ತ್ರೀರೋಗ ತಜ್ಞೆ ಡಾ. ಸನ್ಮತಿ ಹೇಳಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಹಿಳಾ ಕೋಶ, ಸಾಂಸ್ಕೃತಿಕ ಸಮಿತಿ ಹಾಗೂನವ್ಯ ಫೌಂಡೇಷನ್‌ ಸಹಯೋಗದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆ ಇಂದು ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಸಾಧನೆ ಮಾಡಲು ಮುಖ್ಯವಾಗಿ ದೃಢ ಮನಸ್ಸು ಇರಬೇಕು ಎಂದರು.

ಆಯುರ್ವೇದ ಪದ್ಧತಿ ಪುರಾತನ ಕಾಲದಿಂದಲೂ ಮಾನವನ ಆರೋಗ್ಯಕಾಪಾಡಿಕೊಂಡು ಬರುತ್ತಿದೆ. ನಮ್ಮ ಹಿರಿಯರು ಹೆಚ್ಚು ಕಾಲ ಬದುಕುತ್ತಿದ್ದರು. ಯಾವುದೇಅನಾರೋಗ್ಯ ಕಾಡುತ್ತಿರಲಿಲ್ಲ ಎಂಬುದಕ್ಕೆ ಆಯು ರ್ವೇದ ಪದ್ಧತಿಯೇ ಕಾರಣ. ಇಂದಿನ ದಿನಗಳಲ್ಲಿನ ಆಹಾರ ಪದ್ಧತಿ, ಒತ್ತಡದ ಬದುಕು ನಮ್ಮನ್ನು ಅನಾರೋಗ್ಯದತ್ತ ದೂಡುತ್ತಿದೆ ಎಂದರು.ನವ್ಯ ಫೌಂಡೇಷನ್‌ ಅಧ್ಯಕ್ಷೆ ಆರ್‌.ನವ್ಯಶ್ರೀ ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದ ಘಟ್ಟ.ಆ ಸಮಯದಲ್ಲಿ ಕಲಿಯುವುದರ ಕಡೆಗೆ ಹೆಚ್ಚಿನ ಗಮನವಿರಬೇಕು. ವಿದ್ಯೆ, ಜಾnನವಿದ್ದರೆ ಈಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು.ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಬೇಕೆನ್ನುವ ಮನೋಭಾವ ನಮ್ಮಲ್ಲಿ ಮೂಡಬೇಕು ಎಂದರು.

ಪ್ರತಿಭೆ ಗುರುತಿಸುವ ಕೆಲಸ: ಕಾಲೇಜುಪ್ರಾಂಶುಪಾಲ ಡಾ.ವಿ. ವೆಂಕಟೇಶ್‌ ಮಾತನಾಡಿ, ಕಾಲೇಜಿನ ಮಹಿಳಾ ಕೋಶ ಹಾಗೂ ಸಾಂಸ್ಕೃತಿಕಸಮಿತಿ ಮಹಿಳಾ ದಿನಾಚರಣೆ, ದೇಸೀ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವ ಕೆಲಸ ಮಾಡಿದೆ. ವಿದ್ಯಾರ್ಥಿನಿಯರು ಮಹಿಳಾ ದಿನಾಚರಣೆಯಂದು ಹೊಸ ಆಲೋಚನೆಯತ್ತ ಗಮನಹರಿಸಬೇಕು ಎಂದರು.

ಕಾಲೇಜಿನ ಸಾಂಸ್ಕೃತಿಕ ಸಂಚಾಲಕ ಡಾ.ಅಣ್ಣಯ್ಯ ತೈಲೂರುಮಾತನಾಡಿದರು. ದೇಸೀ ಸಂಭ್ರಮದ ನಿಮಿತ್16 ಹಬ್ಬಗಳ ಮಾದರಿಗಳನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೃಷ್ಟಿಸಿದ್ದರು. ಸ್ಪರ್ಧೆಗಳಲ್ಲಿಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾಲೇಜಿನಮಹಿಳಾ ಕೋಶದ ಸಂಚಾಲಕಿ ವಾಣಿಶ್ರೀ ಇದ್ದರು.

ಸಾಧನೆಗೆ ಸಹಕಾರ, ಪ್ರೋತ್ಸಾಹ ಅಗತ್ಯ :

ಮಾಗಡಿ: ಆಧುನಿಕ ಸಮಾಜದಲ್ಲಿ ಹೆಣ್ಣು ಸಮಾಜದ ಕಣ್ಣಾಗಿದ್ದು, ದಿನೇ ದಿನೇ ಸಮಾಜದಲ್ಲಿ ಸಾಧನೆಯ ಶಿಖರವೇರು ತ್ತಿದ್ದಾರೆ. ಸ್ತ್ರೀಯರ ಅದ್ವಿತೀಯ ಸಾಧನೆ ಗೆ ಎಲ್ಲರ ಸಹಕಾರ ಪ್ರೋತ್ಸಾಹ ಅಗತ್ಯ ಎಂದು ಡಾ. ಸವಿತಾ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದಿ.ಇಂದಿರಾ ಗಾಂಧಿ ಒಂದುವರೆ ದಶಕಗಳ ಕಾಲ ಈ ದೇಶದ ಪ್ರಧಾನಿ ಯಾಗಿ ಅತ್ಯತ್ತಮ ಆಡಳಿತ ನೀಡಿದ ಹೆಗ್ಗಳಿಕೆ ಮಹಿಳೆಯದಾಗಿದೆ. ಅದೇ ರೀತಿ ಐಎಎಸ್‌ ಅಧಿಕಾರಿ ಕಿರಣ್‌ಬೇಡಿ ಮುಂತಾದ ಮಹಿಳೆಯರು ಸಾಹಸ, ಕ್ರೀಡೆ, ಸಾಹಿತ್ಯ, ಸಂಗೀ ತ, ಕೃಷಿ,  ಉನ್ನತ ಅಧಿಕಾರಿ , ವಿಜ್ಞಾನಿ , ಸಮಾಜಸೇವಕರು ಸೇರಿದಂತೆ ಅನೇಕ ರಂಗ ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸಾಧನೆ ಮೆರೆದಿದ್ದಾರೆ ಎಂದರು.

ಸಮಾಜದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳ, ಅಬಲೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು. ಎಂದರು.

ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದೆ. ಮಾನವೀಯ ಮೌಲ್ಯಗಳುಳ್ಳ ಹೆಣ್ಣಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ದಿನದ 24 ಗಂಟೆ ಯೂ ದುಡಿಯುತ್ತಾ ಹೆಣ್ಣು ಅಬಲೆಯಲ್ಲ ಸಬಲೆ ಎಂದು ಈಗಾಗಲೇ ಎಲ್ಲ ರಂಗದಲ್ಲಿ ತೋರಿಸಿದ್ದಾಳೆ ಎಂದರು.

ಭ್ರೂಣ ಹತ್ಯೆ ನಿಲ್ಲಬೇಕು: ಡಾ. ಮಂಜುಳಾ ಮಾತನಾಡಿ,ಸಮಾಜದಲ್ಲಿ ಪ್ರತಿಯೊಬ್ಬರು ಹೆಣ್ಣಿಗೆಸಹಕಾರ ನೀಡಿದರೆ ಸಮಾಜದಲ್ಲಿಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ.ಮನೆ ಮತ್ತು ಸಮಾಜದ ಸ್ವಾಸ್ತ್ಯ,ಆರೋಗ್ಯ ಕಾಪಾ ಡಲು ಹೆಣ್ಣಿನಆರೋಗ್ಯ ಅತ್ಯಂತ ಮುಖ್ಯ. ಹೆಣ್ಣುಮಕ್ಕಳ ಬಾಲ್ಯವಿವಾಹ ಪದ್ಧತಿನಿರ್ಮೂಲನೆ, ಹೆಣ್ಣು ಭ್ರೂಣ ಹತ್ಯೆನಿಲ್ಲಬೇಕು. ಶಿಕ್ಷಣದಿಂದ ವಂಚಿತ ರಾಗದಂತೆ ಕಾಪಾಡುವುದು ಸಮಾಜದ ಹೊಣೆ ಎಂದರು. ಡಾ. ನಾಗ ‌ ನಾಥ್‌, ಡಾ.ರಫಿಕ್‌, ಡಾ. ಚಂದ್ರಲೇಖಾ,ಡಾ.ಮುಧೋಳು, ಗುಣ ಶೇಖರ್‌, ಆರ್‌.ರಂಗನಾಥ್‌, ವರುಣ್‌, ರಾಮು, ರವಿ, ಸಂಜಯ್‌, ಉಮಾಮಹೇಶ್ವರಿ,ಇಂದಿರಾ, ಲೀನಾ ಕುಮಾರಿ, ಕೇಶವ ಮೂರ್ತಿ, ಗೌತಮ್‌ ಇದ್ದರು.

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.