ಸೇವಾ ಮಾಣಿಕ್ಯನಿಗೆ ಕತಾರ್‌ ನಿಂದ ಬೀಳ್ಕೊಡುಗೆ


Team Udayavani, Mar 9, 2021, 7:24 PM IST

ಸೇವಾ ಮಾಣಿಕ್ಯನಿಗೆ ಕತಾರ್‌ ನಿಂದ ಬೀಳ್ಕೊಡುಗೆ

ಮೂರೂವರೆ ದಶಕಗಳಿಂದ ಕತಾರ್‌ನಲ್ಲಿ ಸೇವೆ ಸಲ್ಲಿಸಿದ ಸೇವಾ ಮಾಣಿಕ್ಯ, ಉಡುಪಿ  ಸಮೀಪದ ಅಂಬಲ್ಪಾಡಿ ಗ್ರಾಮದ ದಿವಾಕರ ಪೂಜಾರಿ ಅವರು ತಮ್ಮ ಜನ್ಮ ಭೂಮಿ ಭಾರತಕ್ಕೆ  ಮರಳಲು ನಿರ್ಧರಿಸಿದ್ದು, ಅವರಿಗೆ ಭಾರತೀಯ ಸಾಂಸ್ಕೃತಿಕ ಕೇಂದ್ರವು ಅಶೋಕ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.

ಜಾತಿ, ಮತ, ಬೇಧವಿಲ್ಲದೆ ಆಪದ್ಭಾಂಧವ. ಪ್ರಚಾರಪ್ರಿಯರಾಗದೆ, ವಿಚಾರ ಪ್ರಿಯರಾಗಿ ಬದುಕಿ, ಪರರಿಗೆ  ದಾರಿದೀಪ ತೋರಿದ ಸರಳ ಸ್ವಭಾವದ ಸಜ್ಜನ. ಆರ್ಯಭಟದಂತಹ ಪ್ರಶಸ್ತಿ ಮುಡಿಗೇರಿಸಿಕೊಂಡ ಸೇವಾಭಟ, ರಂಗಭೂಮಿಯ ಶ್ರೇಷ್ಠ ನಟರೆಂದೇ ಚಿರಪರಿಚಿತರಾಗಿರುವ ದಿವಾಕರ ಪೂಜಾರಿ ಅವರು  ಐಸಿಸಿ, ಐಸಿಬಿಎಫ್, ಐಬಿಪಿಸಿ, ಐಎಸ್‌ಸಿ  ಉಪ ಸಮಿತಿ ಸದಸ್ಯರಾಗಿ, ತುಳು ಕೂಟದ ಅಧ್ಯಕ್ಷರಾಗಿ, ಬಿಲ್ಲಾವಾಸ್‌ ಕತಾರ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಭಾರತೀಯ ಸಮುದಾಯಕ್ಕೆ ದಿವಾಕರ ಅವರು ನೀಡಿದ ಅವಿರತ ಕೊಡುಗೆಗಾಗಿ ಐಸಿಸಿ ವ್ಯವಸ್ಥಾಪನ ಸಮಿತಿಯು ಸ್ಮರಣಿಕೆಯನ್ನು ನೀಡಿ ಗೌರವಿಸಿತು.

ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಿಕೊಂಡು ನಡೆಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಯಾಡ್‌ ಉಸ್ಮಾನ್‌, ಅಜೀಮ್‌ ಅಬ್ಟಾಸ್‌, ಮಣಿಕಾಂತನ್‌, ನೀಲಂಗು ಡೇ, ಗಿರೀಶ್‌ ಕುಮಾರ್‌,  ಮಿಲನ್‌  ಅರುಣ್‌, ವಿನೋದ್‌ ನಾಯರ್‌, ಸೀನು ಪಿಳೈ ಭಾಗವಹಿಸಿದ್ದರು. ಐಸಿಸಿ ಉಪಾಧ್ಯಕ್ಷ  ಸುಬ್ರಹ್ಮಣ್ಯ ಹೆಬ್ಟಾಗಿಲು ಅಧ್ಯಕ್ಷತೆ ವಹಿಸಿ ಐಸಿಸಿ ಅಧ್ಯಕ್ಷ ಪಿ.ಎನ್‌. ಬಾಬು ರಾಜನ್‌ ಅವರ ಸಂದೇಶ ರವಾನಿಸಿದರು.  ಕಾರ್ಯಕ್ರಮವನ್ನು ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್‌ ಮುಕ್ತಾಯಗೊಳಿಸಿದರು.

ಅನಿವಾಸಿ ಭಾರತೀಯರ ಪಾಲಿನ ಸಹೃದಯಿ ಬಂಧು :

ದಿವಾಕರ ಪೂಜಾರಿ ಬಲ್ಲವರೆಲ್ಲರ ಪ್ರೀತಿಯ ಸಹೋದರ. ಕತಾರ್‌ನ ಅನಿವಾಸಿ ಭಾರತೀಯರಿಗೆ ಇವರು ಚಿರಪರಿಚಿತರು. ಕಷ್ಟವೆಂದು ಬಂದವರಿಗೆ ಕೈಲಾದ ಸಹಾಯ ನೀಡುವ, ಶ್ರಮದಾನದ ಆವಶ್ಯಕತೆ ಇರುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇವರು ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆಯ ಅನ್ನಯ್ಯ ಪೂಜಾರಿ, ಸರಸ್ವತಿ ಅನ್ನಯ್ಯ ಪೂಜಾರಿ ಅವರ ಪುತ್ರ. ಬಿಕಾಂ ಪದವಿ ಮುಗಿಸಿ ಸರಿ ಸುಮಾರು 36 ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಕತಾರ್‌ಗೆ

ಬಂದ ಮೊದಲ ಬಿಲ್ಲವ ನಾಯಕ. ಆರಂಭದಿಂದಲೇ ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯದಲ್ಲೂ ಮುಂಚೂಣಿ ಯಲ್ಲಿದ್ದ ಇವರು, 2011ರ ಮಾರ್ಚ್‌ನಲ್ಲಿ 35- 40 ಮಂದಿ ಬಿಲ್ಲವರನ್ನು ಒಗ್ಗೂಡಿಸಿ “ಕತಾರ್‌ ಬಿಲ್ಲವಾಸ್‌’ ಸಂಘವನ್ನು ಕಟ್ಟಿ ಅದರ ಪ್ರಥಮ ಅಧ್ಯಕ್ಷರಾದರು.

ಭಾರತದ ಯಾವುದೇ ಮೂಲೆಯ ವ್ಯಕ್ತಿ ಕತಾರ್‌ನಲ್ಲಿ ಸಾವನ್ನಪ್ಪಿದರೆ ಶವ ಪರೀಕ್ಷೆಯಿಂದ ಹಿಡಿದು ಕತಾರ್‌ ಸರಕಾರದೊಂದಿಗೆ ವಿಚಾರ ವಿನಿಮಯ ನಡೆಸಿ ದೇಶಕ್ಕೆ ಕಳುಹಿಸಿಕೊಡುವ ಕೆಲಸವನ್ನು ಅದೆಷ್ಟೋ ಬಾರಿ ನಡೆಸಿಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ  ಪರಿಚಯದವರನ್ನು ನೋಡಿಕೊಳ್ಳುವ ಕೊರತೆ ಇದ್ದರೆ ಅಲ್ಲಿ ಮೊತ್ತಮೊದಲು ಕಾಣಿಸಿಕೊಳ್ಳುತ್ತಾರೆ. ಅಗತ್ಯ ಸಾಮಗ್ರಿಗಳನ್ನು ತಲುಪಿಸಿ ವೈದ್ಯರೊಂದಿಗೆ ಮಾತುಕತೆ ನಡೆಸಿ ರೋಗಿ ಚೇತರಿಸಿಕೊಂಡು ಮನೆಗೆ ಹೋಗುವವರೆಗೆ ನೋಡಿಕೊಳ್ಳುತ್ತಿದ್ದರು. ತುಳುನಾಡಿನ ಯಾರೇ ಕೆಲಸ, ದಾಖಲೆಗಳನ್ನು ಕಳೆದುಕೊಂಡಲ್ಲಿ ಅವರಿಗೆ ಆಶ್ರಯ ನೀಡಿ ತಾಯ್ನಾಡಿಗೆ ಮರಳುವವರೆಗೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.

ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಇತ್ತೀಚಿನವರೆಗೂ  ಕತಾರ್‌ನ ಓಲಿಪಿಂಕ್‌ ಕಮಿಟಿಯೊಂದಿಗೆ ಕತಾರ್‌ ವಿರೋಧಿ ಡೋಪಿಂಗ್‌ ಸಮಿತಿಯಲ್ಲಿ ಸಂಯೋಜಕ ರಾಗಿದ್ದರು. ಅಲ್ಲದೇ 2014- 16ರ ವರೆಗೆ ಭಾರತೀಯ ಸಾಂಸ್ಕೃತಿಕ ಕೇಂದ್ರ, 2008- 10ರ ವರೆಗೆ, 10- 12ರವರೆಗೆ ಭಾರತೀಯ ಸಮುದಾಯ ಲಾಭದಾಯಕ ವೇದಿಕೆ ಭಾರತೀಯ ರಾಯಭಾರ ಕಚೇರಿ, 2004- 06ರವರೆಗೆ ಇಂಡಿಯನ್‌ ಬಿಸಿನೆಸ್‌ ಪ್ರೊಫೆಷನಲ್‌ ನೆಟ್‌ವರ್ಕ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ತುಳುಕೂಟದ ಅಧ್ಯಕ್ಷರಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದು, ಸಲಹಾ ಮಂಡಳಿ ಸದಸ್ಯರಾಗಿದ್ದರು. 12ನೇ ವಿಭಾಗದ ಏರಿಯಾ ಗವರ್ನರ್‌, ಟಾಕಿಂಗ್‌ ಮ್ಯಾಟರ್ಸ್‌ ಟೋಸ್ಟ್‌ ಮಾಸ್ಟರ್ಸ್‌ ಮತ್ತು ಟೋಸ್ಟ್‌ ಮಾಸ್ಟರ್‌ ಕ್ಲಬ್‌ ಹಾಗೂ ಅಂತಾರಾಷ್ಟ್ರೀಯ ಟೋಸ್ಟ್‌ ಮಾಸ್ಟರ್ಸ್‌ಗಳಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿರುವ ಇವರು, ವಲಸಿಗ ಸಮುದಾಯಕ್ಕಾಗಿ ರೆಡ್‌ ಕ್ರೆಸೆಂಟ್‌ ವಿಪತ್ತು ನಿರ್ವಹಣೆ ತರಬೇತಿ ಸಂಯೋಜಕರು, ಕತಾರ್‌ ವಿರೋಧಿ ಡೋಪಿಂಗ್‌ ಆಯೋಗದ ಡೋಪಿಂಗ್‌ ನಿಯಂತ್ರಣಾಧಿಕಾರಿ, ದೋಹಾ ಏಷ್ಯನ್‌ ಗೇಮ್ಸ್‌ ಮತ್ತು ಪಶ್ಚಿಮ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಸಕ್ರಿಯ ಸ್ವಯಂ ಸೇವಕ, ರಕ್ತದಾನ ಅಭಿಯಾನ, ಗ್ರೀನ್‌ ಮತ್ತು ಕ್ಲೀನ್‌ ಕತಾರ್‌ ಅಭಿಯಾನದ ಸಂಯೋಜಕ, ಐಸಿಸಿ, ಐಸಿಬಿಎಫ್, ಐಬಿಪಿಎನ್‌, ತುಳುಕೂಟ ಮತ್ತು ಕರ್ನಾಟಕ ಸಂಘದ ಸದಸ್ಯರೂ ಆಗಿದ್ದಾರೆ.

ಪ್ರಶಸ್ತಿಗಳು :

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಾಗಿ ಅತ್ಯುತ್ತಮ ಟೋಸ್ಟ್‌ ಮಾಸ್ಟರ್‌ ಗೌರವ, ತುಳುಕೂಟದಿಂದ 10 ವರ್ಷಗಳ ಕೊಡುಗೆಗಾಗಿ ಹಾಗೂ ಐಬಿಪಿಎನ್‌ನಿಂದ ಮೆಚ್ಚುಗೆ ಪ್ರಶಸ್ತಿ, ಬಂಟ್ಸ್‌ ಕತಾರ್‌ನಿಂದ ಮಾನವೀಯ ಸೇವಾ ಪ್ರಶಸ್ತಿ, 2014ರಲ್ಲಿ ಕೆಎಂಸಿಎಯ ಅತ್ಯುತ್ತಮ ಸಮುದಾಯ ಸೇವಾ ಪ್ರಶಸ್ತಿ ಲಭಿಸಿದೆ. ಇವರ ಪ್ರತಿಯೊಂದು ಕಾರ್ಯಗಳಿಗೂ ಪತ್ನಿ ಪ್ರಮೀಳಾ ಮತ್ತು ಮಗಳು ದೀಪಾ ಜತೆಯಾಗಿದ್ದಾರೆ.

 

-ಪುನೀತ್‌ ಸಾಗರ್‌,  ಕತಾರ್‌

ಟಾಪ್ ನ್ಯೂಸ್

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.