ಉರಿಯದ ಬೀದಿದೀಪ : ಕತ್ತಲೆಯಲ್ಲಿ ಬಂಡಿಮಠ ಬಸ್ ನಿಲ್ದಾಣ
ಕುಡುಕರ ಹಾವಳಿ, ಸ್ವಚ್ಛತೆಯ ಕೊರತೆ
Team Udayavani, Mar 10, 2021, 5:40 AM IST
ಕಾರ್ಕಳ: ಸಂಜೆ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಕಾರ್ಕಳ ಬಂಡಿಮಠ ಬಸ್‌ನಿಲ್ದಾಣವೂ ಕತ್ತಲಲ್ಲಿ ಮುಳುಗುತ್ತದೆ.
ಹಲವು ಸಮಯಗಳಿಂದ ಬಂಡಿಮಠ ಬಸ್ ನಿಲ್ದಾಣದ ಬೀದಿದೀಪ ಉರಿಯುತ್ತಿಲ್ಲ. ದೀಪಗಳಿಲ್ಲದ್ದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯಲು ಭಯ ಪಡುವಂತಾಗಿದೆ.
ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ತಾಣವಿದು. ನಿಲ್ದಾಣ ಪುರಸಭೆಯ 5ನೇ ವಾರ್ಡ್‌ನಲ್ಲಿದೆ. 2011-12ರಲ್ಲಿ 2.18 ಎಕರೆ ಜಾಗವನ್ನು ಬಸ್ ನಿಲ್ದಾಣಕ್ಕೆ ಕಾಯ್ದಿರಿಸಲಾಗಿತ್ತು. 1.78 ಎಕರೆ ವಿಸ್ತೀರ್ಣದಲ್ಲಿ 2 ಕೋ. ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿಗಳನ್ನು ನಡೆಸಿ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ.
ಇಳಿಸಿದ ಬಳಿಕ ಏರಿಸಿಲ್ಲ
ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ಹೈಮಾಸ್ಟ್ ದೀಪ ಅಳವಡಿಸ ಲಾಗಿತ್ತು. ಅದರಲ್ಲಿರುವ ಬಲ್ಬ್ಗಳೆಲ್ಲ ಹಲವು ಸಮಯದಿಂದ ಕೆಟ್ಟು ಹೋಗಿವೆ. ದುರಸ್ತಿಗೆಂದು ಹೈಮಾಸ್ಟ್ ದೀಪದ ಕಂಬದಲ್ಲಿ ಬಲ್ಬ್ಗಳಿರುವ ಯುನಿಟ್ ಅನ್ನು ಕೆಳಗಿಳಿಸಿ ದುರಸ್ತಿ ನಡೆಸದೆ ಹಾಗೆಯೇ ಬಿಡಲಾಗಿದೆ.
ದಿನಕ್ಕೆ 150ಕ್ಕೂ ಅಧಿಕ ಬಸ್‌ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ತಾಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿ ಈ ಬಸ್ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪುಂಡರ ತಾಣವಾಗಿದೆ. ಬೆಳಕಿಲ್ಲದೆ ಇರುವುದರಿಂದ ಕತ್ತಲಿನಲ್ಲಿ ನಿಂತು ಬಸ್ ಕಾಯುವ ಪರಿಸ್ಥಿತಿಯಿದೆ. ಹೆಣ್ಣುಮಕ್ಕಳಿಗೆ ಸುರಕ್ಷತೆ ಭೀತಿ ಎದುರಾಗಿದೆ.
ರಾತ್ರಿ ಮದ್ಯ ಸೇವನೆ ಮಾಡಿ ಸುತ್ತಾಡುವುದು, ಸಾರ್ವಜನಿಕ ಸ್ಥಳ ಗಳಲ್ಲಿ ಸಿಗರೇಟು, ಬೀಡಿ ಸೇದುವುದು ಇಲ್ಲಿ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಒಳಗೆ ಕೆಲವರು ಮಲಗಿರುತ್ತಾರೆ.
ಸ್ವಚ್ಛತೆ ಕೊರತೆ
ಬಸ್ ನಿಲ್ದಾಣ ಪರಿಸರದಲ್ಲಿ ಸ್ವಚ್ಛತೆ ಕೊರತೆಯೂ ಕಂಡು ಬರುತ್ತಿದೆ. ಪರಿಸರದ ಅಲ್ಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಮದ್ಯದ ಬಾಟಲಿಗಳು ಬಿದ್ದಿವೆ. ಬೀಡಿ, ಸಿಗರೇಟು ತುಂಡುಗಳನ್ನು ಎಸೆಯಲಾಗಿದೆ.
ಲಾಕ್‌ಡೌನ್ ಬಳಿಕ ಬಸ್ ಸಂಚಾರ ಎಂದಿನಂತೆ ಇದೆ. ಆದರೆ ಬೆಳಕು ಇನ್ನಿತರ ಕೆಲ ಮೂಲ ಸೌಕರ್ಯ ಕೊರತೆಯಿಂದ
ಹೆಣ್ಣುಮಕ್ಕಳು ಇತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಬೆಳಕಿನ ವ್ಯವಸ್ಥೆ ಜತೆಗೆ ರಾತ್ರಿ ಇಲ್ಲಿ ಮದ್ಯ ಸೇವನೆ ಮಾಡುವುದಕ್ಕೆ ನಿಯಂತ್ರಣ ಹೇರಬೇಕಿದೆ ಎನ್ನುತ್ತಾರೆ ಪ್ರಯಾಣಿಕರು.
ಕೊಟೇಶನ್ ಸಿದ್ಧ
ಬಂಡಿಮಠ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ದೀಪ ದುರಸ್ತಿಗೆ ಕೊಟೇಶನ್ ಸಿದ್ಧವಾಗಿದೆ. ದುರಸ್ತಿಗೆಂದು ಕಂಬದಿಂದ ಬಲುºಗಳನ್ನು ಕೆಳಗೆ ಇಳಿಸಲಾಗಿದೆ. ಶೀಘ್ರ ಇದರ ದುರಸ್ತಿ ನಡೆಸಲಾಗುವುದು.
-ಪದ್ಮನಾಭ, ಎಂಜಿನಿಯರ್ , ಪುರಸಭೆ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.