ಕೋವಿಡ್ ಪರಿಣಾಮ : ದೇಶದಲ್ಲಿ 10,113 ಕಂಪೆನಿಗಳು ಸ್ಥಗಿತ..!
ಕಂಪೆನಿಗಳ ಸ್ಥಗಿತಕ್ಕೆ ಕೋವಿಡ್ ಹೊಡೆತವೇ ಕಾರಣ..!
Team Udayavani, Mar 10, 2021, 10:38 AM IST
ನವ ದೆಹಲಿ : ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಹಲವು ಕ್ಷೇತ್ರಗಳು ಅಡಿಮೇಲಾಗಿವೆ ಮತ್ತು ಇನ್ನೂ ಕೂಡ ಸುಧಾರಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡುತ್ತಿವೆ.
ದೆಹಲಿಯಲ್ಲಿ ಕೋವಿಡ್ ಬಿಕ್ಕಟ್ಟಿನ ಕಾರಣದಿಂದಾಗಿ ಒಟ್ಟು 2,395 ಕಂಪನಿಗಳು, ಉತ್ತರ ಪ್ರದೇಶದಲ್ಲಿ 1,936 ಕಂಪನಿಗಳು. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ, ಏಪ್ರಿಲ್ 2020 ಮತ್ತು ಫೆಬ್ರವರಿ 2021 ರ ನಡುವೆ 1,322 ಮತ್ತು 1,279 ಕಂಪನಿಗಳು ಕೋವಿಡ್ ಕಾರಣದಿಂದ ಸ್ಥಗಿತಗೊಂಡಿವೆ.
ಓದಿ : ‘ಸ್ಯಾಟಲೈಟ್ ಮ್ಯಾನ್’ ಉಡುಪಿ ರಾಮಚಂದ್ರರಾವ್ ಅವರ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಸಾವಿರಾರು ಕಂಪನಿಗಳು ತಮ್ಮ ಸ್ವಂತ ಇಚ್ಛಾಶಕ್ತಿಯ ವ್ಯವಹಾರವನ್ನು ಮುಚ್ಚಿವೆ. ಕಳೆದ ವರ್ಷ ಏಪ್ರಿಲ್ 2020 ರಿಂದ ಫೆಬ್ರವರಿ 2021 ರವರೆಗೆ ಸರ್ಕಾರದಲ್ಲಿ ನೋಂದಾಯಿತ 10,113 ಕಂಪನಿಗಳು ಸ್ವಯಂಪ್ರೇರಣೆಯಿಂದ ಸ್ಥಗಿತಗೊಳ್ಳಲು ನಿರ್ಧರಿಸಿವೆ. ಕೋವಿಡ್ ಲಾಕ್‌ಡೌನ್ ನ ಪರಿಣಾಮ ಇಡಿ ದೇಶದ ವ್ಯವಹಾರ ಕ್ಷೇತ್ರ ಮತ್ತು ಆರ್ಥಿಕ ಕ್ಷೇತ್ರದ ಮೇಲೆ ಪ್ರಹಾರ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2,395 ಕಂಪನಿಗಳು ಮುಚ್ಚಲ್ಪಟ್ಟಿವೆ ಎಂದು ಸರ್ಕಾರ ಮಾಹಿತಿ ನಿಡಿದೆ.
ಕಂಪೆನಿಗಳ ಸ್ಥಗಿತಕ್ಕೆ ಕೋವಿಡ್ ಹೊಡೆತವೇ ಕಾರಣ..!
ಭಾರತದಲ್ಲಿ ಲಾಕ್‌ಡೌನ್ ಘೋಷಣೆಯ ನಂತರ, ಪಡಿತರ, ಔಷಧಿಗಳು ಮತ್ತು ಇತರ ಅಗತ್ಯ ಕ್ಷೇತ್ರಗಳನ್ನು ಹೊರತಾಗಿ ಉಳಿದೆಲ್ಲಾ ಕ್ಷೇತ್ರಗಳನ್ನು ಬಂದ್ ಮಾಡಲು ಸೂಚಿಸಲಾಯಿತು. ಇದರಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಬಲವಾದ ಪಟ್ಟು ಬಿದ್ದಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ. ಈ ಕೋವಿಡ್ ಸಾಂಕ್ರಾಮಿಕ ಸೋಂಕಿನ ಪ್ರಭಾವದಿಂದ ದೆಹಲಿಯಲ್ಲಿ 2,395 ಕಂಪೆನಿಗಳು ಮುಚ್ಚಲ್ಪಟ್ಟಿವೆ ಎಂದು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಮಾಹಿತಿ ನೀಡಿದೆ.
ದೇಶದ ಒಟ್ಟು 10,113 ಕಂಪನಿಗಳು ಈ ವರ್ಷದ ಫೆಬ್ರವರಿ ವೇಳೆಗೆ ಸ್ವಯಂಪ್ರೇರಣೆಯಿಂದ ತಮ್ಮ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿದೆ. ಕಂಪೆನಿ ಕಾಯ್ದೆ 2013 ರ ಈ ವಿಭಾಗವು ಒಂದು ಕಂಪನಿಯು ತನ್ನ ವ್ಯವಹಾರವನ್ನು ಸ್ವಯಂಪ್ರೇರಣೆಯಿಂದ ಮುಚ್ಚಲು ಬಯಸಿದರೆ, ಅದರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಕಂಪೆನಿ ಕಾಯ್ದೆ 2013 ರ ಸೆಕ್ಷನ್ 248 (2) ರ ಅಡಿಯಲ್ಲಿ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ.
ಓದಿ : 103 ವರ್ಷದ ಜಿ. ಕಾಮೇಶ್ವರಿ ಕೋವಿಡ್ ಲಸಿಕೆ ಪಡೆದ ದೇಶದ ಅತ್ಯಂತ ಹಿರಿಯ ಮಹಿಳೆ
ದೆಹಲಿಯಲ್ಲಿ 2394, ಉತ್ತರ ಪ್ರದೇಶದಲ್ಲಿ 1936, ತಮಿಳು ನಾಡಿನಲ್ಲಿ 1322, ಮಹಾರಾಷ್ಟ್ರದಲ್ಲಿ 1279, ಕರ್ನಾಟಕದಲ್ಲಿ 836, ಚಂಡಿಗಡದಲ್ಲಿ 501, ರಾಜಸ್ಥಾನದಲ್ಲಿ 479, ತೆಲಂಗಾಣದಲ್ಲಿ 404, ಕೇರಳದಲ್ಲಿ 307, ಜಾರ್ಖಾಂಡ್ ನಲ್ಲಿ 137, ಮಧ್ಯ ಪ್ರದೇಶದಲ್ಲಿ 111, ಬಿಹಾರ್ ನಲ್ಲಿ 104, ಮೇಘಾಲಯದಲ್ಲಿ 88, ಒಡಿಸಾದಲ್ಲಿ 78, ಛತ್ತಿಸಗಡದಲ್ಲಿ 47, ಗೋವಾದಲ್ಲಿ 36, ಪುದುಚೆರಿಯಲ್ಲಿ 31, ಗುಜರಾತ್ ನಲ್ಲಿ 17, ಪಶ್ಚಿಮ ಬಂಗಾಳದಲ್ಲಿ 4, ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ 2 ಕಂಪೆನಿಗಳು ಸೇರಿ ದೇಶದಲ್ಲಿ ಒಟ್ಟು 10,113 ಕಂಪೆನಿಗಳು ಸ್ವಯಂಪ್ರೇರಣೆಯಿಂದ ತಮ್ಮ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಓದಿ : ರಾಬರ್ಟ್ ಹಬ್ಬಕ್ಕೆ ಒಂದೇ ದಿನ ಬಾಕಿ: ಅಭಿಮಾನಿಗಳ ಜೊತೆಗೆ ಇಡೀ ಚಿತ್ರರಂಗಕ್ಕೂ ನಿರೀಕ್ಷೆ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.