ಈ ಮೃಗಾಲಯದಲ್ಲಿ ತೋಳ ನೋಡಲು ಹೋದ ಜನರಿಗೆ ಕಾದಿತ್ತು ಅಚ್ಚರಿ..!
ಏನಿದು ಆಶ್ಚರ್ಯ…!
Team Udayavani, Mar 10, 2021, 1:59 PM IST
ಸಾಮಾನ್ಯವಾಗಿ ಎಲ್ಲರೂ ಮೃಗಾಲಯಗಳಿಗೆ ಹೋಗುವುದು ಹೊಸ ಹೊಸ ಪ್ರಾಣಿಗಳನ್ನು, ಪಕ್ಷಿಗಳನ್ನು ನೋಡಲು. ಝೂಗಳಲ್ಲಿ ವಿಚಿತ್ರವಾದ ಪಾಣಿಗಳನ್ನು ಕಾಣುವ ಪ್ರವಾಸಿಗರು ತುಂಬಾನೆ ಎಂಜಾಯ್ ಮಾಡ್ತಾರೆ. ಆದ್ರೆ ನಾಮಫಲಕದಲ್ಲಿ ಒಂದು ಪ್ರಾಣಿಯ ಹೆಸರುನ್ನು ಹಾಕಿ, ಝೂ ನಲ್ಲಿ ಇನ್ಯಾವುದೋ ಪ್ರಾಣಿಯನ್ನು ತೋರಿಸಿದ್ರೆ ಹೇಗಿರುತ್ತೇ..? ಅಂತಹ ಘಟನೆ ಚೀನಾದ ಒಂದು ಮೃಗಾಯಲದಲ್ಲಿ ನಡೆದಿದ್ದು ಸಖತ್ ವೈರಲ್ ಆಗುತ್ತಿದೆ.
ಹಾಗಾದ್ರೆ ಆ ಝೂನಲ್ಲಿ ಏನಾಯ್ತು ಎಂಬುದನ್ನ ತಿಳಿಯೋಣ. ಚೀನಾದ ಕ್ಸಿಯಾಂಗ್ ವುಶನ್ ಮೃಗಾಲಯದ ಒಂದು ಬೋನಿನಲ್ಲಿ ತೋಳವನ್ನು ಇರಿಸಿರುವುದಾಗಿ ಹೇಳಲಾಗಿತ್ತು. ಆದ್ರೆ ವೀಕ್ಷಕರು ಅಲ್ಲಿಗೆ ಹೋಗಿ ನೋಡಿದಾಗ ಆಶ್ಚರ್ಯ ಒಂದು ಕಾದಿತ್ತು. ತೋಳವನ್ನು ಇಡುವ ಜಾಗಲ್ಲಿ ಕಪ್ಪು ಬಣ್ಣದ ನಾಯಿಯನ್ನು ಕೂಡಿ ಹಾಕಲಾಗಿತ್ತು. ಇದನ್ನು ನೋಡಿದ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಗಳ ಸುರಿಮಳೆ ಗೈಯುತ್ತಿದ್ದಾರೆ. ಇದೇನು ತೋಳಾನಾ… ತೋಳ ಹೀಗೂ ಇರುತ್ತಾ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.
ಕ್ಸಿಯಾಂಗ್ ವುಶನ್ ಝೂನಲ್ಲಿ ಈ ರೀತಿಯ ಅವಾಂತರಗಳು ಮೊದಲೇನಲ್ಲ. ಈ ಹಿಂದೆಯೊಮ್ಮೆ ಜೀಬ್ರಾಗಳನ್ನು ತೋರಿಸುತ್ತೇವೆ ಎಂದು ನಕಲಿ ಜೀಬ್ರಾಗಳನ್ನು ತೋರಿಸಿದ್ದರು. ಕತ್ತೆಗಳಿಗೆ ಜೀಬ್ರಾಗಳ ರೀತಿಯಲ್ಲಿ ಬಣ್ಣ ಹಚ್ಚಿ ಮೃಗಾಲಯದಲ್ಲಿ ನಿಲ್ಲಿಸಲಾಗಿತ್ತು.
ಇತ್ತೀಚೆಗೆ ನಡೆದ ತೋಳದ ಘಟನೆ ಬಗ್ಗೆ ಮೃಗಾಲಯ ಸಿಬ್ಬಂದಿ ಮಾಹಿತಿ ನೀಡಿದ್ದು, ಈ ಬೋನಿನಲ್ಲಿ ಮೊದಲು ತೋಳವನ್ನೇ ಇರಿಸಲಾಗಿತ್ತು. ಆದ್ರೆ ಆ ತೋಳವು ಸಾವಿಗೀಡಾದ ಕಾರಣ ಆ ಜಾಗಕ್ಕೆ ತಾತ್ಕಾಲಿಕವಾಗಿ ನಾಯಿಯನ್ನು ಇರಿಸಲಾಗಿದೆ ಎಂದಿದ್ದಾರೆ.
ಮತ್ತೊಂದು ಮಾಹಿತಿ ನೀಡಿರುವ ಸಿಬ್ಬಂದಿ, ಇಲ್ಲಿನ ಮೂಲ ಆದಾಯವೇ ಪ್ರವೇಶ ಶುಲ್ಕ. ಪ್ರಾಣಿಗಳೇ ಇಲ್ಲದಿದ್ದರೆ ಇಲ್ಲಿಗೆ ಬರುವ ಜನರು ಕಡಿವೆಯಾಗುತ್ತಾರೆ ಎಂಬ ಕಾರಣದಿಂದ ಈ ರೀತಿ ಮಾಡಲಾಗಿದ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.