ಕುದೂರಿನ ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು
Team Udayavani, Mar 10, 2021, 2:35 PM IST
ಕುದೂರು: ಕುದೂರಿನ ಮುಖ್ಯ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದ್ದು, ಮಾರುದ್ದಕೊಂದು ಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ.
ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತರೆ ಸ್ಥಳೀಯ ಗ್ರಾಮ ಪಂಚಾಯಿತಿ ಗುಂಡಿ ಮುಚ್ಚಿಸುವ ಕಾರ್ಯಕ್ಕೂ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಅನೇಕ ತಿಂಗಳಿಂದ ಕುದೂರು ಮುಖ್ಯ ರಸ್ತೆ ಇದೇ ಪರಿಸ್ಥಿತಿಯಲ್ಲಿದೆ. ಕೆಲವಡೆ ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ಮುಂದಿನ ಚಕ್ರ ಸರಿಸುವುದಕೆ ಹೋದರೆ ಹಿಂದಿನ ಚಕ್ರ ಗುಂಡಿಯೊಳಗೆ ಇಳಿಯುತ್ತದೆ. ಇದರಿಂದ ಹಲವು ಜನರು ಬಿದ್ದು ಗಾಯಗೊಂಡ ಉದಾಹರಣೆ ಬೇಕಾದಷ್ಟಿದೆ. ಈ ಬಗ್ಗೆ ಗ್ರಾಪಂ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ,
ಇದೇ ರಸ್ತೆಯಲ್ಲಿ ಪ್ರತಿದಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಓಡಾಡುತ್ತಾರೆ. ಇವರ್ಯಾರಿಗೂ ಗುಂಡಿಗಳುಕಣ್ಣಿಗೆ ಬಿದ್ದೇ ಇಲ್ವಾ ಅಥವಾ ನಮಗೂ ಇದಕ್ಕೂ ಸಂಬಂಧವಿಲ್ಲ, ಲೋಕೋಪಯೋಗಿಯವರು ಬೇಕಾದರೇ ಮಾಡಲಿ ಎಂದು ಸುಮ್ಮನಿದ್ದಾರೂಗೊತ್ತಾಗುತ್ತಿಲ್ಲ ಎಂದು ಸಾರ್ವಜನಿಕರುಮಾತನಾಡಿಕೊಳ್ಳುತ್ತಿದ್ದಾರೆ. ಪಂಚಾಯಿತಿ ಯವರು ಮನಸ್ಸು ಮಾಡಿದರೆ ಅರ್ಧದಿನದಲ್ಲಿ ಗುಂಡಿ ಮುಚ್ಚಿಸುವ ಕೆಲಸ ಮಾಡಬಹುದು. ಬೇಜಾವಾಬ್ದಾರಿ ತನದಿಂದ ನನೆಗುದ್ದಿಗೆ ಬಿದ್ದಿದೆ.
ಮುಖ್ಯ ರಸ್ತೆ ಸಂಪೂರ್ಣ ಅದ್ವಾನ: ಕುದೂರು ಗ್ರಾಪಂ ಕಚೇರಿಯಿಂದ ಸಂತೆ ಸರ್ಕಲ್‌ವರೆಗೂ ಅರ್ಧ ಕಿ.ಮೀ. ರಸ್ತೆ ಸಂಪೂರ್ಣ ಅದ್ವಾನವಾಗಿದೆ. ಕೆಲವಡೆ ಸಣ್ಣ ಸಣ್ಣಗುಂಡಿಗಳು ಬಿಟ್ಟರೆ ಮತ್ತೆ ಕೆಲವಡೆ ದೊಡ್ಡ ದೊಡ್ಡ ಗುಂಡಿಗಳಿವೆ. ಕಣ್ಣಾಯಿಸಿದಷ್ಟು ದೂರ ಕಾಣುವ ಗುಂಡಿಗಳೇ. ಈ ರಸ್ತೆಯಲ್ಲಿ ಸಂಚಾರಮಾಡುವುದೇ ದುಸ್ಸಾಹಸವಾಗಿದೆ.
ಮೊಂಡತನ ತೋರುತ್ತಿರುವ ಲೋಕಪಯೋಗಿ ಇಲಾಖೆ: ಕುದೂರು ಮುಖ್ಯ ರಸ್ತೆಯ ದುಸ್ಥಿತಿ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಾಮೊಂಡುತನಾ ಪ್ರದರ್ಶಿಸುತ್ತಿದ್ದಾರೆ. ದಿನ ಕಳೆದಂತೆ ಗುಂಡಿಗಳು ದೊಡ್ಡದಾಗುತ್ತಿದ್ದು, ಸಂಪೂರ್ಣ ರಸ್ತೆಯನ್ನು ಅವರಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಕುದೂರು ಮುಖ್ಯ ರಸ್ತೆಯಲ್ಲಿ ಸಂಚರಿಸುವುದೇ ದುಸ್ಸಾಹಸವಾಗಿದೆ.ಅದರಲ್ಲೂ ವಯಸ್ಸಾದವರಂತೂ ಬೈಕ್‌ಗಳಲ್ಲಿಕರೆದುಕೊಂಡು ಬಂದರೆ ಗುಂಡಿಯಿಂದ ಇಳಿಸಿಹತ್ತಿಸಿ ಹೋಗುವಷ್ಟರಲ್ಲಿ ಸೊಂಟ, ಮೈ-ಕೈನೋವುಗಳಿಂದ ಎಣಗಬೇಕಾಗುತ್ತದೆ. ಓಡಾಡುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ● ದ್ವಾರಕನಾಥ್, ಕುದೂರು ನಿವಾಸಿ,
ಕುದೂರಿನ ಮುಖ್ಯ ರಸ್ತೆ ಸಂಪೂರ್ಣ ಅದ್ವಾನವಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಾದರೂ ಎಚ್ಚೆತ್ತುಕೊಂಡು ಗುಂಡಿ ಮುಚ್ಚಿಸುವಕೆಲಸ ಮಾಡಿಸುತ್ತಾರೂ ಕಾದು ನೋಡಬೇಕಿದೆ.● ಬಿ.ಜಿ.ಕೃಷ್ಣಕುಮಾರ್, ವರ್ತಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.