ವಾಯವ್ಯ ಸಾರಿಗೆಗೆ ಬಾಡಿಗೆ ನಷ್ಟದ ಬರೆ
| ಹಳೇ ಬಸ್‌ನಿಲ್ದಾಣದ 37 ಮಳಿಗೆ ತೆರವು | ನೂತನ ಕಟ್ಟಡ ವಿಳಂಬ | ಬರುವ ಆದಾಯವೂ ಖೋತಾ
Team Udayavani, Mar 10, 2021, 5:09 PM IST
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿನ ಹಳೇ ಬಸ್‌ನಿಲ್ದಾಣ ಹೊಸ ಕಟ್ಟಡ ಕಾಮಗಾರಿಗೆ ಯೋಜಿಸಲಾಗಿದೆ.ಆದರೆ, ಕಾಮಗಾರಿ ಆರಂಭವಾಗದೆ ವಿಳಂಬದಿಂದಾಗಿ ಈಗಾಗಲೇ ನಷ್ಟದಸುಳಿಗೆ ಸಿಲುಕಿರುವ ವಾಯವ್ಯ ಸಾರಿಗೆ ಸಂಸ್ಥೆ ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.
ನೂತನ ಕಟ್ಟಡ ಕಾಮಗಾರಿಆರಂಭವಾಗುತ್ತದೆ ಎಂಬ ಉದ್ದೇಶದಿಂದವಾಯವ್ಯ ಸಾರಿಗೆ ಸಂಸ್ಥೆ, ಹಳೇ ಬಸ್ ನಿಲ್ದಾಣದಲ್ಲಿ ಇದ್ದ ಸುಮಾರು 37 ಮಳಿಗೆದಾರರನ್ನು ತೆರವುಗೊಳಿಸಿದ್ದು,ಕಾಮಗಾರಿಯೂ ಆರಂಭವಾಗಿಲ್ಲ. ಸಂಸ್ಥೆಗೆಬರುವ ಬಾಡಿಗೆ ಆದಾಯವೂ ಇಲ್ಲವಾಗಿದೆ.ವಿಳಂಬ ಆಗುತ್ತದೆ ಎಂದಾಗಿದ್ದರೆ ಇನ್ನಷ್ಟು ದಿನಗಳವರೆಗೆ ಮಳಿಗೆಗಳನ್ನು ಮುಂದುವರಿಸಬಹುದಾಗಿತ್ತಲ್ಲ ಎಂಬ ಚಿಂತನೆ ಕೆಲವರದ್ದಾಗಿದೆ.
ಹಳೇ ಬಸ್ ನಿಲ್ದಾಣಕ್ಕೆ ಆತ್ಯಾಧುನಿಕ ಸ್ಪರ್ಶ ನೀಡಲು ಸ್ಮಾರ್ಟ ಸಿಟಿ ಕಂಪನಿಮುಂದಾಗಿದ್ದು, ಅಂದಾಜು 36 ಕೋಟಿರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವಹಳೇ ಬಸ್ ನಿಲ್ದಾಣದ ನೂತನ ಕಟ್ಟಡಕಾಮಗಾರಿ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಮುಂದಿನಪ್ರಕ್ರಿಯೆಗಳ ಮುಕ್ತಾಯದ ನಂತರಕಾಮಗಾರಿ ಆರಂಭವಾಗಬೇಕಿದೆ. ಸ್ಮಾರ್ಟ್ ಸಿಟಿ ಕಂಪನಿಯಿಂದ ಜನೆವರಿ ಕೊನೆಯವರೆಗೂ ಬಸ್ ನಿಲ್ದಾಣವನ್ನು ನಮಗೆ ಹಸ್ತಾಂತರಿಸುವಂತೆ ಪತ್ರಮುಖೇನ ಕೇಳಿಕೊಳ್ಳಲಾಗಿತ್ತು. ತದನಂತರಟೆಂಡರ್ ಪ್ರಕ್ರಿಯೆ ಒಂದು ತಿಂಗಳ ಕಾಲಮುಂದೂಡಿದ್ದರಿಂದ ಎಲ್ಲ ಕೆಲಸಗಳು ವಿಳಂಬವಾಗುತ್ತಿವೆ ಎನ್ನಲಾಗುತ್ತಿದೆ.
ಹಳೇ ಬಸ್ ನಿಲ್ದಾಣದ ನೂತನ ಕಟ್ಟಡ ನಿರ್ಮಾದ ಗುತ್ತಿಗೆಯನ್ನು ಟ್ರಿನಿಟಿಏಜೆನ್ಸಿ ಪಡೆದುಕೊಂಡಿದ್ದು, ಟ್ರಿನಿಟಿಸಂಸ್ಥೆಯವರು ಸ್ಮಾರ್ಟ್ ಸಿಟಿ ಕಂಪೆನಿಯವರೊಂದಿಗೆ ಒಪ್ಪಂದ ಮಾಡಿಕೊಂಡು, ಕಾಮಗಾರಿ ಆರಂಭಗೊಳಿಸಬೇಕಿದೆ. ತಾಂತ್ರಿಕ ಸೇರಿದಂತೆ ವಿವಿಧ ಕಾರಣಗಳಿಗಾಗಿ ಗುತ್ತಿಗೆ ಪಡೆದಸಂಸ್ಥೆಗೆ ಕೆಲಸದ ಕಾರ್ಯಾದೇಶ ಇನ್ನೂ ದೊರೆತಿಲ್ಲ ಎನ್ನಲಾಗುತ್ತಿದೆ.
ಮಳಿಗೆಗಳಿಂದ ಬರುತ್ತಿದ್ದ 20-25 ಲಕ್ಷ ಆದಾಯ ನಷ್ಟ :
ಹಳೇ ಬಸ್ ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಉದ್ದೇಶದಿಂದಾಗಿ ನಿಲ್ದಾಣದಲ್ಲಿ ಇದ್ದ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದ್ದು, ಇದರಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಮಾಸಿಕ20-25 ಲಕ್ಷ ರೂ. ಆದಾಯವೂ ಇಲ್ಲವಾಗಿದೆ. ಇನ್ನೊಂದು ಕಡೆ ಕಟ್ಟಡ ಕಾಮಗಾರಿಯೂ ಆರಂಭವಾಗುತ್ತಿಲ್ಲವಾಗಿದೆ. ಹಳೇ ಬಸ್ ನಿಲ್ದಾಣದ ನೂತನ ಕಟ್ಟಡ ಕಾಮಗಾರಿಹಿನ್ನೆಲೆಯಲ್ಲಿ ಇಲ್ಲಿನ ಬಹುತೇಕ ಬಸ್‌ಗಳ ಕಾರ್ಯಾ ಚರಣೆಯನ್ನು ಹೊಸೂರು ಹಾಗೂಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗದೆ. ಈಗಲೂ ಅಷ್ಟು ಇಷ್ಟು ಬಸ್‌ಗಳು ಹಳೇ ಬಸ್ ನಿಲ್ದಾಣದಿಂದ ಓಡಾಡುತ್ತಿವೆ. ನೂತನ ಕಟ್ಟಡ ಕಾಮಗಾರಿಆರಂಭ ಯಾವಾಗ ಎಂದು ವಾಯವ್ಯ ಸಾರಿಗೆ ಸಂಸ್ಥೆ ಎದುರು ನೋಡುತ್ತಿದೆ. ಇದ್ದ ಕಟ್ಟಡ ತೆರವಾಗಬೇಕಿದ್ದು, ನಂತರವಷ್ಟೇ ನೂತನ ಕಟ್ಟಡ ಕಾಮಗಾರಿ ಆರಂಭವಾಗಲಿದೆ.
ಈಗಾಗಲೇ ಹಳೇ ಬಸ್ ನಿಲ್ದಾಣದ ಕಾಮಗಾರಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಪ್ರಕ್ರಿಯೆ ಮೌಲ್ಯಮಾಪನಮುಕ್ತಾಯಗೊಳಿಸಲಾಗಿದೆ. ಅರ್ಹ ಸಂಸ್ಥೆಗೆ ಎಲ್‌ಓಇ ನೀಡಲಾಗಿದ್ದು, ಒಪ್ಪಂದ ಪತ್ರ ಆದ ನಂತರ ಮುಂದಿನ ಕಾರ್ಯ ಆರಂಭಗೊಳ್ಳಲಿದೆ.- ಎಸ್.ಎಚ್. ನರೇಗಲ್ಲ, ಸ್ಮಾರ್ಟ್ ಸಿಟಿ ವಿಶೇಷಾಧಿಕಾರಿ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.