ಭೂಗತ ಪಾತಕಿ ರವಿ ಪೂಜಾರಿ ಬೇಡಿಕೆಗೆ ಅಚ್ಚರಿಗೊಂಡ ಕೋರ್ಟ್! ಪೂಜಾರಿ ಕೇಳಿಕೊಂಡಿದ್ದೇನು..?
Team Udayavani, Mar 10, 2021, 6:50 PM IST
ಮುಂಬೈ : ತನ್ನನ್ನು ಪೊಲೀಸ್ ಕಸ್ಟಡಿಗೆ ಹೋಗಲು ಅನುಮತಿಸಬೇಕು ಎಂದು ಬೇಡಿಕೆಯಿಟ್ಟು ತನ್ನ ಪರ ವಕೀಲ ಹಾಗೂ ನ್ಯಾಯಾಲಯವನ್ನೇ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ ಭೂಗತ ಪಾತಕಿ ರವಿ ಪೂಜಾರಿ.
ಮುಂಬೈ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಪೂಜಾರಿ ಪರ ವಕೀಲ ಪೊಲೀಸ್ ಕಸ್ಟಡಿಯನ್ನು ಇನ್ನೂ ಮುಂದುವರಿಸಬಾರದು ಎಂದು ಪೂಜಾರಿ ಪರ ವಕೀಲ ವಾದಿಸುತ್ತಿದ್ದರು, ಆಗ ಪೂಜಾರಿ ಮುಂದೆ ಬಂದು ನಾನು ಪೊಲೀಸರೊಂದಿಗೆ ಹೋಗುತ್ತೇನೆ ಎಂದು ಹೇಳಿ ಇಡಿ ನ್ಯಾಯಾಲಯವೇ ಅಚ್ಚರಿ ಆಗುವಂತೆ ಮಾಡಿದ್ದಾರೆ.
ಓದಿ : ಲಾಕ್ಡೌನ್ ಪರಿಣಾಮದಿಂದ 30% ಜನರಲ್ಲಿ ಹೆಚ್ಚಾದ ದೇಹದ ತೂಕ..! ಮೂತ್ರಪಿಂಡಕ್ಕೂ ಎಫೆಕ್ಟ್..!
ಇನ್ನು, ಪೂಜಾರಿಯ ಬೇಡಿಕೆಯ ಹಿನ್ನಲೆಯಲ್ಲಿ ನ್ಯಾಯಾಲಯ ಮಾರ್ಚ್ 15 ರ ವರೆಗೆ ಪೂಜಾರಿ ಕಸ್ಟಡಿಯನ್ನು ಮುಂದೂಡಿದೆ.
ಮಂಗಳವಾರ ರವಿ ಪೂಜಾರಿಯನ್ನು ಮುಂಬೈ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆ ಪೂರ್ಣಗೊಂಡಿದೆ, ಆರೋಪಿಯ ತನಿಖೆಗೆ ಇನ್ನು ಕೆಲವು ದಿನಗಳು ಅಗತ್ಯವಿದೆ ಎಂದು ಪೊಲೀಸ್ ಪರ ವಕೀಲರು ಕೇಳಿದ್ದರು. ಆದರೆ, ಇದನ್ನು ರವಿ ಪೂಜಾರಿ ಪರ ವಕೀಲರು ವಿರೋಧಿಸಿದ್ದರು.
ಈ ಸಂದರ್ಭದಲ್ಲಿ, ರವಿ ಪೂಜಾರಿ, ನನ್ನನ್ನು ಕಸ್ಟಡಿಗೆ ಬಿಡಬೇಕು. ನನಗೆ ಇನ್ನೂ ಕೆಲವು ವಿಷಯಗಳನ್ನು ಹೇಳುವುದಕ್ಕಿದೆ ಎಂದು ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.
2016ರ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾರಿಯನ್ನು ಪೊಲೀಸ್ ತನಿಖೆಗೊಳಪಡಿಸಿತ್ತು. ಹಲವು ಅಪರಾಧಗಳಿಗೆ ನೇತ್ರತ್ವ ನೀಡಿರುವ ರವಿ ಪೂಜಾರಿ ಮೇಲೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳಿವೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ಸೆರೆಮನೆಯಲ್ಲಿದ್ದ ರವಿ, ಕೊಚ್ಚಿಯ ಬ್ಯೂಟಿ ಪಾರ್ಲರ್ ಬಾಂಬ್ ದಾಳಿ ಪ್ರಕರಣದಲ್ಲೂ ಆರೋಪಿಯಾಗಿದ್ದರು.
ಓದಿ : ಯುವತಿಯ ಮೂಗಿಗೆ ಡಿಚ್ಚಿ ಕೊಟ್ಟ ಫುಡ್ ಡೆಲಿವರಿ ಬಾಯ್..! ಕಾರಣ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.