ಸೌಡ: ವೀರಾಂಜನೆಯ ವಿಗ್ರಹದಲ್ಲಿ ದೇವನಾಗರಿ ಲಿಪಿ ಪತ್ತೆ
Team Udayavani, Mar 11, 2021, 4:00 AM IST
ಶಂಕರನಾರಾಯಣ : ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಸೌಡ ಸಮೀಪದ ವಾರಾಹಿ ನದಿ ತಟದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿರುವ ಶ್ರೀ ವೀರಾಂಜನೇಯ ವಿಗ್ರಹದಲ್ಲಿ ವಿಜಯನಗರ ಕಾಲದ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿ ಪತ್ತೆಯಾಗಿದೆ.
ವಿಗ್ರಹದ ಪೀಠದಲ್ಲಿ ತಲೆಕೆಳಗಾಗಿ ಬರೆಯಲಾಗಿದ್ದು, 4 ಅಡ್ಡ ಪಟ್ಟಿಕೆಯಲ್ಲಿ ಶ್ರೀ ವೀರಾಂಜನೇಯರ ಮಂತ್ರಗಳನ್ನು ಒಳಗೊಂಡ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿ ಕಾಣಬಹುದು. ಕೆಲ ಅಕ್ಷರ ಅಸ್ಪಷ್ಟವಾಗಿದೆ.
ಶ್ರೀ ವೀರಾಂಜನೇಯ ಸೌಡ ಎಂದು ಕರೆಸಿಕೊಳ್ಳುವ ಶ್ರೀ ಆಂಜನೇಯ ವಿಗ್ರಹವು ಸುಮಾರು 4 ಅಡಿ ಎತ್ತರವಿದೆ. ಶ್ರೀ ದೇವರ ಮಧ್ಯೆ ಪಟ್ಟಿಕೆಯಲ್ಲಿ ಖಡ್ಗ ತೋರಿಸುವು ದರ ಮೂಲಕ ವೀರತ್ವ ಗಮನಿಸಬಹುದು. ಹಾಗೆ ಬಾಲದಲ್ಲಿ ಘಂಟೆ, ಎಡ ಕೈ ಮಧ್ಯ ಭಾಗದಿಂದ ಗದೆ, ಬಲ ಕೈ ಅಭಯ ಹಸ್ತ ನೀಡಿದರೆ, ಎಡ ಕೈ ಎಡ ಕಾಲ ಮೇಲೆ ಇಟ್ಟಿರುವುದನ್ನು ನೋಡಬಹುದು.
ಈ ದೇವನಾಗರಿ ಲಿಪಿಯನ್ನು ಪ್ರದೀಪ ಕುಮಾರ್ ಬಸ್ರೂರು ಅವರು ಜಯಕರ ಜೋಗಿ, ಸಚೀನ್ ಕಕ್ಕುಂಜೆ, ಮಹಾಬಲೇಶ್ವರ ಬಾಯರಿ, ಸುಮುಖ ಬಾಯರಿ ಸಹಕಾರದಲ್ಲಿ ಪತ್ತೆ ಹಚ್ಚಿದ್ದಾರೆ. ಇವರಿಗೆ ಮೈಸೂರು ಕರ್ನಾಟಕ ವಿವಿ ಮುಕ್ತ ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ| ಶಲ್ವಪ್ಪಿಳ್ಳೈ ಅಯ್ಯಂಗಾರ್ ಅವರು ಮಾರ್ಗದರ್ಶನ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.