ನಟನನ್ನು ನೋಡಲು ನದಿಗೆ ಹಾರಿದ ಅಭಿಮಾನಿ…ವಿಡಿಯೋ ವೈರಲ್
Team Udayavani, Mar 11, 2021, 5:08 PM IST
ಹೈದರಾಬಾದ್ : ಚಿತ್ರದ ಶೂಟಿಂಗ್‍ನಲ್ಲಿದ್ದ ಟಾಲಿವುಡ್ ನಟ ನಾಗಚೈತನ್ಯ ಅವರನ್ನು ಭೇಟಿಯಾಗಲೆಂದು ಅಭಿಮಾನಿಯೋರ್ವ ಸೇತುವೆಯಿಂದ ನೀರಿಗೆ ಹಾರಿದ ಘಟನೆ ನಡೆದಿದೆ.
ತೆಲುಗು ಚಿತ್ರರಂಗದ ಖ್ಯಾತ ನಟ ನಾಗಚೈತನ್ಯ ಸದ್ಯ ‘ಥ್ಯಾಂಕ್ಯೂ’ ಸಿನಿಮಾದಲ್ಲಿ ಬ್ಯುಝಿಯಾಗಿದ್ದಾರೆ. ಇತ್ತೀಚಿಗಷ್ಟೆ ಈ ಚಿತ್ರದ ಶೂಟಿಂಗ್ ಪೂರ್ವ ಗೋದಾವರಿ ನದಿಯಲ್ಲಿ ನಡೆಯುತ್ತಿತ್ತು. ಬೋಟ್ ಮೇಲೆ ನಾಯಕ ನಟ ಬರುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು. ನೆಚ್ಚಿನ ನಟನನ್ನು ಭೇಟಿಯಾಗಲು, ಅವರ ಜತೆ ಮಾತಾಡಲು ನೂರಾರು ಜನ ಅಭಿಮಾನಿಗಳು ಚಿತ್ರೀಕರಣದ ಸ್ಥಳದಲ್ಲಿ ನೆರೆದಿದ್ದರು. ಈ ವೇಳೆ ಅಭಿಮಾನಿಯೋರ್ವ ಸೇತುವೆ ಮೇಲಿಂದ ಜಂಪ್ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿತ್ರೀಕರಣದ ನಂತರ ಆ ಅಭಿಮಾನಿಯನ್ನು ಭೇಟಿಯಾದ ನಟ ನಾಗಚೈತನ್ಯ ಬುದ್ಧಿವಾದ ಹೇಳಿದ್ದಾರೆ. ನಮ್ಮ ಮೇಲೆ ಅಭಿಮಾನ, ಪ್ರೀತಿ ಇರಲಿ, ಆದರೆ ಅದು ಪ್ರಾಣಕ್ಕೆ ಕುಂದುತಂದುಕೊಳ್ಳುವಂತೆ ಇರಬಾರದು. ಇನ್ಮುಂದೆ ಹೀಗೆ ಮಾಡಬಾರದೆಂದು ಕಿವಿ ಮಾತು ಹೇಳಿ ಕಳುಹಿಸಿದ್ದಾರೆ.
ಇನ್ನು ‘ಥ್ಯಾಂಕ್ಯೂ’ ಚಿತ್ರಕ್ಕೆ ವಿಕ್ರಮ್.ಕೆ.ಕುಮಾರ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಡಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜತೆಗೆ ಶೇಖರ್ ಕಮ್ಮುಲಾ ನಿರ್ದೇಶನದ ಪ್ರೇಮ ಕಥೆ ಹೊಂದಿರುವ ಮತ್ತೊಂದು ಸಿನಿಮಾದಲ್ಲಿ ನಾಗಚೈತನ್ಯ ನಟಿಸಲಿದ್ದು, ಇವರಿಗೆ ನಾಯಕಿಯಾಗಿ ಪ್ರೇಮಂ ಬೆಡಗಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Neekuna fanism ki avadhulu levu Anna @chay_akkineni ❤️?
Ne cult fanism level veru anthe ??#ThankYouTheMovie#LoveStoryOnApril16th pic.twitter.com/ImJjKZ4HOj
— Aarya Prasad (@Aaryaprasad) March 2, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.