#DKSvsSiddu: ಕಾಂಗ್ರೆಸ್ ಸಿಎಂ ಆಕಾಂಕ್ಷಿಗಳ ವಿರುದ್ಧ ಬಿಜೆಪಿ ಟ್ವೀಟ್ ಟಕ್ಕರ್
Team Udayavani, Mar 11, 2021, 4:35 PM IST
ಬೆಂಗಳೂರು: ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯೆ ಮುಖ್ಯಮಂತ್ರಿ ಕುರ್ಚಿಗಾಗಿ ಕದನ ಆರಂಭವಾಗಿದೆ. ಕನಸಿನಲ್ಲೂ ಸಿಗದ ಮುಖ್ಯಮಂತ್ರಿ ಪಟ್ಟಕ್ಕಾಗಿ ಇವರಿಬ್ಬರ ಕದನದಿಂದ ಕಾಂಗ್ರೆಸ್ ಈಗ ನಾವಿಕನಿಲ್ಲದೆ ದಿಕ್ಕೆಟ್ಟು ನಿಂತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕೆ ಮಾಡಿದೆ.
#DKSvdSiddu ಹ್ಯಾಷ್ ಟ್ಯಾಗ್ ನಡಿ ಬಿಜೆಪಿ ಕರ್ನಾಟಕವು ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿದೆ.
ಜೆಡಿಎಸ್ ಬಿತ್ತಿದ ಬೀಜ, ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುತ್ತಿದೆ. ಇದು ಬೆಳೆ ಅಲ್ಲ, ಕಳೆ ಎಂದು ಡಿ ಕೆ ಶಿವಕುಮಾರ್ ಗೆ ಈಗ ಅರಿವಾಗುತ್ತಿದೆ. ಈ ಕಳೆ ಎಂಬ ಸಿದ್ದರಾಮಯ್ಯ ಅವರನ್ನು ಬೇರು ಸಮೇತ ಕಿತ್ತು ಹಾಕಲು ಮೂಲ ಕಾಂಗ್ರೆಸ್ಸಿಗರು ಪಣ ತೊಟ್ಟಿದ್ದಾರೆ ಎಂದು ಟೀಕಿಸಿದೆ.
ಇದನ್ನೂ ಓದಿ:ಕೋವಿಡ್ 19 ಸೋಂಕು ಹೆಚ್ಚಳ; ಮಾರ್ಚ್ 15ರಿಂದ 21ರವರೆಗೆ ನಾಗ್ಪುರದಲ್ಲಿ ಲಾಕ್ ಡೌನ್ ಜಾರಿ
ಡಿಜೆ ಹಳ್ಳಿ ಗಲಭೆ ಪ್ರಕರಣದ ಬಗ್ಗೆ ಉಲ್ಲೇಖಿಸಿ, ವಲಸೆ ನಾಯಕ ಸಿದ್ದರಾಮಯ್ಯ ಅವರು ಸಂತ್ರಸ್ತ ಶಾಸಕ ಅಖಂಡ ಪರವಾಗಿ ನಿಂತರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಲಭೆಯ ಆರೋಪಿ ಸಂಪತ್ ರಾಜ್ ಪರವಾಗಿ ನಿಂತರು. ಇವರಿಬ್ಬರ ನಡುವಿನ ಸಂಘರ್ಷದಿಂದ ದಲಿತ ಶಾಸಕನಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಗಲಭೆಯ ಆರೋಪಿಗೆ ಬಹಿರಂಗ ಬೆಂಬಲ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.
ವಲಸೆ ನಾಯಕ @siddaramaiah ಅವರು ಸಂತ್ರಸ್ತ ಶಾಸಕ ಅಖಂಡ ಪರವಾಗಿ ನಿಂತರೆ,
ಕೆಪಿಸಿಸಿ ಅಧ್ಯಕ್ಷ @DKShivakumar ಗಲಭೆಯ ಆರೋಪಿ ಸಂಪತ್ ರಾಜ್ ಪರವಾಗಿ ನಿಂತರು.
ಇವರಿಬ್ಬರ ನಡುವಿನ ಸಂಘರ್ಷದಿಂದ ದಲಿತ ಶಾಸಕನಿಗೆ ಅನ್ಯಾಯವಾಗಿದೆ.@INCKarnataka ಗಲಭೆಯ ಆರೋಪಿಗೆ ಬಹಿರಂಗ ಬೆಂಬಲ ನೀಡಿದೆ.#DksVsSiddu pic.twitter.com/1WfMX6pPQc
— BJP Karnataka (@BJP4Karnataka) March 11, 2021
ವಲಸೆ ನಾಯಕ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವರ ನಡುವೆ ಮುಸುಕಿನ ಗುದ್ದಾಟವಾಗುತ್ತಿತ್ತು. ಹಿಂದ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿರುವ ಸಿದ್ದರಾಮಯ್ಯ ಮೇಲೆ ಮುಗಿಬೀಳಲು ಮೂಲ ಕಾಂಗ್ರೆಸ್ಸಿಗರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ನಲ್ಲಿ ಟೀಕಿಸಿದೆ.
ಇದನ್ನೂ ಓದಿ: ಚುನಾವಣೆಯನ್ನು ಪ್ರಜಾಸತ್ತಾತ್ಮಕವಾಗಿ ಗೆಲ್ಲಬೇಕು, ಹಿಂಸೆಯಿಂದಲ್ಲ: ದೀದಿ ಬೆಂಬಲಕ್ಕೆ ಎಚ್ಡಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಇತ್ತೀಚೆಗೆ ಮೈಸೂರು ಮೇಯರ್ ವಿಚಾರದಲ್ಲಿ ಸಂಘರ್ಷವೇರ್ಪಟ್ಟಿತ್ತು. ಅದು ಕೇವಲ ಮನಸ್ತಾಪವಾಗಿರಲಿಲ್ಲ, ಅದು ಸಿಎಂ ಕುರ್ಚಿಗಾಗಿ ನಡೆದ ಕದನವಾಗಿತ್ತು. ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ಪಕ್ಷದಲ್ಲಿ ಹಿಡಿತ ಸಾಧಿಸಲು ಹೆಣಗಾಡುತ್ತಿದ್ದಾರೆ. ಕನಸಿನಲ್ಲೂ ಲಭಿಸದ ಮುಖ್ಯಮಂತ್ರಿ ಪಟ್ಟಕ್ಕಾಗಿ ಇವರಿಬ್ಬರ ನಡುವೆ ಕದನ ಆರಂಭವಾಗಿದೆ. ಈ ಆಂತರಿಕ ಸಂಘರ್ಷ ಶಮನ ಮಾಡುವುದಕ್ಕೆ ಸುರ್ಜೇವಾಲಾ ಅವರನ್ನು ಮುಲಾಮು ಸಮೇತ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷದ ಒಂದು ಕುಟುಂಬ ನಿರ್ಧರಿಸಿದೆ. ನಾವಿಕನಿಲ್ಲದ ಕಾಂಗ್ರೆಸ್ ದಿಕ್ಕೆಟ್ಟು ನಿಂತಿದೆ ಎಂದು ಟೀಕಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.