ಬ್ರಹ್ಮಪುತ್ರಾಗೆ ಡ್ಯಾಂ ನಿರ್ಮಿಸಲು ಚೀನ ಸಂಸತ್ ಗ್ರೀನ್ಸಿಗ್ನಲ್
Team Udayavani, Mar 12, 2021, 7:12 AM IST
ಬೀಜಿಂಗ್: ಭಾರತದ ತೀವ್ರ ವಿರೋಧದ ನಡುವೆಯೂ ಚೀನದ ಸಂಸತ್, ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಟಿಬೆಟ್ನ ಗಡಿಯಲ್ಲಿ ಬ್ರಹ್ಮಪುತ್ರಾ ನದಿಗೆ ವಿವಾದಿತ ಹೈಡ್ರೋಪವರ್ ಯೋಜನೆಯ ಅಣೆಕಟ್ಟು ನಿರ್ಮಿಸಲು ಅನುಮೋದನೆ ನೀಡಿದೆ.
14ನೇ ಪಂಚವಾರ್ಷಿಕ ಯೋಜನೆ (2021-25) ಭಾಗವಾಗಿ ಜಲವಿದ್ಯುತ್ ಘಟಕದ ಡ್ಯಾಂ ಸೇರಿದಂತೆ ಹಲವು ಯೋಜನೆಗಳ ನೀಲನಕ್ಷೆಗೆ ಎನ್ಪಿಸಿಯ 2 ಸಾವಿರಕ್ಕೂ ಅಧಿಕ ಸದಸ್ಯರು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಅನುಮೋದನೆ ನೀಡಿದ್ದಾರೆ. 2035ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.
ಏನಿದು ಡ್ಯಾಂ?: ಟಿಬೆಟ್ನಲ್ಲಿ ಹುಟ್ಟಿ, ಭಾರತ- ಬಾಂಗ್ಲಾ ಬಳಸಿ, ಸಮುದ್ರ ಸೇರುವ ಬ್ರಹ್ಮಪುತ್ರಾ ನದಿ ಮೇಲೆ ನಿಯಂತ್ರಣ ಸಾಧಿಸಲು ಚೀನ ಡ್ಯಾಂ ಕಟ್ಟುವ ಮೂಲಕ ಪಿತೂರಿ ರೂಪಿಸಿದೆ. ಗಡಿಯಾಚೆಗಿನ ನದಿ ನೀರಿನ ಹಕ್ಕುಗಳ ಸಂರಕ್ಷಣೆ ವಿಚಾರದಲ್ಲಿ ಭಾರತ ಮತ್ತು ಬಾಂಗ್ಲಾ ಇದನ್ನು ಪ್ರಶ್ನಿಸಿದ್ದರೂ, ಚೀನ ಮಾತ್ರ “ನಮ್ಮ ಚಟುವಟಿಕೆಯಿಂದ ಬ್ರಹ್ಮಪುತ್ರಾ ಹರಿವಿನ ಪ್ರದೇಶಗಳಿಗೆ ಯಾವುದೇ ತೊಂದರೆ ಇಲ್ಲ’ ಎಂದು ಸಬೂಬು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.