ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಹೀಗಾಗಿ ಸುಮಾರು 50 ವಿದ್ಯಾರ್ಥಿಗಳು ರಾತ್ರಿ 7 ಗಂಟೆಗೆ ತೆರಳುತ್ತಿದ್ದಾರೆ.
Team Udayavani, Mar 12, 2021, 6:37 PM IST
ಚಡಚಣ: ಪಟ್ಟಣದಿಂದ ದೇವರನಿಂಬರಗಿ, ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್‌ಗಳು ನಿಯಮಿತವಾಗಿ ಸಂಚರಿಸುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಲೇಜು ವಿದ್ಯಾರ್ಥಿಗಳು, ಬಸ್ ನಿಲ್ದಾಣದಲ್ಲಿ ಝಳಕಿ ಮಾರ್ಗವಾಗಿ ಸಂಚರಿಸುವ ಬಸ್ ತಡೆದು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಆಕಾಶ ಹೊನ್ನುಂಗರೆ ಮಾತನಾಡಿ, ಚಡಚಣದಿಂದ ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ಸಾಯಂಕಾಲ 4.30ಕ್ಕೆ ವಿಜಯಪುರಕ್ಕೆ ತೆರಳುವ ಬಸ್ ಕಳೆದ 3 ದಿನಗಳಿಂದ ಬಂದಿಲ್ಲ.ಹೀಗಾಗಿ ಸುಮಾರು 50 ವಿದ್ಯಾರ್ಥಿಗಳು ರಾತ್ರಿ 7 ಗಂಟೆಗೆ ತೆರಳುತ್ತಿದ್ದಾರೆ. ಈ ಬಗ್ಗೆ ಸಾರಿಗೆ ನಿಯಂತ್ರಕರನ್ನು ಕೇಳಿದರೆ ಬಸ್ ಬಂದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಿಯಂತ್ರಣಾಧಿಕಾರಿ ಶ್ರೀಧರ ಕಟ್ಟಿಮನಿ ಮಾತನಾಡಿ, ಝಳಕಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್‌ನ್ನು ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ವೇಳೆ ಎಬಿವಿಪಿ ಕಾರ್ಯದರ್ಶಿ ಚೇತನ ನಿರಾಳೆ, ಕಾರ್ಯಕರ್ತರಾದ ಅನೀಲ ಹಿರೇಮಠ, ಪರಶುರಾಮ ಖೇಡಗಿ, ಸಂತೋಷ ಅವಟಿ, ಶಿವಾನಂದ ಮಾಳಿ, ಅರ್ಬಜ ವಾಲಿಕಾರ ಸೇರಿದಂತೆ ವಿದ್ಯರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.