ಕಾನನದ ಪ್ರಾಕೃತಿಕ ರುದ್ರನಿಗೆ ಕಾಡಿನ ಮಕ್ಕಳ ವಿಶಿಷ್ಟ ಪೂಜೆ

Team Udayavani, Mar 12, 2021, 7:25 PM IST

Chamaraj nagara

ಯಳಂದೂರು: ಶಿವ ಸರ್ವ ಸ್ವರೂಪಿ ಇವನಿಗೆ ಆರಾಧಿಸದ ಭಕ್ತರಿಲ್ಲ.ಕಾಡುಮೇಡುಗಳಲ್ಲಿ, ದಟ್ಟ ಕಾನನದಲ್ಲಿ ಲಿಂಗಸ್ವರೂಪಿಯಾಗಿ ಈತಎಲ್ಲೆಲ್ಲೂ ಪೂಜಿಸಲ್ಪಡುವ ದೈವನಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬಿಳಿಗಿರಿರಂಗನಬೆಟ್ಟದ ದಟ್ಟ ಕಾನನದ ಮಧ್ಯ ಗಿರಿಜನರಾದ ಸೋಲಿಗರು ಈತನನ್ನು ಪೂಜಿಸುವ ಪರಿ ವಿಭಿನ್ನ, ವಿಶಿಷ್ಟ.

ಈ ಕಾಡಿನಲ್ಲಿ ಹರಿಯುವ ಭಾರ್ಗವಿ ನದಿ ದಡದಲ್ಲಿ 500ಕ್ಕೂ ಹೆಚ್ಚು ವರ್ಷಗಳ ಇತಿಹಾವುಳ್ಳ ದೊಡ್ಡ ಸಂಪಿಗೆ ಮರವಿದ್ದು ಇದರ ಕೆಳಗೆ ಅನೇಕ ಲಿಂಗದಾಕಾರದ ಕಲ್ಲುಗಳು ಇವೆ. ಅನಾದಿ ಕಾಲದಿಂದಲೂ ಇಲ್ಲಿನ ಮೂಲ ನಿವಾಸಿಗಳಾದ ಸೋಲಿಗರು ಇದನ್ನು ಪೂಜಿಸುವ ವಾಡಿಕೆ ಇದೆ. ಪ್ರತಿ ವರ್ಷವೂ ಶಿವರಾತ್ರಿಯಂದು ಇಲ್ಲಿ ಇವರು ವಿಶೇಷ ಪೂಜೆ ಮಾಡುವ ಮೂಲಕ ಭಕ್ತಿ ಮೆರೆಯುತ್ತಾರೆ.

ದೊಡ್ಡ ಸಂಪಿಗೆ ಕಾಡು: ಪೂರ್ವ ಹಾಗೂ ಪಶ್ಚಿಮ ಘಟ್ಟಗಳ ಸಂಗಮ ಸ್ಥಾನವಾಗಿರುವ ಬಿಳಿಗಿರಿರಂಗನಬೆಟ್ಟ ವಿಭಿನ್ನ ಪರಿಸರವನ್ನು ಹೊಂದಿದೆ. ಒಂದೇ ಅರಣ್ಯದಲ್ಲಿ 6 ಕಾಡು ಪ್ರಬೇಧಗಳನ್ನು ಒಳಗೊಂಡ ಸ್ಥಳ ಇದು. ಸ್ಥಳಕ್ಕೂ ತನ್ನ ಪ್ರಾಕೃತಿಕ ಸೌಂದರ್ಯವನ್ನು ಭಿನ್ನ ಮಾಡಿಕೊಳ್ಳುತ್ತದೆ. ದಟ್ಟ ಅಡವಿಯ ನಡುವೆ ಇರುವ ನಿತ್ಯಹರಿದ್ವರ್ಣ ಕಾಡುಗಳ ಮಧ್ಯ ಭಾರ್ಗವಿ ನದಿ ಹರಿಯುತ್ತದೆ. ಮಾತೃಹತ್ಯೆಯ ಶಾಪ ವಿಮೋಚನೆಗಾಗಿ ಇಲ್ಲಿಗೆ ಪರಶುರಾಮ ಬಂದು ಸ್ನಾನ ಮಾಡಿ ದೋಷ ಪರಿಹಾರ ಮಾಡಿಕೊಂಡು ಶಿವನನ್ನು ಜಪಿಸಿದ ಎಂದು ಪೌರಾಣಿಕ ಹಿನ್ನೆಲೆ ಇರುವ ಸ್ಥಳವೇ ದೊಡ್ಡ ಸಂಪಿಗೆ ಕಾಡು.

ಹರಿ-ಹರರ ಆವಾಸ ಸ್ಥಾನ: ಸಾಮಾನ್ಯವಾಗಿ ಶೈವ ಅಥವಾ ವೈಷ್ಣವ ಪರಂಪರೆ ಒಂದೆಡೆ ಕಾಣುವುದು ಅಪರೂಪ. ಆದರೆ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಇವೆರಡು ಪರಂಪರೆಯನ್ನು ಆರಾಧಿಸುವ ಜನರಿದ್ದಾರೆ. ಸೋಲಿಗರು ಬಿಳಿಗಿರಿರಂಗನಾಥಸ್ವಾಮಿಯನ್ನು ತಮ್ಮ ಜನಾಂಗದ ಕುಸುಮಾಲೆಯನ್ನು ವರಿಸಿದ ಹಿನ್ನೆಲೆಯಲ್ಲಿ ರಂಗಭಾವನೆಂದು ಪೂಜಿಸುತ್ತಾರೆ. ಅದರಂತೆ ಇಲ್ಲಿರುವ ದೊಡ್ಡ ಸಂಪಿಗೆಯ ಮರದ ಕೆಳಗಿನ ಲಿಂಗಗಳು ಹಾಗೂ ಗಂಗಾಧರೇಶ್ವರನ ತೇರನ್ನು ಸಿಂಗರಿಸಿ ಎಳೆಯುವ ಕೆಲಸವನ್ನು ಮಾಡುವ ಮೂಲಕ ಶಿವನ ಆರಾಧಕರೂ ಆಗುತ್ತಾರೆ.

ಪ್ರತಿ ಶಿವರಾತ್ರಿ ಜಾಗರಣೆ: ದೊಡ್ಡ ಸಂಪಿಗೆ ಮರದ ಬುಡದಲ್ಲಿರುವ ಲಿಂಗಗಳಿಗೆ ಶಿವರಾತ್ರಿಯಂದು ಅಭಿಷೇಕ ಮಾಡಿ ಪೂಜಿಸುವ ಸೋಲಿಗರು, ಇಡೀ ರಾತ್ರಿ ಇಲ್ಲೇ ತಂಗುತ್ತಾರೆ. ದೇವರಿಗೆ ಪೂಜೆ ಮಾಡಿ ತಮ್ಮ ಸಾಂಪ್ರದಾಯಿಕ ಗೊರುಕನ ನೃತ್ಯ, ದೇವರ ಕುಣಿತ ಹಾಗೂ ಮಹದೇಶ್ವರ ಜನಪದ ಗೀತೆಗಳ ಗಾಯನ  ಮಾಡುತ್ತಾರೆ. ಇದರೊಂ ದಿಗೆ ಅಲ್ಲೇ ಅಡುಗೆ ಮಾಡಿ ಸಾಮೂಹಿಕ ಪ್ರಸಾದ ಸ್ವೀಕರಿಸುವ ಪದ್ಧತಿಯೂ ರೂಢಿಯಲ್ಲಿದೆ. ನಂತರ ಮಾರನೇ ದಿನ ಬೆಟ್ಟದಲ್ಲಿರುವಗಂಗಾಧರೇಶ್ವರ ತೇರಿನಲ್ಲೂ ಭಾಗವಹಿಸಿ ಈ ಹಬ್ಬಕ್ಕೆ ಸಂಭ್ರಮದತೆರೆಯನ್ನು ಎಳೆಯುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ ಎನ್ನುತ್ತಾರೆ ಸ್ಥಳೀಯ ಸೋಲಿಗ ಮುಖಂಡ ಪುಟ್ಟರಂಗೇಗೌಡ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Kambala

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.