ಪ್ಲಾಸ್ಟಿಕ್‌ಗೆ ಪರ್ಯಾಯ ಬಯೋಪ್ಲಾಸ್ಟಿಕ್‌


Team Udayavani, Mar 12, 2021, 7:58 PM IST

Alternative bioplastic to plastic

ವಿಶ್ವಾದ್ಯಂತ ಇಂದು ಇರುವ ಬಹುದೊಡ್ಡ ಸವಾಲು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌. ಇದರ ಬಳಕೆಯನ್ನು ಕಡಿಮೆಗೊಳಿಸಲು ಎಲ್ಲ ದೇಶಗಳು ಪ್ರಯತ್ನಿಸುತ್ತಿದೆಯಾದರೂ ಸಂಪೂರ್ಣ ನಿಯಂತ್ರಿಸುವುದು ಅಸಾಧ್ಯವೆಂದೇ ಪರಿಗಣಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ಲಾಸ್ಟಿಕ್‌ ನಮ್ಮ ದಿನ ಬಳಕೆಯ ಅಗತ್ಯವೆಂದೇ ಪರಿಗಣಿತವಾಗಿರುವುದು.

ಕೈ ಚೀಲ, ಪ್ಲೇಟ್‌, ಕಪ್‌,  ಹೀಗೆ ಒಂದಲ್ಲ ಒಂದು ರೀತಿಯ ರೂಪ ತಾಳುವ ಪ್ಲಾಸ್ಟಿಕ್‌ ನಮ್ಮ ದಿನಬಳಕೆಯ ಅಗತ್ಯತೆಯಲ್ಲಿ ಸೇರಿಕೊಂಡಿದೆ. ಹೀಗಾಗಿ ಇದರ ನಿರ್ಮೂಲನೆಯೇ ಅಸಾಧ್ಯವೇನೋ ಎನ್ನುವ ಯೋಚನೆಯಲ್ಲಿರುವಾಗಲೇ ಭಾರತದ ಪಂಜಾಬ್‌ ಮೂಲದ ಸಿಡ್ನಿಯ ವಿದ್ಯಾರ್ಥಿನಿಯೊಬ್ಬಳು ನಡೆಸಿದ ಸಂಶೋಧನೆ ಜಗತ್ತಿನ ಗಮನ ಸೆಳೆದಿದೆ.

ಆಸ್ಟ್ರೇಲಿಯಾದಲ್ಲಿ ನಿತಿನ್‌ ಹಾಗೂ ಆಷಿಮಾ ಎಂಬವರ ಮಗಳಾಗಿ ಜನಿಸಿದ ಆಂಜಲೀನ ಅರೋರ, 2019ರಲ್ಲಿ ಸಿಡ್ನಿ ಬಾಲಕಿಯರ ಹೈಸ್ಕೂಲ್‌ನಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾದ ಪ್ರತಿಭಾವಂತ ವಿದ್ಯಾರ್ಥಿನಿ. ಪ್ರಸ್ತುತ ಮೆಡಿಕಲ್‌ ಡಿಗ್ರಿಯ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ.

ಈಗಾಗಲೇ ಪ್ಲಾಸ್ಟಿಕ್‌ ಕೈ ಚೀಲಕ್ಕೆ ಪರ್ಯಾಯವಾಗಿ ಸಿಗಡಿಯ (ಶ್ರೀಂಪ್‌) ಕವಚ ಮತ್ತು ಜೇಡ ನೇಯುವ ಬಲೆಯ ದಾರದಿಂದ ಹಗುರವಾದ ಮತ್ತು ದೃಢವಾದ ಬಯೋಪ್ಲಾಸ್ಟಿಕ್‌ ತಯಾರಿ ಮಾಡುವುದರಲ್ಲಿ ಯಶಸ್ವಿಯಾಗಿರುವ ಈಕೆ 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಈ ಕುರಿತು ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಳು.
ಸೂಪರ್‌ ಮಾರ್ಕೆಟ್‌ಗಳಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಜನರು ಖರೀದಿ ಮಾಡುತ್ತಿರುವುದನ್ನು ನೋಡಿ ಈ ಪ್ಲಾಸ್ಟಿಕ್‌ ಚೀಲಗಳ ಬದಲಾಗಿ ಬಯೋಪ್ಲಾಸ್ಟಿಕ್‌ ಯಾಕೆ ತಯಾರಿ ಮಾಡಬಾರದು ಎನ್ನುವ ಯೋಚನೆ ಆಂಜ ಲೀ ನ ಳಿಗೆ ಹೊಳೆದಿತ್ತು. ಈ ನಿಟ್ಟಿನಲ್ಲಿ ಅವಿರತವಾಗಿ ಸಂಶೋಧನೆ ನಡೆಸಿ ಬಯೋಪ್ಲಾಸ್ಟಿಕ್‌ ತಯಾರಿ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಪ್ರಕೃತಿಯ ರಕ್ಷಣೆಯ ಕಾರ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸ್ಟ್ರೇಲಿಯಾದ ವಲ್ಡ…ì ವೈಡ್‌ ಫ‌ಂಡ್‌ ಫಾರ್‌ ನೇಚರ್‌ (WWF) ಸಂಸ್ಥೆಯ ಪ್ರಕಾರ ನಾವು ಬಳಸುವ ಪ್ಲಾಸ್ಟಿಕ್‌ ಬಾಟಲ…, ಕಪ್‌ ಕರಗಲು 450 ವರ್ಷಗಳು, ಪ್ಲಾಸ್ಟಿಕ್‌ ಸ್ಟ್ರಾಗಳು ಕರಗಲು 200 ವರ್ಷಗಳು ಮತ್ತು ಪ್ಲಾಸ್ಟಿಕ್‌ ಚೀಲಗಳು ಕರಗಲು ಸುಮಾರು 20 ವರ್ಷಗಳೇ ಬೇಕಾಗುತ್ತವೆ. ಆದರೆ ಈಗಿರುವ ಪ್ಲಾಸ್ಟಿಕ್‌ಗಿಂತ 1.5 ದಶ ಲಕ್ಷದಷ್ಟು ವೇಗವಾಗಿ ಅಂದರೆ ಸುಮಾರು 33 ದಿನಗಳಲ್ಲಿ ಬಯೋಪ್ಲಾಸ್ಟಿಕ್‌ ಕರಗುತ್ತದೆ ಎನ್ನಲಾಗಿದೆ.

ಜನರಿಗೆ ಪ್ರಯೋಜನ ಕಾರಿಯಾ ಗುವುದು ಮಾತ್ರವಲ್ಲದೆ ಪರಿಸರಕ್ಕೆ ಹಾನಿ ಯನ್ನುಂಟು ಮಾಡದ ಯಾವುದಾದರೂ ವಸ್ತು ಇರಲೇಬೇಕೆಂದು ಆಲೋಚನೆ ಮಾಡಿದಾಗಲೇ ಹೊಳೆದದ್ದು ಬಯೋಡೀ ಗ್ರೇಡಬಲ್‌ ಪ್ಲಾಸ್ಟಿಕ್‌ ವಿಚಾರ ಎನ್ನುತ್ತಾಳೆ ಆಂಜಲೀನ. ಪ್ರಶಸ್ತಿಗಳು ಆಂಜಲೀನಳ ಈ ಅನ್ವೇಷಣೆಗೆ 2018ರಲ್ಲಿ ಇನೋವೇಟರ್‌ ಟು ಮಾರ್ಕೆಟ್‌ ಪ್ರಶಸ್ತಿ, ಬಿಲಿಟನ್‌ ಫೌಂಡೇಶನ್‌ ಸೈನ್ಸ್ ಆ್ಯಂಡ್‌ ಎಂಜಿನಿಯರಿಂಗ್‌ ಪ್ರಶಸ್ತಿಗಳು ದೊರತಿರುವುದಲ್ಲದೆ ಇಂಟೆಲ್‌ ಇಂಟರ್‌ನ್ಯಾಷನಲ್‌ ಸೈನ್ಸ್ ಆ್ಯಂಡ್‌ ಎಂಜಿನಿಯರಿಂಗ್‌ ಫೇರ್‌ನಲ್ಲಿ 81 ದೇಶಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ 4ನೇ ಸ್ಥಾನ ಪಡೆದಿದ್ದಾಳೆ. ಅಮೆರಿಕದ ಅರಿಜೋನ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನವನ್ನೂ ಗಳಿಸಿದ್ದಾಳೆ. ಟೆಡ್‌ ಟಾಕ್‌ನಲ್ಲಿ ತನ್ನ ಸಾಧನೆಯ ಪಯಣವನ್ನು ಎಲ್ಲರೊಂದಿಗೂ ಹಂಚಿಕೊಂಡಿರುವ ಆಂಜಲೀನಳ ಈ ಸಾಧನೆ ಇಂದಿನ ಯುವತಿಯರಿಗೆ ಬಹು ದೊಡ್ಡ ಸ್ಫೂರ್ತಿಯಾಗಿದೆ.

ತ್ರಿಷಾ ಶಂಕರ್‌,
ಸಿಡ್ನಿ, ಆಸ್ಟ್ರೇಲಿಯ

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.