ಐಹೊಳೆ ಮಾಯ; ನೀರಲಕೇರಿ ಉದಯ!
ಜಿಪಂ ಕ್ಷೇತ್ರಗಳ ಪುನರ್ವಿಂಗಡಣೆಶೀಘ್ರವೇ ಹೊಸ ಕ್ಷೇತ್ರ-ಮೀಸಲಾತಿ ನಿರ್ಣಯ
Team Udayavani, Mar 12, 2021, 8:58 PM IST
ಬಾಗಲಕೋಟೆ: ಕೆಲವೇ ದಿನಗಳಲ್ಲಿ ಹಾಲಿ ಜಿಪಂ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದ್ದು, ಹೊಸ ಸದಸ್ಯರ ಆಯ್ಕೆಗೆ ಹೊಸ ಕ್ಷೇತ್ರಗಳ ರಚನೆ ಕಾರ್ಯವೂ ನಡೆಯುತ್ತಿದೆ. ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ 40 ಜಿಪಂ ಕ್ಷೇತ್ರಗಳ ರಚನೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಪ್ರಾಥಮಿಕ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ನಡೆಯುತ್ತಿದೆ.
ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ನಾಲ್ಕು ಜಿ.ಪಂ ಕ್ಷೇತ್ರಗಳು, ತಾಲೂಕಿನಲ್ಲಿ 18 ತಾಪಂ ಕ್ಷೇತ್ರಗಳಿದ್ದವು. ಆಯೋಗದ ಹೊಸ ಮಾರ್ಗಸೂಚಿ ಅನ್ವಯ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಜಿ.ಪಂ. ಕ್ಷೇತ್ರಗಳು, ತಾಲೂಕಿನಲ್ಲಿ 11 ತಾಪಂ ಕ್ಷೇತ್ರಗಳ ರಚನೆ ಮಾಡಬೇಕಿದೆ.
ಐಹೊಳೆ ಮಾಯ: ಕಳೆದ 2015ರಲ್ಲಿ ನಡೆದ ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಹೊಸ ಕ್ಷೇತ್ರವಾಗಿ ರಚನೆಗೊಂಡಿದ್ದ ಐಹೊಳೆ ಈ ಬಾರಿ ಮಾಯವಾಗಿದೆ. ಈ ಕ್ಷೇತ್ರ ವ್ಯಾಪ್ತಿಯಡಿ ಬರುತ್ತಿದ್ದ ಹಳ್ಳಿಗಳನ್ನು, ಹುನಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹೊಸ ಜಿ.ಪಂ. ಕ್ಷೇತ್ರವಾಗಲಿರುವ ಸೂಳಿಭಾವಿ ಕ್ಷೇತ್ರಕ್ಕೆ ಸೇರಿಸಲಾಗಿದೆ. ಐಹೊಳೆ ಮಾಯಗೊಳಿಸಿ, ಈ ಕ್ಷೇತ್ರದ ಹಳ್ಳಿಗಳನ್ನು ಹುನಗುಂದ ಕ್ಷೇತ್ರದಡಿ ಬರುವ ಸೂಳಿಭಾವಿಗೆ ಸೇರಿಸಲು ಹಲವು ರಾಜಕೀಯ ತಂತ್ರಗಾರಿಕೆಗಳೂ ಒಳಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.
ಐಹೊಳೆ ಜಿ.ಪಂ. ಕ್ಷೇತ್ರ ಹುಟ್ಟಿಕೊಳ್ಳುವ ಮೊದಲು, ಕಮತಗಿ ಜಿ.ಪಂ. ಕ್ಷೇತ್ರವಿತ್ತು. ಕಮತಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದರಿಂದ, ಐಹೊಳೆ ಹೊಸ ಕ್ಷೇತ್ರ ಹುಟ್ಟಿಕೊಂಡಿತ್ತು.
ನೀರಲಕೇರಿ ಉದಯ: ಈ ವರೆಗೆ ಜಿಪಂ ಕ್ಷೇತ್ರದ ಕೇಂದ್ರ ಸ್ಥಾನ ಹೊಂದಿದ್ದ ಶಿರೂರ, ಈಗ ಪಟ್ಟಣ ಪಂಚಾಯಿತಿ ಆಗಿದೆ. ಹೀಗಾಗಿ ಶಿರೂರ ಬದಲಾಗಿ, ನೀರಲಕೇರಿ ಹೊಸ ಕ್ಷೇತ್ರ ರಚನೆ ಮಾಡಲು ಎಲ್ಲ ರೀತಿಯ ತಯಾರಿ ನಡೆದಿದೆ.
ಬಾಗಲಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಮೂರು ಜಿ.ಪಂ. ಕ್ಷೇತ್ರಗಳು ಈ ಬಾರಿ ಬರಲಿವೆ. ರಾಂಪುರ, ಬೇವೂರ ಹಾಗೂ ನೀರಲಕೇರಿ ಮಾತ್ರ ಜಿ.ಪಂ. ಕ್ಷೇತ್ರಗಳ ಮಾನ್ಯತೆ ಪಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ. ಮೀಸಲಾತಿ ತಂತ್ರಗಾರಿಕೆ: ಕಳೆದ 2015ರಲ್ಲಿ ಜಿ.ಪಂ, ತಾ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರು ರಾಂಪುರ, ಐಹೊಳೆ ಹೊಸ ಕ್ಷೇತ್ರ ರಚನೆ ಆಗುವಲ್ಲಿ ವಿಶೇಷ ಪಾತ್ರ ವಹಿಸಿದ್ದರು. ಜತೆಗೆ ಆಯಾ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲೂ ಚಾಣಾಕ್ಷéತನ ಮೆರೆದಿದ್ದರು. ಅಂತಹದ್ದೇ ತಂತ್ರಗಾರಿಕೆಯನ್ನು ಈಗ ಬಿಜೆಪಿ ಸರ್ಕಾರ ಹಾಗೂ ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿರುವ ಡಾ|ಚರಂತಿಮಠ ಅವರೂ ಅನುಸರಿಸಲಿರುವುದು ರಾಜಕೀಯ ನಡೆ ಎನ್ನಲಾಗುತ್ತಿದೆ.
ಒಂದು ಖಚಿತ ಮೂಲದ ಪ್ರಕಾರ ರಾಂಪುರ ಜಿ.ಪಂ. ಕ್ಷೇತ್ರವನ್ನು ಹಿಂದುಳಿದ ಬ ವರ್ಗ, ಬೇವೂರ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಹಾಗೂ ಹೊಸದಾಗಿ ಉದಯವಾಗಲಿರುವ ನೀರಲಕೇರಿ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿವೆ ಎನ್ನಲಾಗಿದೆ. ಸದ್ಯ ತಾತ್ಕಾಲಿಕವಾಗಿ ಚುನಾವಣೆ ಆಯೋಗಕ್ಕೆ ಜಿಲ್ಲೆಯಿಂದ ಕಳುಹಿಸಿದ ಹೊಸ ಕ್ಷೇತ್ರಗಳು ಹಾಗೂ ಅವುಗಳ ವ್ಯಾಪ್ತಿಗೆ ಸೇರಿದ ಹಳ್ಳಿಗಳ ವಿವರ ಇಲ್ಲಿವೆ. ಈ ಪ್ರಸ್ತಾವನೆಯನ್ನು ಚುನಾವಣೆ ಆಯೋಗ ಪರಿಶೀಲಿಸಿ, ಅಂತಿಮಗೊಳಿಸಿ, ಅಧಿಸೂಚನೆ ಹೊರಡಿಸಬೇಕಿದೆ. ಸದ್ಯ ನಿಗದಿಯಾದ ಕ್ಷೇತ್ರಗಳು, ಆ ವ್ಯಾಪ್ತಿಗೆ ಸೇರಿದ ಹಳ್ಳಿಗಳ ವಿವರ ತಾತ್ಕಾಲಿಕವಾಗಿವೆ. ಚುನಾವಣೆ ಆಯೋಗ ಇದರಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳೂ ಇವೆ.
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Atul Subhash Case: ಪತ್ನಿ ಮೇಲಿನ ಕೇಸ್ ರದ್ದತಿಗೆ ನಿರಾಕರಣೆ
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.