ಬಿಜೆಪಿ ಕಾರ್ಯಕರ್ತರಿಂದ ಪುರಸಭೆ ಮುತ್ತಿಗೆ
Team Udayavani, Mar 13, 2021, 12:03 PM IST
ಆನೇಕಲ್: ಪುರಸಭಾ ಆಡಳಿತ ಹಾಗೂ ಅಧಿಕಾರಿ ಗಳು ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಪುರಸಭೆನಿವೇಶನಗಳನ್ನು ಬೇರೆಯವರಿಗೆ ಖಾತೆ ಮಾಡಿದ್ದಾ ರೆಂದು ಆರೋಪಿಸಿ, ನಗರದ ಬಿಜೆಪಿ ಕಾರ್ಯ ಕರ್ತರು ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪುರಸಭಾ ಸದಸ್ಯ ಬಿ.ನಾಗರಾಜು ಮಾತನಾಡಿ, ಪುರಸಭೆ ನಿವೇಶನವನ್ನು ಬೇರೆಯ ವರಿಗೆ ಮಾರಾಟ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡ ಲು ಪುರಸಭಾ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಸಹಕಾರ ನೀಡುತ್ತಿದ್ದು, ಹಲವು ಬಾರಿ ಪುರಸಭಾ ಸದಸ್ಯ ಸುರೇಶ್ ಈ ಬಗ್ಗೆ ಮನವಿ ಸಲ್ಲಿಸಿ ದರೂ ಯಾವುದೇ ಉತ್ತರ ನೀಡದೆ ಪುರಸಭೆ ಆಸ್ತಿ ಹರಾ ಜು ಹಾಕಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯ ಸುರೇಶ್ ಮಾತನಾಡಿ, ಭ್ರಷ್ಟಾಚಾರ ನಡೆಯಲು ನಾವು ಬಿಡುವುದಿಲ್ಲ. ನಾವು ಯಾವುದೇ ವಿಚಾರವನ್ನು ಕೇಳಲು ಹೋದರೆ ಸರಿಯಾದ ಉತ್ತರ ನೀಡುತ್ತಿಲ್ಲ. ಏನಾದರು ಕೇಳಿದರೆ ಧಮಕಿ ಹಾಕುತ್ತಾರೆ. ತಪ್ಪು ಮಾಡಿದರೆ ಯಾವುದೇಪಕ್ಷದವರಾಗಲಿ ಶಿಕ್ಷೆ ಆಗಬೇಕು. ಇಡೀ ಕಚೇರಿಯಲ್ಲಿದಳ್ಳಾಳಿಗಳು ತುಂಬಿದ್ದಾರೆ. ವೈಟ್‌ನರ್ ಹಾಕಿದಾಖಲೆ ತಿದ್ದುತ್ತಿದ್ದಾರೆ. ನಾವು ಮುಂದಿನ ದಿನಗಳಲ್ಲಿ ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಮೇಲಧಿಕಾರಿಗಳ ನಿರ್ಲಕ್ಷ್ಯ: ಬಿಜೆಪಿ ತಾಲೂಕು ಅಧ್ಯಕ್ಷ ಎನ್.ಶಂಕರ್ ಮಾತನಾಡಿ, ಇಷ್ಟೊಂದು ನಕಲಿದಾಖಲೆಗಳು ಸೃಷ್ಟಿಯಾಗುತ್ತಿದೆ ಎಂದರೆಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಎದುರಾಗು ತ್ತದೆ.ಮೇಲಧಿಕಾರಿಗಳ ನಿರ್ಲಕ್ಷ್ಯದಿಂದ ಆನೇಕಲ್ ಪುರಸಭೆ ಆಸ್ತಿ ಹರಾಜಾಗುತ್ತಿದೆ. ನಾವು ಈ ಕುರಿತು ರಾಜ್ಯಮಟ್ಟದಲ್ಲಿ ಗಮನ ಸೆಳೆಯುವ ಕೆಲಸವನ್ನು ಮಾಡುತ್ತೇವೆ ಎಂದರು.
ಬಿಜೆಪಿ ಹಿರಿಯ ಮುಖಂಡ ಕೆ.ವಿ.ಶಿವಪ್ಪ, ಎನ್.ಬಸವರಾಜು, ಹುಲ್ಲಳ್ಳಿ ಶ್ರೀನಿವಾಸ್, ಶ್ರೀಕಾಂತ್, ಜಿಪಂ ಸದಸ್ಯ ರಾಮಚಂದ್ರ, ಎಂ.ಟಿ.ನಾರಾಯಣಪ್ಪ, ದಿನ್ನೂರು ರಾಜು, ತಿಮ್ಮರಾಜು, ವೆಂಕಟೇಶ್, ರಾಮಕೃಷ್ಣ, ತಾಪಂ ಮಾಜಿ ಅಧ್ಯಕ್ಷೆ ಮುನಿರತ್ನಮ್ಮ, ಉದಯ್ ಕುಮಾರ್, ಜೆ.ನಾರಾಯಣಪ್ಪ, ರಘು, ಮುರಳಿ, ಗಾರೆರಾಜು ಇದ್ದರು.
ಸ್ಪಷ್ಟನೆ: ಪ್ರತಿಭಟನೆ ಕುರಿತು ಸ್ಪಷ್ಟನೆ ನೀಡಿರುವಪುರಸಭಾ ಅಧ್ಯಕ್ಷ ಎನ್.ಎಸ್ ಪದ್ಮನಾಭ್ ಬಿಜೆಪಿಯವರ ತಪ್ಪುಗಳನ್ನು ಹೊರ ತೆಗೆಯುತ್ತೇನೆಎನ್ನುವ ಕಾರಣಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಮುಖಂಡ ನರಸಿಂಹ ರೆಡ್ಡಿ,ಈಶ್ವರಪ್ಪ ಆಪ್ತ ದೊಡ್ಡಯ್ಯ, ಮಾಜಿ ಅಧ್ಯಕ್ಷ ನಾಗರಾಜುಸೇರಿ ಕೆಲವು ಖಾಸಗಿ ಶಾಲೆಗಳ ಭೂಮಿ ಒತ್ತುವರಿಮಾಡಿದ್ದರು. ಇದನ್ನು ನಾನು ಹೊರ ತೆಗೆಯಲುಮುಂದಾಗಿದ್ದೆ. ಇದಕ್ಕಾಗಿ ಸುಳ್ಳು ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಿತಿ ಮೀರಿದ ಭ್ರಷ್ಟಾಚಾರ :
ಪುರಸಭೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ಬಾವುಟಹಾರುತ್ತಿದೆ. ಪುರಸಭೆಯಲ್ಲಿ ಇಂತಹಅಧಿಕಾರಿಗಳು ಇದ್ದರೆ ಇಡೀ ಪುರಸಭೆಯನ್ನು ಮುಂದಿನ ದಿನಗಳಲ್ಲಿ ಹರಾಜು ಹಾಕಲಿದ್ದಾರೆ. ಪುರಸಭೆ ದಾಖಲೆಗಳನ್ನು ಕೇಳಿದರೆ ಸದಸ್ಯರಿಗೆದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ಮುಖಂಡ ಯಂಗಾರೆಡ್ಡಿ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.