ತಾರಸಿ ಮೇಲೂ ಬೆಳೆಯಬಹುದು ಲಾವಂಚ

ನಾಟಿಗೆ ಜೂನ್‌ -ಜುಲಾಯಿ ಸೂಕ್ತ. ನೀರು ಧಾರಾಳವಾಗಿದ್ದರೆ ವರ್ಷದ ಎಲ್ಲ ಸಮಯದಲ್ಲೂ ನಾಟಿ ಮಾಡಬಹುದು.

Team Udayavani, Mar 13, 2021, 12:14 PM IST

Lavancha

ನದಿ, ಕೆರೆ, ತೋಡು ಬದಿಯಲ್ಲಿ ಕಾಣುವ ಲಾವಂಚದ ಗಿಡಗಳನ್ನು ಮನೆಯಂಗಳದಲ್ಲೂ ಬೆಳೆಯಬಹುದು. ಲಾವಂಚ ಅಥವಾ ರಾಮಂಚ ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಸುಗಂಧ ತೈಲಗಳ ತಯಾರಿಕೆಗೆ ಬಳಸುವ ಸಸ್ಯಗಳಲ್ಲಿ ಇದು ಪ್ರಮುಖವಾದುದು. ಅಲ್ಲದೇ ಇದನ್ನು ಔಷಧವಾಗಿಯೂ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಕಪಾಟು, ಟ್ರಂಕ್‌ಗಳ ಒಳಗೆ ಜಿರಳೆ, ತಿಗಣೆ ಇತ್ಯಾದಿಗಳ ಕಾಟದಿಂದ ಬಟ್ಟೆಗಳನ್ನು ರಕ್ಷಿಸಿಕೊಳ್ಳಲು ಲಾವಂಚದ ಬೇರುಗಳನ್ನು ಇಡುತ್ತಿದ್ದರು.

ಇದನ್ನೂ ಓದಿ:ಭಾರತ: ಕಳೆದ 24ಗಂಟೆಯಲ್ಲಿ 24,882 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 2ಲಕ್ಷಕ್ಕೆ ಏರಿಕೆ

ಲಾವಂಚದ ಬೇರುಗಳು ಸುಮಾರು ಎರಡರಿಂದ ಮೂರು ಮೀಟರುಗಳಷ್ಟ ಭೂಮಿಯ ಆಳಕ್ಕೆ ಇಳಿಯಬಲ್ಲುದು. ಇದರಿಂದ ಅದು ಮಣ್ಣಿನ ಸವಕಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನೀರಿಂಗಿಸುವ ಗುಣವಿದೆ. ಇಳಿಜಾರು ಪ್ರದೇಶಗಳಲ್ಲಿ ಲಾವಂಚದ ಗಿಡಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗುವುದನ್ನು ತಡೆಯಬಹುದು. ಮಾತ್ರವಲ್ಲ ನೀರಿನೊಂದಿಗೆ ಕೊಚ್ಚಿಹೋಗುವ ಮಣ್ಣನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಬಹುದು. ಇದರಿಂದಲೇ ಲಾವಂಚವನ್ನು “ಬಡವನ ನೀರಾವರಿ’ ಎನ್ನುವರು.

ನೀರಿನ ಶುದ್ಧೀಕರಣಕ್ಕೆ ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಾದ ಕ್ವೀನ್ಸ್‌ ಲ್ಯಾಂಡ್‌, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್‌, ವಿಯೆಟ್ನಾಂ, ಸೆನೆಗಲ್‌ ಮುಂತಾದ ಕಡೆಗಳಲ್ಲೂ ವೆಟಿವೇರ್‌ ಗಳನ್ನು ಬಳಸಲಾಗುತ್ತದೆ. ಲಾವಂಚ ಬೆಳೆಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಉತ್ತಮ. ಸುಮಾರು ಒಂದೂವರೆಯಿಂದ ಎರಡೂವರೆ ಅಡಿಗಳಷ್ಟ ಎತ್ತರ ಬೆಳೆಯ ಬಹುದಾದ ಈ ಹುಲ್ಲನ್ನು ಸಮಶಿತೋಷ್ಣ, ಉಷ್ಣವಲಯದಲ್ಲೂ ಕೃಷಿ ಮಾಡಬಹುದು. ಯಾಕೆಂದರೆ ಇದರ ಬೇರು ಇತರ ಜಾತಿಯ ಹುಲ್ಲಿಗಿಂತ ಆಳದ ವರೆಗೆ ಇಳಿದು ನೀರನ್ನು ಹೀರುವ ಸಾಮರ್ಥ್ಯ ಹೊಂದಿದೆ.

ಲಾವಂಚದ ಬೇರಿನ ಗುಣ, ಉಪಯೋಗಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಆದ್ದರಿಂದಲೇ ಇದರ ಕೃಷಿಗೆ ಅಷ್ಟೊಂದು ಪ್ರಚಾರ ಸಿಕ್ಕಿಲ್ಲ. ಹಾಗಾಗಿ ಬೇರಿಗೆ ಬೇಡಿಕೆಯು ಬಂದಿಲ್ಲ. ಶ್ರಮವಹಿಸಿ ಕೃಷಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಇದರಿಂದ ಲಾಭ ಪಡೆಯಬಹುದಾಗಿದೆ. ಲಾವಂಚದ ಬೇರಿನ ಬಳಕೆ ಲಾವಂಚದ ಬೇರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಬೇಯಿಸಿ, ಭಟ್ಟಿ ಇಳಿಸಿ ತೈಲ ಉತ್ಪಾದಿಸುತ್ತಾರೆ. ಆ ತೈಲವನ್ನು ಸೋಪು, ಅತ್ತರ್‌, ಅಗರು ಬತ್ತಿ, ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೇರುಗಳಿಂದ ಹೂವಿನ ಬುಟ್ಟಿ, ಬೀಸಣಿಕೆ, ಗೃಹಾಲಂಕಾರದ ವಸ್ತುಗಳು, ಚಾಪೆ ಇತ್ಯಾದಿಗಳನ್ನು ನಿರ್ಮಿಸುತ್ತಾರೆ.

ಕೃಷಿ ಹೇಗೆ?
ಲಾವಂಚದ ಕೃಷಿಗೆ ಹೊಲ, ನದಿ ತೀರ, ಬಯಲು ಪ್ರದೇಶಗಳೇ ಬೇಕೆಂದಿಲ್ಲ. ಬದಲಾಗಿ ಮನೆಯ ಅಂಗಳದಲ್ಲಿ, ಟಾರಸಿಯ ಮೇಲ್ಭಾಗದಲ್ಲಿಯೂ ಬೆಳೆಯಬಹುದು. ಮಣ್ಣಿನ ಅಥವಾ ಪ್ಲಾಸ್ಟಿಕ್‌ ಚಟ್ಟಿ, ಹಳೆಯ ಸ್ಟೀಲ್‌, ಅಲ್ಯುಮಿನಿಯಂ ಪಾತ್ರೆ, ಪ್ಲಾಸ್ಟಿಕ್‌ ಲಕೋಟೆಗಳಿಗೆ ಮರಳು ಮಿಶ್ರಿತ ಮಣ್ಣಿಗೆ ಸ್ವಲ್ಪ ಬೂದಿ ಸೇರಿಸಿ ತುಂಬಿಸಬೇಕು. ಬಳಿಕ ಅದರಲ್ಲಿ ಲಾವಂಚದ ಸಸಿಗಳನ್ನು ನಡಬೇಕು. ನಾಟಿಗೆ ಜೂನ್‌ -ಜುಲಾಯಿ ಸೂಕ್ತ. ನೀರು ಧಾರಾಳವಾಗಿದ್ದರೆ ವರ್ಷದ ಎಲ್ಲ ಸಮಯದಲ್ಲೂ ನಾಟಿ ಮಾಡಬಹುದು. ನಾಟಿ ಮಾಡಿದ ಸುಮಾರು ಹತ್ತು ತಿಂಗಳುಗಳಲ್ಲಿ ಇದು ಕೊಯ್ಲಿಗೆ ಸಿದ್ಧವಾಗುವುದು.

ಗಿಡದ ಬುಡದಿಂದ ಸ್ವಲ್ಪ ದೂರದಿಂದ ಬೇರನ್ನು ಕತ್ತರಿಸಿ, ನೀರಿನಲ್ಲಿ ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಇದರಿಂದ ಬೇರು ಬಹುಕಾಲ ಬಾಳಿಕೆ ಬರುತ್ತದೆ. ಹೀಗೆ ಚಟ್ಟಿ, ಪಾತ್ರೆ, ಅಥವಾ ಲಕೋಟೆಗಳಲ್ಲಿ ಬೆಳೆಸುವುದರಿಂದ ಕೊಯ್ಲು ಸುಲಭವಾಗುವುದಲ್ಲದೆ ಬೇರು ಹೇರಳ ಪ್ರಮಾಣದಲ್ಲಿ ದೊರೆಯುವುದು.

ಟಾಪ್ ನ್ಯೂಸ್

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಇ-ತ್ಯಾಜ್ಯ ತಗ್ಗಿಸಲು ಸರಕಾರದ ಐಡಿಯಾ! ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.