2 ಅಡಿ ಇದ್ದಿದ್ದಕ್ಕೆ ಹೆಣ್ಣು ಸಿಕ್ತಿಲ್ಲ : ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ!
ಹೆಣ್ಣು ಹುಡುಕಿಕೊಡಿ..!
Team Udayavani, Mar 13, 2021, 3:46 PM IST
ಉತ್ತರ ಪ್ರದೇಶ : ನಾನು ಎರಡು ಅಡಿ ಇದ್ದೇನೆ ಎಂದು ನನಗೆ ಎಲ್ಲೂ ಹೆಣ್ಣು ಸಿಗುತ್ತಿಲ್ಲ. ದಯಮಾಡಿ ನನಗೆ ಮದುವೆಯಾಗಲು ಹೆಣ್ಣನ್ನು ಹುಡುಕಿಕೊಡಿ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಜಿಮ್ ಮನ್ಸೂರಿ ಎಂಬ 26 ವರ್ಷದ ವ್ಯಕ್ತಿ ಕೇವಲ 2 ಅಡಿ ಎತ್ತರವಿದ್ದಾನೆ. ಇದ್ರಿಂದಾಗಿ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ಕಳೆದ ಐದು ವರ್ಷದಿಂದ ಹೆಣ್ಣು ಹುಡುಕಿ ಬೇಸತ್ತಿರುವ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾನೆ.
ಅಜಿಮ್ ತಮ್ಮ ಸಹೋದರರ ಜೊತೆ ಸೇರಿಕೊಂಡು ಕಾಸ್ಮೆಟಿಕ್ ಶಾಪ್ ನಡೆಸುತ್ತಿದ್ದಾರೆ. ತಮ್ಮ ವಿದ್ಯಾಭ್ಯಾಸವನ್ನು ಐದನೇ ತರಗತಿಗೆ ನಿಲ್ಲಿಸಿದ್ದಾರೆ. ತರಗತಿಯ ಸಹಪಾಟಿಗಳು ನೀನು ಕುಳ್ಳ ಎಂದು ಅಣಕಿಸಿದ ಕಾರಣ ಅಜಿಮ್ ಶಾಲೆಗೆ ಹೋಗುವುದನ್ನೇ ನಿಲ್ಲಸಿದ್ದರಂತೆ.
ಕಳೆದ ಹಲವು ವರ್ಷಗಳಿಂದ ಕುಟುಂಬದವರೂ ಈ ಎರಡು ಅಡಿ ವ್ಯಕ್ತಿಗೆ ವಧುವನ್ನು ಹುಡುಕುತ್ತಿದ್ದಾರೆ. ಆದ್ರೂ ಕೂಡ ವಧು ಸಿಕ್ಕಿಲ್ಲ. ನೊಂದ ವ್ಯಕ್ತಿ ಈ ಬಗ್ಗೆ ಮಾತನಾಡಿದ್ದು, ನನಗೆ ರಾತ್ರಿ ನಿದ್ದೆ ಬರುತ್ತಿಲ್ಲ, ನಾನು ತುಂಬಾ ಹುಡುಕಿದ್ದೇನೆ. ನನ್ನ ಮದುವೆಯಾಗಲೂ ಯಾರೂ ಇಲ್ಲವೇ ಎಂದೂ ನೊಂದ ಮನಸ್ಸಿನಿಂದ ಹೇಳಿದ್ದಾರೆ.
ಪೊಲೀಸರ ಸಹಾಯ ಕೇಳುವು ಮೊದಲು, ಅಜಿಮ್ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಲ್ಲೂ ಸಹಾಯ ಕೇಳಿದ್ದರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.