ಕಾಮಿಡಿ ವಿಡಿಯೋ ಶೇರ್ ಮಾಡಿ ಸ್ಮೃತಿ ಇರಾನಿ ಹೇಳಿದ್ದೇನು?
ಸ್ಮೃತಿ ಇರಾನಿ
Team Udayavani, Mar 13, 2021, 3:44 PM IST
ನವದೆಹಲಿ : ಸೋಷಿಯಲ್ ಮೀಡಿಯಾದ ಈ ಕಾಲದಲ್ಲಿ ಏನು ಮಾಡಿದರೂ ಸುದ್ದಿಯಾಗುತ್ತದೆ. ಕಳೆದ ಎರಡು ಮೂರು ದಿನಗಳಿಂದ ಒಂದು ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಟ್ರೋಲ್ ಮಾಡುವವರಿಗೆ ಮತ್ತು ಮೆಮ್ಸ್ ಮಾಡುವವರಿಗೆ ಆಹಾರವಾಗುತ್ತಿದೆ.
ನಾಲ್ಕು ಜನ ಸಂಗೀತಗಾರರು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ವಿಚಿತ್ರವಾಗಿ, ಮತ್ತು ಗಮನ ಸೆಳೆಯುವ ರೀತಿಯಲ್ಲಿ ವಾದ್ಯಗಳನ್ನು ಬಾರಿಸುತ್ತಾರೆ. ವಿಡಿಯೋದಲ್ಲಿ ತಬಲ, ಹಾರ್ಮೋನಿಯಂಗಳನ್ನು ನುಡಿಸುವ ನಾಲ್ಕು ಜನ ಸಂಗೀತಗಾರರು ನೆಟ್ಟಿಗರ ಗಮನ ಸೆಳೆದಿದ್ದಾರೆ.
ಹಾಸ್ಯಮಯವಾಗಿರುವ ಈ ವಿಡಿಯೋ ಯಾವ ಮಟ್ಟಿಗೆ ವೈರಲ್ ಆಗಿದೆ ಅಂದ್ರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿರುವ ಸಚಿವೆ, ನಿಮ್ಮ ಸಿಎ ಗಳು ಮಾರ್ಚ್ ತಿಂಗಳ ಕೊನೆಯಲ್ಲಿ ಈ ರೀತಿ ಇರುತ್ತಾರೆ ಎಂದು ಬರೆದಿದ್ದಾರೆ.
View this post on Instagram
ಇತ್ತ ಮುಂಬೈ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿಯೂ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಹ್ಯಾಕರ್ ಗಳು ತಪ್ಪು ಪಾಸ್ ವರ್ಡ್ ಹಾಕಿದಾಗ ಎಂದು ಬರೆದಿದ್ದಾರೆ.
Hackers, when they get access to an account due to a weak password: pic.twitter.com/ueCM4braay
— Mumbai Police (@MumbaiPolice) March 13, 2021
ಇಷ್ಟೇ ಅಲ್ಲದೆ ತಮಗೆ ಬೇಕಾದ ರೀತಿಯಲ್ಲಿ ಈ ವಿಡಿಯೋವನ್ನು ನೆಟ್ಟಿಗರು ಬಳಕೆ ಮಾಡುತ್ತಿದ್ದು ವೈರಲ್ ಆಗುತ್ತಿದೆ.
When you want to be rockstars but parents force you to learn classical. pic.twitter.com/xkL5Qv5tvm
— Amit A (@Amit_smiling) March 12, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
MUST WATCH
ಹೊಸ ಸೇರ್ಪಡೆ
BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್ ಪಲ್ಟಿ: ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.