ಇಳಕಲ್ಲನಲ್ಲಿ ನಾಲ್ಕು ಜಿಪಂ ಕ್ಷೇತ್ರ ಉದಯ

ಎರಡು ತಾಲೂಕು ಸೇರಿ ಇದ್ದ ಆರು ಕ್ಷೇತ್ರಗಳ ವಿಂಗಡಣೆ, ಹೊಸ ತಾಲೂಕು: ಸ್ಥಾನ ಪಡೆದ ನಂದವಾಡಗಿ!

Team Udayavani, Mar 13, 2021, 3:30 PM IST

ಇಳಕಲ್ಲನಲ್ಲಿ ನಾಲ್ಕು ಜಿಪಂ ಕ್ಷೇತ್ರ ಉದಯ

ಬಾಗಲಕೋಟೆ: ಹುನಗುಂದ ತಾಲೂಕಿನಿಂದ ಬೇರ್ಪಟ್ಟು ಹೊಸ ತಾಲೂಕು ಸ್ಥಾನಮಾನ ಪಡೆದ ಇಳಕಲ್ಲ ತಾಲೂಕಿನಲ್ಲಿಈ ಬಾರಿ ನಾಲ್ಕು ಜಿಪಂ ಕ್ಷೇತ್ರಗಳ ರಚನೆಯಾಗಲಿದ್ದು, ಅದರಲ್ಲಿಹೊಸದಾಗಿ ನಂದವಾಡಗಿ ಸ್ಥಾನ ಪಡೆಯಲಿದೆ.

ಹೌದು, ಹೊಸ ತಾಲೂಕು ರಚನೆಯ ಬಳಿಕ ಇದೇ ಮೊದಲ ಬಾರಿಗೆ ಜಿಪಂ, ತಾಪಂ ಚುನಾವಣೆ ನಡೆಯಲಿದ್ದು,ಹಾಲಿ ಇರುವ ಸದಸ್ಯರ ಅವಧಿ ಈ ತಿಂಗಳ ಕೊನೆಗೊಳ್ಳಲಿದೆ.ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆಇದ್ದು, ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಕಾರ್ಯನಡೆಯುತ್ತಿದೆ. ಜಿಲ್ಲೆಯಿಂದ ಇಳಕಲ್ಲ ತಾಲೂಕಿನಡಿ ನಾಲ್ಕುಜಿಪಂ ಹಾಗೂ 9 ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಸ್ತಾವನೆ ರಾಜ್ಯ ಚುನಾವಣೆ ಆಯೋಗಕ್ಕೆಕಳುಹಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಜಿಲ್ಲೆಯಿಂದ ಕಳುಹಿಸಿದ ಪ್ರಸ್ತಾವನೆಯಲ್ಲಿಕೆಲ ತಿದ್ದುಪಡಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

9 ತಾಪಂ ರಚನೆ: ಇಳಕಲ್ಲ ತಾ.ಪಂ. ವ್ಯಾಪ್ತಿಯಡಿ ಕರಡಿ,ನಂದವಾಡಗಿ, ಕಂದಗಲ್ಲ, ಹಿರೇಶಿಂಗನಗುತ್ತಿ, ಬಲಕುಂದಿ,ಹಿರೇಕೊಡಗಲಿ, ಗುಡೂರ ಎಸ್‌.ಸಿ, ಕೆಲೂರ ಹಾಗೂ ವಡಗೇರಿ ತಾ.ಪಂ. ಕ್ಷೇತ್ರಗಳನ್ನು ಸಧ್ಯ ತಾತ್ಕಾಲಿಕವಾಗಿ ರಚಿಸಲಾಗಿದೆ. ಪ್ರತಿಯೊಂದು ತಾಪಂ ಕ್ಷೇತ್ರಗಳು, 8ರಿಂದ 15 ಸಾವಿರಮತದಾರರನ್ನು ಹೊಂದಿವೆ. ಅವುಗಳಡಿ ಗ್ರಾಪಂ ಹಾಗೂಹಳ್ಳಿಗಳ ಸೇರಿಸುವ ಪ್ರಸ್ತಾವನೆಯೂ ಸಿದ್ಧಗೊಂಡಿದೆಯಾದರೂ ಅದನ್ನು ಆಯೋಗ ಅಧಿಕೃತಗೊಳಿಸುವ ಕಾರ್ಯ ಬಾಕಿ ಇದೆ.ಎರಡು ತಾಲೂಕಿನಲ್ಲಿ ಆರು ಕ್ಷೇತ್ರ: ಕಳೆದ 2015-16ನೇ ಸಾಲಿನಲ್ಲಿ ನಡೆದ ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ

ಜಿಲ್ಲೆಯಾದ್ಯಂತ ಒಟ್ಟು 36 ಕ್ಷೇತ್ರಗಳಿದ್ದವು. ಆಗ ಅವಿಭಜಿತ (ಇಳಕಲ್ಲ ಸೇರಿ) ಹುನಗುಂದ ತಾಲೂಕಿನಲ್ಲಿ ಬಲಕುಂದಿ, ಧನ್ನೂರ, ಗುಡೂರ, ಕಂದಗಲ್‌,ಕೂಡಲಸಂಗಮ, ಐಹೊಳೆ ಸೇರಿ ಒಟ್ಟು ಆರುಜಿ.ಪಂ. ಕ್ಷೇತ್ರಗಳಿದ್ದವು. ಇದೀಗ ಇಳಕಲ್ಲ ಪ್ರತ್ಯೇಕತಾಲೂಕಾಗಿದ್ದು, ಈ ತಾಲೂಕಿನಲ್ಲಿಯೇ ನಾಲ್ಕುಕ್ಷೇತ್ರ ರಚನೆ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಕಂದಗಲ್‌, ಬಲಕುಂದಿ, ಗುಡೂರ ಎಸ್‌ಸಿ ಜತೆಗೆ ಇದೇ ಮೊದಲ ಬಾರಿಗೆ ನಂದವಾಡಗಿಯನ್ನು ಹೊಸ ಜಿಪಂ ಕ್ಷೇತ್ರವನ್ನಾಗಿ ರಚಿಸಲಾಗುತ್ತಿದೆ.

ಮೀಸಲಾತಿ ಕೈ ಚಳಕಕ್ಕೆ ಪ್ರಭಾವ: ನಂದವಾಡಗಿ ಹೊಸ ಕ್ಷೇತ್ರ ಸಹಿತ ಇಳಕಲ್ಲ ತಾಲೂಕಿನ ನಾಲ್ಕು ಜಿ.ಪಂ. ಕ್ಷೇತ್ರಗಳಿಗೆಮೀಸಲಾತಿ ನಿಗದಿಯಲ್ಲಿ ಭಾರಿ ಪ್ರಭಾವ ಬೀರು ಕಾರ್ಯನಡೆಯುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ವೇಳೆ, ಇಲ್ಲಿನವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದವರು ಕಾಂಗ್ರೆಸ್‌ನವಿಜಯಾನಂದ ಕಾಶಪ್ಪನವರ. ಆಗ ರಾಜ್ಯದಲ್ಲಿ ಕಾಂಗ್ರೆಸ್‌ಸರ್ಕಾರ ಕೂಡ ಅಧಿಕಾರದಲ್ಲಿತ್ತು. ಹೀಗಾಗಿ ಕಾಶಪ್ಪನವರ,ಇಚ್ಛಿಸಿದ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿನಿಗದಿಯಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ಇದೀಗ ರಾಜ್ಯದಲ್ಲಿಬಿಜೆಪಿ ಸರ್ಕಾರವಿದ್ದು, ದೊಡ್ಡನಗೌಡ ಪಾಟೀಲರುಶಾಸಕರಾಗಿದ್ದಾರೆ. ಹೀಗಾಗಿ ಈ ಬಾರಿ ದೊಡ್ಡನಗೌಡರಅಣತಿಯಂತೆಯೇ ಕ್ಷೇತ್ರಗಳ ರಚನೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ.

ನಂದವಾಡಗಿ ಜಿಪಂ ಕ್ಷೇತ್ರ :

ಇಳಕಲ್ಲ ತಾಲೂಕಿನಲ್ಲಿ ಹೊಸದಾಗಿ ರಚನೆಯಾದ ನಂದವಾಡಗಿ ಜಿ.ಪಂ. ಕ್ಷೇತ್ರ ವ್ಯಾಪ್ತಿಗೆ ನಂದವಾಡಗಿ,ಕರಡಿ, ಅಮರವಾಡಗಿ ಪು.ಕೇ, ಚಿನ್ನಾಪುರ ಎಸ್‌.ಕೆ, ಇಸ್ಲಾಂಪುರಪುಕೆ, ಪೋಚಾಪುರ, ಬೂದಿಹಾಳಎಸ್‌.ಕೆ, ಹೇಮವಾಡಗಿ,ಪಾಲಥಿ, ಬೆನಕನಡೋಣಿ, ತುರಮರಿ, ನಿಸನೂರ,ತಾರಿವಾಳ, ಕೊಣ್ಣೂರ, ಕೋಡಿಹಾಳ, ಕಂಬಿಹಾಳ, ಚಾಮಲಾಪುರ, ಹರಿಣಾಪುರ

ಅಂದಾಜು ಮತದಾರರು : 20,560

ಬಲಕುಂದಿ ಜಿಪಂ ಕ್ಷೇತ್ರ : ಈ ಕ್ಷೇತ್ರವೂ 3ನೇ ಬಾರಿಗೆ ಮುಂದುವರೆಯುತ್ತಿದ್ದು,ಇದರಡಿ ಬಲಕುಂದಿ, ಈಶ್ವರನಗರ, ವಡ್ಡರಹೊಸೂರ,ಗೊರಬಾಳ, ಹೆರೂರ, ಇಂಗಳಗಿ,ತೊಂಡಿಹಾಳ, ಗೊಪಸಾನಿ, ಚಿಕ್ಕಕೊಡಗಲಿ, ಸೇವಾಲಾಲ ನಗರ,ಸಂಕ್ಲಾಪುರ, ಗೋನಾಳ ಎಸ್‌.ಬಿ,ಹಿರೇಉಪನಾಳ, ಹಿರೇಕೊಡಗಲಿ, ಗುಡೂರ ಎಸ್‌.ಬಿ, ಗುಗ್ಗಲಮರಿ, ಹನಮನಾಳ ಎಸ್‌.ಟಿ.

ಅಂದಾಜು ಮತದಾರರು : 21,985

ಕಂದಗಲ್‌ ಜಿಪಂ ಕ್ಷೇತ : ಪ್ರಸಕ್ತ ಹಾಗೂ ಕಳೆದ 2010ರ ಚುನಾವಣೆಯಲ್ಲೂಕಂದಗಲ್‌ ಜಿ.ಪಂ. ಕ್ಷೇತ್ರ ಮುಂದುವರೆದಿದ್ದು, ಈಬಾರಿಯೂ ಈ ಕ್ಷೇತ್ರ ಸ್ಥಾನ ಉಳಿಸಿಕೊಂಡಿದೆ. ಆದರೆ,ಕೆಲ ಹಳ್ಳಿಗಳನ್ನು ಕೈಬಿಟ್ಟು, ಹೊಸ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಯೋಜನೆಹಾಕಿಕೊಳ್ಳಲಾಗಿದೆ. ಈ ಕ್ಷೇತ್ರದಡಿ ಕಂದಗಲ್‌, ಗೋನಾಳ ಎಸ್‌.ಕೆ, ಹಿರೇಓತಗೇರಿ, ಮರಟಗೇರಿ, ಸೋಮಲಾಪುರ, ವಜ್ಜಲ, ಚಿಕ್ಕೋತಗೇರಿ, ಗೋನಾಳಎಸ್‌.ಟಿ, ಹಿರೇ ಶಿಂಗನಗುತ್ತಿ, ಚಿಕ್ಕಾದಾಪುರ, ಹಿರೇಆದಾಪುರ, ಕೃಷ್ಣಾಪುರ, ಚಿಕ್ಕ ಶಿಂಗನಗುತ್ತಿ,ಜಂಬಲದಿನ್ನಿ, ಚಟ್ನಿಹಾಳ, ತುಂಬ, ಚಿನ್ನಾಪುರ ಎಸ್‌.ಟಿ,ಕೇಸರ ಭಾವಿ, ಹಿರೇಹುನಕುಂಟಿ, ಮಲಗಿಹಾಳ ಮತ್ತು ಗಡಿಸುಂಕಾಪುರ.

ಅಂದಾಜು ಮತದಾರರು :  29,037

ಗುಡೂರ ಎಸ್‌.ಸಿ ಜಿಪಂ ಕ್ಷೇತ್ರ :

ಗುಡೂರ ಎಸ್‌.ಸಿ ಕ್ಷೇತ್ರವೂ 2ನೇ ಬಾರಿ ಮುಂದುವರೆಯಲಿದ್ದು, ಈ ಕ್ಷೇತ್ರದಡಿ ಗುಡೂರಎಸ್‌.ಸಿ, ಕೆಲೂರ, ಕುಣಬೆಂಚಿ, ತಳ್ಳಿಕೇರಿ, ವಡಗೇರಿ, ದಮ್ಮೂರ,ಗೊರಜನಾಳ, ಇಲಾಳ,ಮುರಡಿ, ಗಾಣದಾಳ, ಚಿಕನಾಳ,ಕ್ಯಾದಿಗೇರಿ, ಚಿಲಾಪುರ, ಬೆನಕನವಾರಿ, ಸಿದ್ದನಕೊಳ್ಳ, ಉಪನಾಳ ಎಸ್‌.ಸಿ.

 ಅಂದಾಜು ಮತದಾರರು :  35,736

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.