ಮಹಿಳಾ ಪದವಿ ಕಾಲೇಜಿಗೆ ಹೆಚ್ಚಿದ ಬೇಡಿಕೆ
4 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಂದ ಅಭ್ಯಾಸ, ಗಂಗಾವತಿ ಜನರ ಕನಸು ನನಸಾಗುವ ಸಾಧ್ಯತೆ
Team Udayavani, Mar 13, 2021, 4:34 PM IST
ಗಂಗಾವತಿ: ದಶಕದಿಂದ ಗಂಗಾವತಿ ನಗರ ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದ್ದು, ಸದ್ಯ ನಗರದಲ್ಲಿ ಆರು ಪದವಿ ಮಹಾವಿದ್ಯಾಲಯಗಳಿವೆ. ಇವುಗಳಲ್ಲಿಶೇ.50ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಈಗಾಗಲೇವಿದ್ಯಾರ್ಥಿ ಸಂಘಟನೆಗಳು ದಶಕಗಳಿಂದ ಗಂಗಾವತಿಗೆಪ್ರತ್ಯೇಕ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಮಂಜೂರಿ ಮಾಡುವಂತೆ ಮನವಿ ಮಾಡುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಶೀಘ್ರವೇ 20 ಸರಕಾರಿ ಮಹಾವಿದ್ಯಾಲಯಗಳನ್ನು ಮಂಜೂರಿ ಮಾಡುವ ಕುರಿತು ಉನ್ನತ ಶಿಕ್ಷಣ ಇಲಾಖೆ ಆಸಕ್ತಿ ಹೊಂದಿದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವಂತೆ ಗಂಗಾವತಿ ನಗರಕ್ಕೆ ಒಂದು ಮಹಿಳಾಸರಕಾರಿ ಮಹಾವಿದ್ಯಾಲಯ ದೊರಕುವ ಸಾಧ್ಯತೆ ಇದೆ.
ನಗರದಲ್ಲಿ ಕೊಲ್ಲಿನಾಗೇಶ್ವರರಾವ್ ಸರಕಾರಿಮಹಾವಿದ್ಯಾಲಯ, ಕಲ್ಮಠ ಮಹಿಳಾಮಹಾವಿದ್ಯಾಲಯ, ಸಂಕಲ್ಪ ಮಹಾವಿದ್ಯಾಲಯ,ಜಿಎಚ್ಎನ್ ಮಹಾವಿದ್ಯಾಲಯ, ಜೆಎಸ್ಎಸ್ ಮಹಾವಿದ್ಯಾಲಯ, ಶ್ರೀರಾಮುಲು ಮಹಾವಿದ್ಯಾಲಯ ಮತ್ತು ಶ್ರೀರಾಮನಗರ,ಕಾರಟಗಿ ಮತ್ತು ಕನಕಗಿರಿಯಲ್ಲಿ ಸರಕಾರಿ ಪದವಿಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕಿನಲ್ಲಿಒಟ್ಟು 16 ಪಿಯುಸಿ ಕಾಲೇಜು ಗಳಿದ್ದು, ಪ್ರತಿ ವರ್ಷವೃತ್ತಿಪರ ಕೋರ್ಸ್ಗೆ ಇದರಲ್ಲಿ ಶೇ. 16ರಷ್ಟುವಿದ್ಯಾರ್ಥಿಗಳು ಹೋಗುತ್ತಿದ್ದು, ಉಳಿದವರು ಪದವಿ ಕೋರ್ಸ್ಗೆ ಸೇರಿ ಕಲೆ, ವಾಣಿಜ್ಯ, ವಿಜ್ಞಾನವಿಭಾಗದ ಪದವಿ ಅಭ್ಯಾಸ ಮಾಡು ತ್ತಿದ್ದಾರೆ. ಕೋ ಎಜ್ಯುಕೇಶನ್ನಲ್ಲಿ ಕಲಿಯಲು ಆಸಕ್ತಿ ಇಲ್ಲದೇ ಮತ್ತು ಪಾಲಕರ ನಿರಾಕರಣೆಯ ಫಲವಾಗಿ ಶೇ.14ರಷ್ಟುವಿದ್ಯಾರ್ಥಿನಿಯರು ಪಿಯುಸಿಗೆ ತಮ್ಮ ವಿದ್ಯಾಭ್ಯಾಸನಿಲ್ಲಿಸುತ್ತಿದ್ದಾರೆ ಎಂದು ಸಮೀಕ್ಷೆ ಯೊಂದು ಹೇಳಿದ್ದುಇದನ್ನು ಪರಿಗಣಿಸಿ 2014-15ರಲ್ಲಿ ಉನ್ನತ ಶಿಕ್ಷಣಇಲಾಖೆ ಪ್ರತಿ ತಾಲೂಕಿನಲ್ಲಿ ವಿದ್ಯಾರ್ಥಿಗಳು ಮತ್ತುವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಸಹಿತ ಪದವಿ ಕಾಲೇಜು ಆರಂಭಿಸುವ ಯೋಜನೆ ರೂಪಿಸಿತ್ತು.
ಅನುಷ್ಠಾನ ಮಾಡುಯವ ವೇಳೆ ವಿಧಾನಸಭೆ ಚುನಾವಣೆ ಬಂದ ಕಾರಣ ತಾಲೂಕಿಗೊಂದು ಪದವಿ ಮಹಾವಿದ್ಯಾಲಯ ಯೋಜನೆ ನನೆಗುದಿಗೆಬಿದ್ದಿದೆ. ಇದೀಗ ತಾಲೂಕಿಗೊಂದು ಮಹಿಳಾ ಪದವಿ ಮಹಾವಿದ್ಯಾಲಯ ಆರಂಭ ಮಾಡಲು ರಾಜ್ಯ ಸರಕಾರ ಜಿಲ್ಲೆಗಳಿಂದ ವರದಿ ಕೇಳಿದ್ದು ಶೀಘ್ರ 20 ತಾಲೂಕುಗಳಲ್ಲಿ ಮಹಿಳಾ ಪದವಿ ಕಾಲೇಜು ಆರಂಭಿಸಲಾಗುತ್ತಿದೆ.
ಗಂಗಾವತಿ ನಗರಕ್ಕೆ ಸರಕಾರಿ ಮಹಿಳಾ ಮಹಾವಿದ್ಯಾಲಯದ ಅವಶ್ಯಕತೆ ಇದ್ದು, ಈಗಾಗಲೇ ಉನ್ನತ ಶಿಕ್ಷಣ ಸಚಿವ ಡಾ|ಅಶ್ವಥನಾರಾಯಣ ಅವರು ಗಂಗಾವತಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಹೆಣ್ಣುಮಕ್ಕಳು ಪದವಿ ವಿದ್ಯಾಭ್ಯಾಸ ಮಾಡಲು ಪ್ರತ್ಯೇಕ ಮಹಿಳಾ ಪದವಿ ಕಾಲೇಜು ಇದ್ದರೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯವಾಗಲಿದೆ. ಇದೇ ವರ್ಷ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಆರಂಭಿಸಲು ಮತ್ತೂಮ್ಮೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತದೆ. –ಪರಣ್ಣ ಮುನವಳ್ಳಿ, ಶಾಸಕರು
ಪ್ರತಿ ತಾಲೂಕಿನಲ್ಲಿ ಮಹಿಳಾ ಪದವಿಮಹಾವಿದ್ಯಾಲಯದ ಅಗತ್ಯವಿದ್ದು,ಈಗಾಗಲೇ ಶಾಸಕರು, ಸಂಸದರಿಗೆ ಈ ಕುರಿತುಮನವರಿಕೆ ಮಾಡಲಾಗಿದೆ. ಪ್ರಸ್ತುತ ಗಂಗಾವತಿಗೆಪ್ರತ್ಯೇಕ ಮಹಿಳಾ ಮಹಾವಿದ್ಯಾಲಯಆರಂಭಿಸಲು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.ಉನ್ನತ ಶಿಕ್ಷಣ ಸಚಿವರಿಗೆ ಮತ್ತೂಮ್ಮೆ ಪತ್ರ ಬರೆಯುವಂತೆ ಶಾಸಕರು, ಸಂಸದರಿಗೆ ಮನವಿ ಮಾಡಲಾಗುತ್ತದೆ. ಪದವಿ ಮಹಾವಿದ್ಯಾಲಯ ಮಂಜೂರಿ ಮಾಡುವ ಮೂಲಕ ಹೆಣ್ಣು ಮಕ್ಕಳು ಪದವಿವರೆಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಇದೇ ಶೈಕ್ಷಣಿಕ ವರ್ಷದಿಂದ ಮಹಿಳಾ ಪದವಿ ಕಾಲೇಜು ಆರಂಭಮಾಡಬೇಕು. ಶಿವಾನಂದ ಮೇಟಿ, ಸದಸ್ಯರು ವಿದ್ಯಾವಿಷಯಕ್ ಪರಿಷತ್ ಶ್ರೀಕೃಷ್ಣದೇವರಾಯ ವಿವಿ
-ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.