ಆತಂಕ, ಖನ್ನತೆಗೆ ಒಳಗಾಗುತ್ತಿರುವ ಕೋವಿಡ್ ಸೋಂಕಿತರು


Team Udayavani, Mar 13, 2021, 5:47 PM IST

ಆತಂಕ, ಖನ್ನತೆಗೆ ಒಳಗಾಗುತ್ತಿರುವ ಕೋವಿಡ್ ಸೋಂಕಿತರು

ಮುಂಬಯಿ: ನಗರದಲ್ಲಿ ಇತ್ತೀಚೆಗೆ ವರದಿಯಾದ ಕೋವಿಡ್ ಸೋಂಕಿತರಲ್ಲಿ ಹೆಚ್ಚಿನವರು ಆತಂಕ ಮತ್ತು ಖನ್ನತೆಯಲ್ಲಿರುವುದನ್ನು ಗಮನಿಸಿರುವು ದಾಗಿ ನಗರದ ಮನೋವೈದ್ಯರು ಮತ್ತು ಮನಃಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಫೆ. 17ರಿಂದ ಕೋವಿಡ್‌ ದೈನಂದಿನ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಂಡಿದ್ದು, ಫೆಬ್ರವರಿ ಮೊದಲ ವಾರಕ್ಕೆ ಹೋಲಿಸಿದರೆ ಪ್ರಸ್ತುತ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಸುಮಾರು ಶೇ. 89ರಷ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ನಗರದಲ್ಲಿ ಮತ್ತೂಂದು ಲಾಕ್‌ಡೌನ್‌ ಬಗ್ಗೆ ವದಂತಿಗಳಿದ್ದು, ಇದು ಅನೇಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮನೋವೈದ್ಯರು ಹೇಳಿದ್ದಾರೆ.

ಅತಿಯಾದ ಊಹೆ :

ಲಾಕ್‌ಡೌನ್‌ ಸಡಿಲಿಕೆ ಬಳಿಕ ಸ್ವಲ್ಪ ವಿಶ್ರಾಂತಿ ಮತ್ತು ಲೋಕಲ್‌ ರೈಲು ಸೇವೆಗಳ ಪುನರಾ ರಂಭದೊಂದಿಗೆ ಮುಂಬಯಿಯಲ್ಲಿ ಅನೇಕ ಕಚೇರಿಗಳು ಮತ್ತು ವ್ಯವಹಾರಗಳು ತೆರೆದಿವೆ.  ಅನೇಕರು ಪ್ರಯಾಣದ ಆತಂಕ ಎದುರಿಸುತ್ತಿರಬಹುದು. ಕೆಟ್ಟ ಪರಿಸ್ಥಿತಿಗಳನ್ನು ಅತಿಯಾಗಿ ಊಹೆಯಿಂದ ಆತಂಕ, ಖನ್ನತೆ ಸಂಭವಿಸುತ್ತದೆ. ಕೆಟ್ಟ ಘಟನೆ ಅವರೊಂದಿಗೆ ಅಥವಾ ಅವರ ಕುಟುಂಬದೊಂದಿಗೆ ಸಂಭವಿಸಬಹುದು ಎಂದು ನಿರೀಕ್ಷಿಸುತ್ತಾರೆ ಎಂದು ಮಸಿನಾ ಆಸ್ಪತ್ರೆಯ ಸಲಹೆಗಾ ರರಾದ ಮನಶಾಸ್ತ್ರಜ್ಞ ಮತ್ತು ಮಾನಸಿಕ ಚಿಕಿತ್ಸಕ ಡಾ| ಸಾಹಿರ್‌ ಜಮಾತಿ ತಿಳಿಸಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದೇನೆ :

ಬೊರಿವಲಿಯ 34ರ ಹರೆಯದ ಯುವ ಕನೋರ್ವ ಮತ್ತೂಂದು ಲಾಕ್‌ಡೌನ್‌ ಬಗ್ಗೆ ಆತಂಕದಿಂದ ಮನೋ ವೈದ್ಯರ ಮೊರೆ ಹೋಗಿದ್ದಾನೆ. ಕಳೆದ ವರ್ಷ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದಾಗ ಯುವಕನ ವ್ಯವಹಾರವು ಸ್ಥಗಿತಗೊಂಡಿತು. ಅನ್ಲಾಕ್‌ಗೊಂಡ ಬಳಿಕ ಅವರ ಕೆಲಸವು ಪುನರಾರಂಭ ಗೊಂಡಿತು. ಪ್ರಸ್ತುತ ಲಾಕ್‌ಡೌನ್‌ ಆತಂಕದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ.

ಮತ್ತೂಂದು ಲಾಕ್‌ಡೌನ್‌ ಭಯ :

ನನ್ನ ವ್ಯವಹಾರವು ಈಗಷ್ಟೇ ಪ್ರವರ್ಧ ಮಾನಕ್ಕೆ ಬಂದಿದ್ದರಿಂದ 2018ರಲ್ಲಿ 56 ಲಕ್ಷ ರೂ. ಗಳಿಗೆ ಖರೀದಿಸಿದ ಫ್ಲ್ಯಾಟ್‌ಗಾಗಿ 36,000 ರೂ. ಬ್ಯಾಂಕ್‌ ಸಾಲವನ್ನು ಮಾಸಿಕಕಂತಿನಂತೆ ಪಾವತಿಸಬೇಕಾಗಿದೆ. ಲಾಕ್‌ಡೌನ್‌ ಕಾರಣ ನಾನು 15 ಲಕ್ಷ ರೂ. ನಷ್ಟವನ್ನು ಅನುಭವಿಸಿದೆ. ಈಗ ನನ್ನ ವ್ಯವಹಾರವು ಮತ್ತೆ ಹಳಿಗೆ ಬರುತ್ತಿದ್ದಾಗ ಮತ್ತೂಂದು ಲಾಕ್‌ಡೌನ್‌ ಭಯವು ರಾತ್ರಿ ಎಚ್ಚರವಾಗಿರಿಸುತ್ತದೆ. ನನಗೆ ನಿದ್ರೆ ಬರುತ್ತಿಲ್ಲ. ಭಯ ಮತ್ತು ಆತಂಕದಿಂದಾಗಿ ನನಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಇದೆ ಎಂದು  ಯುವಕನೋರ್ವ ಯುವಕ ತಿಳಿಸಿದ್ದಾನೆ.

ಸೋಂಕು ಹರಡುವಿಕೆ ಕಡಿಮೆಯಾದಾಗ ಕೊರೊನಾ ಸಂಪೂರ್ಣವಾಗಿ ಮುಗಿದೇ ಹೋಯಿತೋ ಎಂಬ ನಂಬಿಕೆ ಇತ್ತು. ಆದರೆ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ ಆತಂಕದ ಮಟ್ಟ ಹೆಚ್ಚುತ್ತಿದೆ. ಅನೇಕರು ತಮ್ಮ ಉದ್ಯೋಗ ವನ್ನು ಕಳೆದುಕೊಳ್ಳುತ್ತೇವೆ ಅಥವಾ ಮತ್ತೆ ಪ್ರತ್ಯೇಕವಾಗುವ ಭಯವನ್ನು ವ್ಯಕ್ತಪಡಿಸುತ್ತಿದ್ದಾರೆ.-ಡಾ| ಸಾಗರ್‌ ಮುಂಡಾಡಾ ಮನೋವೈದ್ಯರು, ಮುಂಬಯಿ

ನನ್ನ ರೋಗಿಗಳನ್ನು ಅಗತ್ಯವಿದ್ದಾಗ ಮಾತ್ರ ಪ್ರಯಾಣಿಸುವಂತೆ ಕೇಳಿ ಕೊಳ್ಳುತ್ತೇನೆ. ತಮ್ಮ ಪ್ರಯಾಣದ ಸಮಯದಲ್ಲಿ ಸಂಗೀತ, ಹಾಸ್ಯ  ಪುಸ್ತಕ, ಕಾಮಿಡಿ ಶೋಗಳನ್ನು ನೋಡುವಂತೆ ತಿಳಿಸುತ್ತೇನೆ. ಕೊರೊನಾ ತತ್‌ಕ್ಷಣ ನಮ್ಮನ್ನು ಬಿಟ್ಟು ಹೋಗುವಂಥದ್ದಲ್ಲ. ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಮಾಡಲಾಗುವುದಿಲ್ಲ. -ಡಾ| ಹರೀಶ್‌ ಶೆಟ್ಟಿ ಮನೋವೈದ್ಯರು, ಪೊವಾಯಿ

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.