‘ಬಾಂಬೆ ಬೇಗಮ್ಸ್’ ಪ್ರಸಾರ ರದ್ದುಗೊಳಿಸುವಂತೆ ನೆಟ್ ಫ್ಲಿಕ್ಸ್ ಗೆ NCPCR ನೋಟಿಸ್
Team Udayavani, Mar 13, 2021, 7:20 PM IST
ನವದೆಹಲಿ: ಅಪ್ರಾಪ್ತ ವಯಸ್ಸಿನವರು ಅಸಭ್ಯವಾಗಿ ವರ್ತಿಸುವ ದೃಶ್ಯಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ವೆಬ್ ಸರಣಿಯಾದ ‘ಬಾಂಬೆ ಬೇಗಮ್ಸ್’ ಅನ್ನು OTT ವೇದಿಕೆಯಾಗಿರುವ ನೆಟ್ ಫ್ಲಿಕ್ಸ್ ಪ್ರಸಾರ ಮಾಡಬಾರದು ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ರಾಷ್ಟ್ರೀಯ ಆಯೋಗ NCPCR ನಿರ್ದೇಶನ ನೀಡಿದೆ.
ಈ ಕುರಿತಾಗಿ ನೆಟ್ ಫ್ಲಿಕ್ಸ್ ಗೆ ನೋಟಿಸ್ ನೀಡಿರುವ NCPCR ಬಾಂಬೆ ಬೇಗಮ್ ವೆಬ್ ಸರಣಿಯ ಪ್ರಸಾರವನ್ನು ನಿಲ್ಲಿಸಬೇಕು ಎಂದಿದೆ. ಈ ಕುರಿತು ಮಾಹಿತಿ ನೀಡಿರುವ NCPCR ಅಧ್ಯಕ್ಷರಾದ ಪ್ರಿಯಾಂಕ್ ಕನಂಗೊ, ಈ ವೆಬ್ ಸರಣಿಯಲ್ಲಿ ಅಪ್ರಾಪ್ತ ವಯಸ್ಸಿನವರು ಅಸಭ್ಯವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದು, ಈ ಸರಣಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಲು ನಾವು ನಿರ್ದೇಶನ ನೀಡಿದ್ದೇವೆ ಎಂದಿದ್ದಾರೆ.
ಈ ನಿರ್ಧಾರದ ಕುರಿತು ಮಾಹಿತಿ ನೀಡಿರುವ ಆಯೋಗ ನಾವು 2 ಜನ ಟ್ವೀಟರ್ ಖಾತೆಯನ್ನು ನಿರ್ವಹಣೆ ಮಾಡುವವರಿಂದ ದೂರನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಗುಣಮಟ್ಟದ ಶಿಕ್ಷಣಕ್ಕೆ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆ ಹೆಸರುವಾಸಿ: ಚಂದ್ರಹಾಸ್ ಶೆಟ್ಟಿ
ಈ ದೂರುಗಳ ಕುರಿತಾಗಿಯೂ ಆಯೋಗ ಮಾಹಿತಿ ನೀಡಿದ್ದು, ಮೊದಲ ದೂರಿನ ಅನ್ವಯ ಈ ಸರಣಿಯಲ್ಲಿ ಅಪ್ರಾಪ್ತೆಯೊಬ್ಬಳು ಅಮಲಿನ ಪದಾರ್ಥಗಳಿಗೆ ದಾಸಳಾಗಿರುವುದನ್ನು ಚಿತ್ರಿಸಲಾಗಿದೆ. ಆಕೆ ಪಾರ್ಟಿಗಳಿಗೆ ತೆರಳಿದಾಗಲೂ ಅಮಲಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವ ದೃಶ್ಯಗಳನ್ನು ಇದು ಒಳಗೊಂಡಿದೆ ಎಂದಿದ್ದಾರೆ.
ಈ ನಡುವೆ ಇನ್ನೊಂದು ದೂರಿನ ಕುರಿತಾಗಿಯೂ ಆಯೋಗ ಮಾಹಿತಿ ನೀಡಿದ್ದು, ಈ ಸರಣಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಲಿದೆ ಎಂದಿರುವ NCPCR ಈ ರೀತಿಯಾದ ಮಾಹಿತಿಗಳನ್ನು ಒಳಗೊಂಡಿರುವ ಸರಣಿಯಿಂದ ಕೇವಲ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಮಾತ್ರ ಬೀರದೆ ಜೊತೆ ಜೊತೆಗೆ ಇದು ದುಷ್ಕರ್ಮಿಗಳಿಂದ ಮಕ್ಕಳ ಮೇಲೆ ಶೋಷಣೆ ಆಗಲು ಕಾರಣವಾಗಬಹುದು ಎಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.