ಧೈರ್ಯದಿಂದ ಸಮಸ್ಯೆ ಎದುರಿಸಿ, ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ
ಗೋದುತಾಯಿ ಅವ್ವ ಅವರ ಹೆಸರಿನ ಅವ್ವ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ತಮಗೆ ಬಹಳ ಸಂತೋಷವಾಗಿದೆ
Team Udayavani, Mar 13, 2021, 7:06 PM IST
ಕಲಬುರಗಿ: ಜೀವನದಲ್ಲಿ ಸಾಧನೆ ಮಾಡಲು ಎಂತಹದೇ ಸಮಸ್ಯೆಗಳು ಎದುರಾದರೂ ಧೈರ್ಯದಿಂದ ಎದುರಿಸಿ ಸಾಧನೆಯ ಮೆಟ್ಟಿಲು ಏರಬೇಕು. ಆತ್ಮಸ್ಥೈರ್ಯ
ಕಳೆದುಕೊಳ್ಳಬಾರದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗುತಿ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಗೋದುತಾಯಿ ಅವ್ವ ಅವರ 50ನೇ ಪುಣ್ಮಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗೋದುತಾಯಿ ಅವ್ವ ಹೆಸರಿನ ಅವ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಾಧನೆ ಮಾಡಲು ಸರಳ ದಾರಿ ಇರುವುದಿಲ್ಲ. ದಾರಿಯುದ್ದಕ್ಕೂ ಮುಳ್ಳುಗಳೇ ಹೆಚ್ಚು. ಆ ಎಲ್ಲಾ ಮುಳ್ಳುಗಳನ್ನು ಹೊಡೆದೊಡಿಸಿ ಸಾಧನೆ ಮಾಡಬೇಕೆಂಬ ಛಲ ಇಟ್ಟುಕೊಳ್ಳಬೇಕು. ಇಂದು ಎಷ್ಟೋ ಜನರು ಧೈರ್ಯವಿಲ್ಲದೆ ಸಾವನ್ನೇ ಕೊನೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಸಾವೆ ಕೊನೆಯಲ್ಲ, ಸಮಸ್ಯೆಗಳು ಬಂದಾಗ ಹೋರಾಡಬೇಕು, ಜಯಶಾಲಿಯಾಗಬೇಕೆಂದು ಹೇಳಿದರು.
ತಾವು ಎದುರಿಸಿದ ಕಷ್ಟಗಳು ಅವುಗಳನ್ನು ಮೆಟ್ಟಿ ನಿಂತು ಹೇಗೆ ಸಾಧನೆ ಮಾಡಲು ಸಾಧ್ಯವಾಯಿತು ಎಂಬುಂದನ್ನು ತಮ್ಮ ಭಾಷಣದದ್ದುಕ್ಕೂ ಹೇಳಿದರು.
ಗೋದುತಾಯಿ ಅವ್ವ ಅವರ ಹೆಸರಿನ ಅವ್ವ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ತಮಗೆ ಬಹಳ ಸಂತೋಷವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಡಾ| ದಾಕ್ಷಾಯಿಣಿ ಎಸ್. ಅಪ್ಪಾ ಅವರು ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುದಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೀದರ ವೈದ್ಯಕೀಯ ಮಹಾವಿದ್ಯಾಲಯದ ಡಾ| ಉಮಾದೇವಿ ಬಿ.ದೇಶಮುಖ ಮಾತನಾಡಿ, ಗೋದುತಾಯಿ ಅವ್ವಾಜೀಯವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರಂತೆ ಪೂಜ್ಯ ದಾಕ್ಷಾಯಿಣಿ ಅಪ್ಪ ಅವರು ದಾಸೋಹ, ಕಾಯಕವನ್ನು ಚಿಕ್ಕಂದಿನಿಂದಲೇ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ರೇಷ್ಮಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟನ ಮುಖ್ಯಸ್ಥೆ ಡಾ| ಭಾರತಿ ಎನ್.ರೇಷ್ಮಿ ಗೌರವ ಅತಿಥಿಯಾಗಿ ಮತ್ತು ಮಹಾವಿದ್ಯಾಲಯ ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಅಧ್ಯಕ್ಷೀಯ ಸ್ಥಾನ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಹಾ ವಿದ್ಯಾಲಯದಿಂದ ಆಗಮಿಸಿದ ಪ್ರಾಧ್ಯಾಪಕರು, ಸಾಹಿತಿಗಳು, ಕಲಾವಿದರು, ನಾಲ್ಕು ಚಕ್ರದ ಪದಾ ಧಿಕಾರಿಗಳು, ಮಹಾವಿದ್ಯಾಲಯದ ಕೃಪಾಸಾಗರ ಗೊಬ್ಬುರ, ಡಾ| ಸಂಗೀತಾ ಪಾಟೀಲ, ನಿರ್ಮಲಾ ಪಾರಾ, ವಿದ್ಯಾ ರೇಷ್ಮಿ, ವಿನೋದ ಹಳಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಅನುಸೂಯಾ ಬಡಿಗೇರ, ಶಶೀಕಲಾ ಪಾರಾ, ಪ್ರಭಾವತಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ಸಿದ್ದಮ್ಮ ಗುಡೇದ್ ಪ್ರಾಸ್ತಾವಿಕ ಮಾತನಾಡಿದರು. ಡಾ| ಇಂದಿರಾ ಶೆಟಕಾರ ಸ್ವಾಗತಿಸಿದರು. ಡಾ| ಪುಟ್ಟಮಣಿ ದೇವಿದಾಸ ನಿರೂಪಿಸಿದರು. ಜಾನಕಿ ಹೊಸುರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.