ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?
Team Udayavani, Mar 14, 2021, 6:50 AM IST
ನಿವೃತ್ತಿಯ ಸಮಯದಲ್ಲಿ ಉದ್ಯೋ ಗಿಗಳಿಗೆ ರಜಾ ನಗದೀಕರಣ, ಭವಿಷ್ಯ ನಿಧಿ, ಪಿಂಚಣಿ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇವು ಇಲಾಖೆಯಿಂದ ಇಲಾಖೆಗೆ, ಕಂಪೆನಿಯಿಂದ ಕಂಪೆನಿಗಳಿಗೆ ವ್ಯತ್ಯಾಸ ಇರಬಹುದು. ದೊರಕುವ ಮೊತ್ತದಲ್ಲಿಯೂ ಹೆಚ್ಚು ಕಡಿಮೆ ಆಗಹುದು. ಉಳಿದೆಲ್ಲ ಸೌಲಭ್ಯಗಳಿಗೆ ಹೋಲಿಸಿದರೆ ಕಂಪೆನಿ ಉದ್ಯೋಗಿಗೆ ನೀಡುವ ಗ್ರಾಚುಯಿಟಿ ಮೊತ್ತ ಸ್ವಲ್ಪ ಹೆಚ್ಚಾಗಿರುತ್ತದೆ.
ಗ್ರಾಚುಯಿಟಿ ಎನ್ನುವುದು, ಉದ್ಯೋಗದಾತನು ತನ್ನ ಉದ್ಯೋ ಗಿಗೆ, ಅವನು ನಿವೃತ್ತನಾದಾಗ, ರಾಜೀನಾಮೆ ನೀಡಿದಾಗ ಅಥವಾ ಯಾವುದೇ ಕಾರಣಕ್ಕೆ ಕೆಲಸ ಬಿಟ್ಟಾಗ ನಿವೃತ್ತಿ ಸೌಲಭ್ಯ ಎಂದು ನೀಡುವ ಮೊತ್ತ. ಇದು ಕೆಲವು ಷರತ್ತುಗಳಿಗೆ, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಉದ್ಯೋಗಿಯು ಕನಿಷ್ಠ ಐದು ವರ್ಷಗಳ ಕಾಲ ಆ ಕಂಪೆನಿಯಲ್ಲಿ ಸೇವೆ ಸಲ್ಲಿಸಿರಬೇಕು. ಅಕಸ್ಮಾತ್ ಐದು ವರ್ಷ ಸೇವೆ ಸಲ್ಲಿಸುವ ಮೊದಲೇ ನಿಧನ ಹೊಂದಿದರೆ, ಸೇವೆಯ ಅವಧಿಯ ಅನುಪಾತದಲ್ಲಿ ಈ ಮೊತ್ತವನ್ನು ನೀಡಲಾಗುವುದು.
ಲೆಕ್ಕಾಚಾರ ಹೀಗಿರುತ್ತದೆ
ಹೀಗೆ ಪರಿಹಾರದ ರೂಪದಲ್ಲಿ ಸಿಗುವ ಗ್ರಾಚುಯಿಟಿ ಹಣದ ಮೊತ್ತ ಒಬ್ಬ ಉದ್ಯೋಗಿಯ ಸೇವೆಯ ಕೊನೇ ತಿಂಗಳ ಸಂಬಳ ಮತ್ತು ಆತನ ಒಟ್ಟೂ ಸೇವೆಯ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಸೇವೆಯ ಅವಧಿ ಆರು ತಿಂಗಳುಗಳಿಗಿಂತ ಹೆಚ್ಚು ಇದ್ದರೆ ಅದನ್ನು ಪೂರ್ಣ ವರ್ಷವಾಗಿ ಪರಿಗಣಿಸಲಾಗುವುದು. ಪೂರ್ಣಗೊಳಿಸಿದ ಪ್ರತಿಯೊಂದು ವರ್ಷಕ್ಕೆ 15 ದಿನಗಳ ಸಂಬಳವನ್ನು ನೀಡಲಾಗುವುದು. ಉದ್ಯೋಗಿಯು 25 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದರೆ, ಆ ಸೇವಾ ಅವಧಿಯನ್ನು 26 ವರ್ಷ ಎಂದು ಪರಿಗಣಿಸಲಾಗುತ್ತದೆ.
ಸಂಸ್ಥೆ ನೀಡುವ ಗಿಫ್ಟ್!
ಗ್ರಾಚುಯಿಟಿ ಲೆಕ್ಕ ಹಾಕುವಾಗ ಮೊತ್ತ ಎಷ್ಟೇ ಅದರೂ ಗರಿಷ್ಠ ಮೊತ್ತ 20 ಲಕ್ಷವನ್ನು ಮೀರ ಬಾರದು ಗ್ರಾಚುಯಿಟಿಯನ್ನು ತನ್ನ ಉದ್ಯೋಗಿಗೆ ಸಂಸ್ಥೆಯು ನೀಡುವ ಗಿಫ್ಟ್ ಎಂದು ಪರಿಗಣಿಸಲಾಗುತ್ತಿದ್ದು, ಇದನ್ನು ಉದ್ಯೋಗಿಯ ಯಾವುದೇ ಬಾಕಿಗೆ ಅಟ್ಯಾಚ್ ಮಾಡಲಾಗದು. ಆದರೆ ಉದ್ಯೋಗಿಯು ತನ್ನ ಕೃತ್ಯ ದಿಂದ ಅಥವಾ ಕರ್ತವ್ಯ ಎಸಗದೇ ಸಂಸ್ಥೆಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ, ಆ ಹಾನಿಯ ಮೊತ್ತವನ್ನು ಗ್ರಾಚುಯಿಟಿಯಿಂದ ಕಡಿತ ಮಾಡಬಹುದು. ಹಾಗೆಯೇ ಉದ್ಯೋ
ಗಿಯು ಯಾವುದಾದರೂ ನೀಚತನದ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅಂಥ ಸಂದರ್ಭದಲ್ಲಿ ಗ್ರಾಚುಯಿಟಿಯನ್ನು ತಡೆಹಿಡಿಯಲೂಬಹುದು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪೊಂದರಲ್ಲಿ ಉದ್ಯೋಗಿ ಯಿಂದ ಬರಬೇಕಾದ ಬಾಕಿ ಮೊತ್ತಕ್ಕಾಗಿ ಆತನ ಗ್ರಾಚುಯಿಟಿಯನ್ನು ತಡೆಹಿಡಿಯಬಹುದೆಂದು ಹೇಳಿದೆ. ಉದ್ಯೋಗಿಯೊಬ್ಬ ಅವಧಿಗಿಂತ ಹೆಚ್ಚು ಕಾಲ ಸಂಸ್ಥೆಯ ಕ್ವಾಟ್ರಸ್‌ನಲ್ಲಿ ಉಳಿದಿದ್ದು, ಈ ಅವಧಿಗೆ ಸುಸ್ತಿ ಬಾಡಿಗೆ ನೀಡಲು ತಕರಾರು ತೆಗೆದಿದ್ದ. ಸಂಸ್ಥೆಯು ಆ ಮೊತ್ತವನ್ನು ಆತನ ಗ್ರಾಚು ಯಿಟಿಯಿಂದ ವಸೂಲು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಉದ್ಯೋಗಿ ನ್ಯಾಯಾಲಯದ ಮೊರೆ ಹೋಗಿದ್ದನು. ನ್ಯಾಯಾಲಯವು ಗ್ರಾಚುಯಿಟಿ ಸಹಿತ ಯಾವುದೇ ಬಾಕಿಯನ್ನು ಉದ್ಯೋಗಿಗೆ ನೀಡುವಾಗ ಅವನಿಂದ ಸಂಸ್ಥೆಗೆ ಬರಬೇಕಾದ ಬಾಕಿಗೆ ವಜಾ ಮಾಡಿಕೊಳ್ಳಬಹುದು ಎಂದು ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.