ಪ್ರೀತಿಯೆಂದರೆ, ಪದಗಳಲ್ಲಿ ಹೇಳಲಾಗದ ಸೋಜಿಗವದು..!


Team Udayavani, Mar 14, 2021, 11:19 AM IST

Love with great Soul

ಕಣ್ಮುಚ್ಚಿ ಕಣ್ ತೆರೆದಷ್ಟು ವೇಗದಲ್ಲಿ ನಮ್ಮ ಜೀವನದಲ್ಲೊಂದು ಹೊಸ ಬದಲಾವಣೆಯು ಕಂಡುಬಿಟ್ಟರೆ ಅದು ಅವನ ಅಥವಾ ಅವಳ ಹಿಂದಿನ ಜನ್ಮದ ಪುಣ್ಯದ ಫಲ ಅಂತ ಹೇಳಿಸಿಕೊಳ್ಳುತೇವೆ.

ಈ ಬದಲಾವಣೆಯ ಹಿಂದೆ ನಾವೆಷ್ಟು ಶ್ರಮವಹಿಸಿದ್ದೇವೆಂದು ಮತ್ತು ನಿಗಾವಹಿಸಿದ್ದೇವೆಂದು ನಮ್ಮನ್ನು ಬಿಟ್ಟರೆ ಬೇರೆ ಯಾರಿಂದಲ್ಲೂ ಊಹೆ ಮಾಡಲು ಸಹಾ ಸಾಧ್ಯವಿಲ್ಲ. ಬದಲಾವಣೆಯಲ್ಲಿ ಪ್ರೀತಿ ಕಾರಣವಾದರೆ ಅದರ ಸೊಬಗನ್ನು ವರ್ಣಿಸಲು ಪದಗಳೇ ಸಾಲದು. ನಮ್ಮ ಮನಸ್ಸು ಒಳಗೊಳಗೇ ಪ್ರೇಮ ಮಂತ್ರವನ್ನು ಜಪಿಸುತ್ತಿರುತ್ತದೆ.

ಅವಳಿಂದಾಗಿ ಮತ್ತೆ ನನ್ನ ಜೀವನದಲ್ಲಿ ಬೆಳಕು ಬಂದಿದೆ ಅವನಿಂದಾಗಿ ಮತ್ತೆ ನಾನು ಉತ್ಸುಕಳಾದೆ, ಹುಣ್ಣಿಮೆಯ ಪೂರ್ಣಚಂದಿರನ್ನು ಅವಳಿಗೆ ಹೋಲಿಸುತ್ತಾ ನಿನ್ನ ಕಣ್ಣಲ್ಲಿ ನಾನೇ ಚಂದಿರ ,ಅವನೆಂದರೆ ನನ್ನ ಉಸಿರು ಹೀಗೆ. ನಿಜವಾಗಿಯೂ ಮತ್ತು ಸಹಜವಾಗಿ ಪ್ರೀತಿಗೆ ಬಿದ್ದರೆ ನಾವು ಪ್ರೀತಿಸುವವರು ನಮಗೆ ದೇವರಂತೆ ಕಾಣುವ ಭಾವವದು. ಅಷ್ಟೇ ಅಲ್ಲ. ಪದಗಳಲ್ಲಿ ಹೇಳಲಾಗದ ಸೋಜಿಗವದು.

ಓದಿ :  ಅತ್ಯಾಚಾರಕ್ಕೆ ಸಹಕರಿಸದ 4 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಂದ ದುರುಳ!

ನಾವು ಬಯಸಿದಂತೆ ಅತ್ಯಂತ ಪರಿಶುದ್ಧ , ಮೋಹಕವಾದ ಪ್ರೀತಿ ದೊರೆತರೆ ಅದು ನಮ್ಮ ಪುಣ್ಯವಲ್ಲದೆ ಮತ್ತೇನು? ಪ್ರೀತಿಯಲ್ಲಿ ನೋವೇ ಜಾಸ್ತಿ, ಪ್ರೀತಿಯಲ್ಲಿ ಕಣ್ಣೀರೆ ಜಾಸ್ತಿ, ಪ್ರೀತಿಯಲ್ಲಿ ಕಷ್ಟಗಳೇ ಜಾಸ್ತಿ ಅಂತೆಲ್ಲಾ ಹಲವು ಜನರು ಹಲವು ರೀತಿಯಲ್ಲಿ ಪ್ರೀತಿಯ ಬಗ್ಗೆ ಹೇಳಿದರೂ ಪ್ರೀತಿಸುವವರಂತೂ ಪ್ರೀತಿಸುವುದನ್ನು ಮಾತ್ರ ನಿಲ್ಲಿಸಲ್ಲಿಲ್ಲ ಅದೇ ನೋಡಿ ವಿಸ್ಮಯ!!

ಮೊನ್ನೆ ಒಬ್ಬ ಪರಮ ಪ್ರೇಮಿಯ ಬಳಿ ಕೇಳಿದೆ . ನೀನು ಹಲವು ಬಾರಿ ನೋಡಿದ ಒಂದೇ ಚಲನಚಿತ್ರ ಯಾವುದೆಂದು ? ಆತ ನಾಚಿಕೆಕೊಂಡು ಉತ್ತರಿಸಿದ ಗಾಳಿಪಟ ಅಂತ! ಇಂತಹ ಕೆಲವು ಚಲನಚಿತ್ರಗಳು ಕೇವಲ ಪ್ರೀತಿಗೆಂದೇ ಮಿಸಲೀಡುತ್ತಿದ್ದರು ಆದರೆ ಬರು ಬರುತ್ತಾ ಕತ್ತಿ, ಮಚ್ಚು ಲಾಂಗ್‌ಗಳಿಂದ ಕೂಡಿದ ಚಲನಚಿತ್ರಗಳಿಂದಾಗಿ ಪ್ರೀತಿಯ ನಿಜ ಅರ್ಥವನ್ನು ತಿಳಿಯಲು ಅಸಾಧ್ಯವಾಗುತ್ತಿದೆ. ಇಂಥ ಮಾಧ್ಯಮಗಳ ಪ್ರಭಾವವೋ ಏನೋ ಗೊತ್ತಿಲ್ಲ ಇಂದಿನ ಯುವಜನರ ಪ್ರೀತಿಯು ಮೊದಲು ಶುರುವಾಗುವುದು ಗೆಳತನದಿಂದ!

ಆ ಗೆಳತನವು ನಂತರದ ದಿನಗಳಲ್ಲಿ ಪ್ರೀತಿಯಾಗಿ ಪರಿವರ್ತಿಸುತ್ತದೆ. ಓಡುವ ಇಂದಿನ ಯುಗದಲ್ಲಿ ಪ್ರೀತಿಯೂ ಬಹುಶಃ ಫಾಸ್ಟ್ ಫಾಸ್ಟ್ ಎಂದರೆ ತಪ್ಪಗಲಾರದು. ಪ್ರೀತಿಸುವ ಇಬ್ಬರಲ್ಲೂ ಯೋಜನೆಗಳಲ್ಲಿ, ಆಸಕ್ತಿಗಳಲ್ಲಿ, ಅರ್ಥಮಾಡಿಕೊಳ್ಳುವ ಸಾಮಥ್ಯದಲ್ಲಿ ಸಮಾನ ಮನಸ್ಥಿತಿ ಇಲ್ಲವಾದರೆ ಅದು ಕೇವಲ ದೈಹಿಕ ಸುಖವನಷ್ಟೇ ನೀಗಿಸಬಲ್ಲುದು. ಇದನ್ನು ಪ್ರೀತಿ ಅಂತ ಒಪ್ಪಿಕೊಳ್ಳಬಹುದೆ? ಇದೊಂದು ಮಾಮೂಲಿ ಕ್ರಿಯೆಯಾಗಿಬಿಡುತ್ತದೆ. ನಿನಗೆ ಕೋಪ ಬಂದಾಗ ಮಾತನಾಡಬೇಡ ಹಾಗೆಯೇ ಅವಳಿಗೆ ಕೋಪ ಬಂದು ಮಾತನಾಡುವಾಗ ಯಾವುದನ್ನೂ ಗಂಭಿರವಾಗಿ ತೆಗೆದುಕೊಳ್ಳಬೇಡ ಆಗ ನಿನ್ನ ಪ್ರೀತಿ ಚಿರಕಾಲ ಉಳಿಯುವುದು, ಇಂತಹ ಮನಸ್ಥಿತಿ ಪ್ರತಿಯೊಬ್ಬ ಪ್ರೇಮಿಗಳಲ್ಲಿಯೂ ಇದ್ದರೆ
ಮೂರು ಅರು ತಿಂಗಳಲ್ಲೇ ಭಗ್ನ ಗೊಳ್ಳುವ ಪ್ರೀತಿ ಶಾಶ್ವತವಾಗಿ ಉಳಿಯಬಹುದು. ವಿದ್ಯಾರ್ಥಿ ಜೀವನದಲ್ಲೂ ನಮಗೊಬ್ಬರು ಇಂತಹ ಸಂಗಾತಿ ಸಿಕ್ಕರೆ ಜೀವನ ಪೂರ್ತಿ ಅವರನ್ನು ಮುದ್ದು ಮಾಡಿ ಬಾಳಿನ ಕೊನೆಯ ತನಕ ಜೀವಂತವಾಗಿಟ್ಟುಕೊಳ್ಳಬೇಕೆಂದು ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರೀತಿಯ ಬಲೆಗೆ ಬಿದ್ದ ಮಾತ್ರಕ್ಕೆ ಹೆತ್ತವರು ತಮ್ಮ ಮಕ್ಕಳನ್ನು ದೋಷಿಸುವುದು , ಮನೆಯಿಂದ ಆಚೆಗೆ ಹಾಕುವುದು.

ಓದಿ :  ಆಹಾರ ಮತ್ತು ಇಂಧನ ಬೆಲೆಗಳ ಹೆಚ್ಚಳ: ಚಿಲ್ಲರೆ ಹಣದುಬ್ಬರ ಶೇ. 5.03ಕ್ಕೆ ಏರಿಕೆ..!

ಮಾತು ಮುರಿಯುವುದು ದೊಡ್ಡ ಪಾಪ. ಪ್ರೀತಿಯು ಒಂದು ರೀತಿಯಲ್ಲಿ ಮಳೆಯ ಹಾಗೆ ಅದು ಜೀವನದ ಫಲವತ್ತತೆ ಹೆಚ್ಚಿಸಬಲ್ಲದು. ನಮ್ಮ ಜಂಜಾಟದ ಬದುಕಿಗೆ ಆರಮ ಒದಗಿಸಬಲ್ಲದು. ಪ್ರೀತಿ ಕುರಡು, ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿಲ್ಲ. ನಾಟಕಗಾರ ವಿಲಿಯಂ ಶೇಕ್ಸ್ಪಿಯರ್ ಅವರು ಪ್ರೀತಿಸಿ ಮದುವೆಯಾದದ್ದು ಅವರಿಗಿಂತ ಎಂಟು ವರ್ಷ ಹಿರಿಯರಾಗಿದ್ದವಳನ್ನು! ಇತ್ತಿಚಿಗೆ ಮದುವೆಯಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೂಡ ಪ್ರೀತಿಸಿ ಮದುವೆಯಾಗಿದ್ದು ತನಗಿಂತ ಹತ್ತು ವರ್ಷ ಸಣ್ಣವರನ್ನು! ಹಾಗಿದ್ದರೆ ಪ್ರೀತಿಗೆ ವಯಸ್ಸಿನ ಕಟ್ಟುಪಾಡುಗಳೇನೂ ಬೇಡ ಬೀಡಿ. ಜಾತಿ ಧರ್ಮದ ಪರಿಧಿಗೂ ನಿಲುಕದ ವಿಚಾರ ಈ ಪ್ರೀತಿ.

ಪ್ರೀತಿ ಹುಟ್ಟಿದ ಹೊಸದರಲ್ಲಿ ಹಳೆಯ ಚಿತ್ರಗೀತೆಗಳನ್ನು ಮತ್ತೇ ಮತೇ ಕೇಳಬೇಕೆಂದು ಅನಿಸುತ್ತದೆ. ಕತ್ತಲೆ ತುಂಬಿದ ಫಿಲಂ ಥಿಯೇಟರ್ ಜಗಮಗಿಸುವ ಬೆಳಕಾಗಿ ಹತ್ತಿರವಾಗಿ ಬಿಡುವುದು. ರಸ್ತೆ ಬದಿಯ ಪಾನಿಪೂರಿ ತಿನ್ನಬೇಕೆಂದು ನಾಲಗೆ ಚಪ್ಪರಿಸುವುದು, ಇವನೆಲ್ಲ ನೋಡುತ್ತಾ ನೋಡುತ್ತಾ ಅನಿಸುತ್ತೆ, ನಾವು ಈಗಲೇ ಮದುವೆಯಾಗಬೇಕೆಂದು. ಇನ್ನೂ ಕೇಲವರಿಗೆ ಅನಿಸುತ್ತೆ ನಾವು ಕೊನೆವರೆಗೂ ಪ್ರೇಮಿಗಳಾಗಿರಬೇಕೆಂಬುದು. ಕಣ್ಣಿಗೆ ಸಿಕ್ಕ ಎಲ್ಲರ ಹೃದಯಕ್ಕೆ ಹತ್ತಿರವಾಗದೇ. ಸಿಕ್ಕಿದ ಎಲ್ಲರನ್ನೂ
ಪಡೆಯಲು ಸಾಧ್ಯವಿಲ್ಲವಾದರೂ, ನಮ್ಮ ಹೃದಯಕ್ಕೆ ಹತ್ತಿರವಾದ ಒಬ್ಬರನ್ನು ಎಂದಿಗೂ ಮರೆಯಬಾರದು…. ಹೀಗೆ ಮಹಾನ್ ಪ್ರೇಮಿಗಳ ಪ್ರೀತಿಯನ್ನು ಅನುಕರಣೆ ಮಾಡದೆ ನಮ್ಮದೇ ಶೈಲಿಯಲ್ಲಿ ಪ್ರೀತಿಯನ್ನು ಪ್ರಾಮಾಣಿಕವಾಗಿ ಕಟ್ಟುವ ಪ್ರಯತ್ನ ಮಾಡುವುದೆಂದರೇ, ನಿಜಾವಾದ ಪ್ರೀತಿ ಅಲ್ಲವೇ.

–ಪ್ರಥ್ವಿನಿ ಡಿಸೋಜ
ಆಳ್ವಾಸ್ ಕಾಲೇಜ್, ಮೂಡುಬಿದಿರೆ. 

ಓದಿ : ಬೆಂಗಳೂರಿನಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ‘ ಇಂಗ್ಲೀಷ್’

ಟಾಪ್ ನ್ಯೂಸ್

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.