ಸವಾರರಿಗೆ “ಸಾವಿನ ದಾರಿ’ಯದ್ದೇ ಸಮಸ್ಯೆ
ಕಿಕ್ಕೇರಿ ಭಾಗದಲ್ಲಿ ಹದಗೆಟ ರಸ್ತೆಗಳಿಂದ ಸವಾರರು ಪರದಾಟ
Team Udayavani, Mar 14, 2021, 12:11 PM IST
ಕಿಕ್ಕೇರಿ: ಜಿಲ್ಲೆಯ ಗಡಿಭಾಗ ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳ ರಸ್ತೆಗಳಲ್ಲಿ ಗುಂಡಿಗಳೇ ತುಂಬಿಹೋಗಿದ್ದು ಸಣ್ಣ ನೀರು ಹರಿದರೂ ಕೆಸರು ಗದ್ದೆಯಾಗುವಂತಾಗಿದೆ.
ಪಟ್ಟಣದ ಮೂಲಕ ಶ್ರೀರಂಗಪಟ್ಟಣ, ಅರಸೀಕೆರೆ ರಾಜ್ಯ ಹೆದ್ದಾರಿ(ಎನ್‌ಎಚ್ 7) ಹಾದು ಹೋಗಿದ್ದುಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ ಎನ್ನುವುದಷ್ಟೇ ಭಾಗ್ಯವಾದಂತಿದೆ. ಮಳೆ ಇರಲಿ, ಬೇಸಿಗೆ ಇರಲಿಇಲ್ಲಿಗೆ ಗುಂಡಿಗೆ ಬರವಿಲ್ಲ. ಮೈಸೂರಿಗೆ ಮುಂಬೈಹತ್ತಿರದ ಹೆದ್ದಾರಿಯಾಗಿರುವುದರಿಂದ ನಿತ್ಯವೂ ಸಾವಿ ರಾರು ಸರ್ಕಾರಿ, ಖಾಸಗಿ ವಾಹನ ಸಂಚರಿಸುತ್ತವೆ. ಕೆ.ಆರ್.ಪೇಟೆಯಿಂದ ಚನ್ನರಾಯಪಟ್ಟಣದವರೆಗೆ ಲೆಕ್ಕವಿಲ್ಲದಷ್ಟು ಗುಂಡಿ, ಮೈಲಿ ಉದ್ದಕ್ಕೆ ರಸ್ತೆ ಹಂಪ್ ಗಳಿವೆ. ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರ ಮಜ್ಜನ, ಅಧಿಕ ತೂಕ ಹೊತ್ತು ಸಾಗುವ ಜಲ್ಲಿ ಕಲ್ಲು, ಕಬ್ಬಿಣದ ಲಾರಿ, ಟ್ರ್ಯಾಕ್ಟರ್ ಭಾರ ತಾಳಲಾರದೆ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಪರಿಣಾಮ ವಾಹನಸವಾರರು ಗುಂಡಿ ತಪ್ಪಿಸಲು ರಸ್ತೆ ಮಗ್ಗಲಿಗೆ ಬರುವುದ ರಿಂದ ಅಪಘಾತಗಳಿಗೆ ಕೊರತೆ ಇಲ್ಲದಂತಿದೆ.
ಅವೈಜ್ಞಾನಿಕ ರಸ್ತೆ ದಿಣ್ಣೆ: ಅವೈಜ್ಞಾನಿಕವಾಗಿ ಹಳ್ಳಿ ಗೊಂದು ರಸ್ತೆ ಹಂಪ್ (ಬ್ರೇಕರ್)ಗಳಿವೆ. ಮೈಮರೆತರೆಗದ್ದೆಯ ಬದುವಿನಂತಹ ರಸ್ತೆ ಡುಬ್ಬ, ರಸ್ತೆಗೆ ಅಡ್ಡಲಾಗಿ ಕೃಷಿ ನೀರಿನ ಪೈಪು ತೆಗೆದುಕೊಳ್ಳಲು ರೈತರುಅಗೆದಿರುವ ಗುಂಡಿಗಳು, ತಿರುವಿನ ರಸ್ತೆಗಳು,ಹೆದ್ದಾರಿಯ ಇಕ್ಕೆಲಗಳಲ್ಲಿನ ಒಣಗಿದ ಬೃಹತ್ ಮರಗಳು, ರೆಂಬೆಗಳ ತೆರವು ಆಗಬೇಕಿದೆ. ತೆರವಿನನೆಪದಲ್ಲಿ ಮರಕಡಿದರೆ ಸಾಲದು ಮತ್ತಷ್ಟು ಮರಗಳನ್ನು ನೆಟ್ಟು ಉಳಿಸುವ ಕೆಲಸವೂ ಆಗಬೇಕಿದೆ.
ಅಪಾಯಕರ ಗುಂಡಿ: ಕೃಷ್ಣಾಪುರ, ಕೋಡಿಮಾರನಹಳ್ಳಿ ಪೆಟ್ರೋಲ್ ಬಂಕ್ ತಿರುವು, ಸಮುದಾಯ ಆರೋಗ್ಯ ಕೇಂದ್ರ, ಆರಕ್ಷಕ ಠಾಣೆ, ಬಸವನಹಳ್ಳಿ ತಿರುವು,ಪುರಗೇಟ್ ರಸ್ತೆ ಡುಬ್ಬ, ಆನೆಗೊಳ ಬಳಿ ಕಜ್ಜಿಯಂತಿರುವ ರಸ್ತೆ.
ಸರಕು ಬೆಲೆ ದುಪ್ಪಟ್ಟು, ಗ್ರಾಹಕನಿಗೆ ಪೆಟ್ಟು: ಮುಂಬೈಗೆ ಸಾಗಲು ಈ ಮಾರ್ಗ ಬಲು ಹತ್ತಿರವಾದರೂ ರಸ್ತೆ ಹಾಳಾಗಿರುವುದರಿಂದ ಬೆಳ್ಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬಹುತೇಕಮುಂಬೈ, ಆಂಧ್ರ, ದೆಹಲಿ ಮತ್ತಿತರ ಅಂತಾರಾಜ್ಯಕ್ಕೆ ನಿತ್ಯ ಸರಕು ಹೊತ್ತು ಸಾಗುತ್ತಿವೆ. ಪರಿಣಾಮ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗುತ್ತಿದೆ ಎನ್ನುವುದು ಗ್ರಾಹಕರ, ವ್ಯಾಪಾರಿಗಳ ಆರೋಪವಾಗಿದೆ.
ಶ್ರೀರಂಗಪಟ್ಟಣದಿಂದ ಅರಸೀಕೆರೆಗೆ ಸಾಗುವ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ,ಅಗಲೀಕರಣ ಎಂದು ಸರ್ಕಾರಕ್ಕೆ ಮನವಿಮಾಡಿಕೊಂಡಿರುವ ಪತ್ರ ಎಲ್ಲೆಡೆ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಬಿಟ್ಟರೆ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗುತ್ತಿಲ್ಲ
ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ರಸ್ತೆಗಳದ್ದೇ ಸಮಸ್ಯೆ :
ಹೊಯ್ಸಳರ ಕಾಲದ ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ತೆಂಗಿನಘಟ್ಟದ ಈಶ್ವರ, ಕಿಕ್ಕೇರಿ ಬ್ರಹ್ಮೇಶ್ವರ, ಯೋಗನರಸಿಂಹ ದೇಗುಲ, ಸಾಸಲುವಿನ ಸೋಮೇಶ್ವರ, ಶಂಭುಲಿಂಗೇಶ್ವರ, ಮಂದಗೆರೆ ಅಂಕನಾಥೇಶ್ವರ,ಮಾದಾಪುರದ ಪಶ್ಚಿಮವಾಹಿನಿ, ಗೋವಿನಕಲ್ಲು, ರಾಮೇಶ್ವರ ದೇಗುಲ, ಸೋಮವಾರಪೇಟೆ ಸಾಕಮ್ಮ ನಿರ್ಮಿಸಿರುವ ಚೌಡೇನಹಳ್ಳಿ ಅಣೆಗೆ ಸಾಗಲು ಡಾಂಬರು ರಸ್ತೆ ಇರಲಿ ಸಮರ್ಪಕವಾದ ಕಚ್ಚಾ ರಸ್ತೆಗಳೂ ಇಲ್ಲವಾಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಮುಖ ಮಾಡಬೇಕಿದೆ.
ಶಾಶ್ವತ ಕಾಮಗಾರಿ ನಡೆಸಿ :
ಜನಪ್ರತಿನಿಧಿಗಳು ನಿದ್ರೆಗೆ ಜಾರಿದರೆ, ಅಧಿಕಾರಿಗಳು ಜಾಣಕುರುಡರಾಗಿದ್ದಾರೆ.ಸರ್ಕಾರಕ್ಕೆ ಲಕ್ಷಾಂತರ ರೂ. ಈ ರಸ್ತೆಯಿಂದಲೇವರಮಾನವಿದೆ. ರಸ್ತೆಗೆ ತೇಪೆ ಹಾಕುವ ಬದಲುಶಾಶ್ವತ ಕಾಮಗಾರಿ ಮಾಡಬೇಕಿದೆ. ಜನ,ಜಾನುವಾರು, ರೈತರ ಸರಕು ಸಾಗಾಣಿಕೆಸಾಗಿಸಲು ತುರ್ತಾಗಿ ಅಧ್ವಾನವಾಗಿರುವರಸ್ತೆಗಳನ್ನು ದುರಸ್ತಿ ಮಾಡಿಸಲು ಜಿಲ್ಲಾಉಸ್ತುವಾರಿ ಸಚಿವರಾಗಿರುವ ನಮ್ಮ ಕ್ಷೇತ್ರದವರೇ ಆದ ಕೆ.ಸಿ. ನಾರಾಯಣಗೌಡರುಮುಂದಾಗಬೇಕು ಎಂದು ಆನೆಗೊಳದ ಸಾಮಾಜಿಕ ಸೇವಾಕರ್ತ ಪ್ರಸನ್ನ ತಿಳಿಸಿದರು.
ಹೆದ್ದಾರಿ ವಾರ್ಷಿಕ ನಿರ್ವಹಣೆಯಡಿಸಾಕಷ್ಟು ಗುಂಡಿಗಳನ್ನು ಮುಚ್ಚಲಾಗಿದೆ.ರಸ್ತೆ ಸಂಪೂರ್ಣ ರಿಪೇರಿಗೆ ಮೇಲಧಿಕಾರಿ,ಸರ್ಕಾರಕ್ಕೆ ಮನವಿ ಮಾಡಲಾಗಿದೆ. ತ್ವರಿತವಾಗಿಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. –ರವಿಕುಮಾರ್, ಲೋಕೋಪಯೋಗಿ ಇಲಾಖೆ, ಅಭಿಯಂತರರು
– ತ್ರಿವೇಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.