ಮಾರ್ಚ್ 19ರಂದು ‘ಒಂದು ಗಂಟೆ ಕಥೆ’ ಚಿತ್ರ ಬಿಡುಗಡೆ
Team Udayavani, Mar 14, 2021, 2:26 PM IST
ಕನ್ನಡದಲ್ಲಿ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ “ಒಂದು ಗಂಟೆ ಕಥೆ’ ಕೂಡ ಸೇರಿದೆ. ಈಗಾಗಲೇ ಪೋಸ್ಟರ್ ಹಾಗು ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆದಿರುವ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮಾರ್ಚ್ 19ರಂದು ತೆರೆಕಾಣುತ್ತಿದೆ.
ಈ ಹಿಂದೆ “ಮತ್ತೆ ಮುಂಗಾರು’ ಚಿತ್ರವನ್ನು ನಿರ್ದೇಶಿಸಿದ್ದ ರಾಘವ್ ದ್ವಾರ್ಕಿ ಈ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. “ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಕಶ್ಯಪ್ ದಾಕೋಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ‘ಮೈಲಾಪುರ’ದಲ್ಲಿ ರಿಯಾಲಿಟಿ ಶೋ
ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದು, ಸಮಾಜಕ್ಕೆ ಒಂದೊಳ್ಳೆಯ ಸಂದೇಶವಿದೆಯಂತೆ. ಜೊತೆಗೆ ಇಂದಿನ ಯುವಕರ ಜೀವನ ಶೈಲಿ ಮತ್ತು ಅಭಿರುಚಿ, ಜವಾಬ್ದಾರಿಗಳ ಕುರಿತು ಹೇಳಲಾಗಿದೆ ಎನ್ನುವುದು ನಿರ್ದೇಶಕ ರಾಘವ್ ಅವರ ಮಾತು.
ಇದನ್ನೂ ಓದಿ:ಕೊನೆಯ ಹಂತ ತಲುಪಿದ ‘ಡಿಸೆಂಬರ್ 24’
ಚಿತ್ರದ ಹಾಡುಗಳಿಗೆ ಡೆನ್ನಿಸ್ ವಲ್ಲಭನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸೂರ್ಯಕಾಂತ್ ಛಾಯಾಗ್ರಹಣವಿದೆ. ಗಣೇಶ್ ಮಲ್ಲಯ್ಯ ಸಂಕಲನವಿದೆ. ಚಿತ್ರದಲ್ಲಿ ಅಜಯ್ ರಾಜ್, ಶನಾಯ ಕಾಟ್ವೆ, ಸ್ವಾತಿ ಶರ್ಮ, ಚಿದಾನಂದ್, ಪ್ರಶಾಂತ್ ಸಿದ್ಧಿ, ಪ್ರಕಾಶ್ ತುಮಿನಾಡು, ಚಂದ್ರಕಲಾ, ಯಶವಂತ್ ಸರದೇಶಪಾಂಡೆ ನಟಿಸಿದ್ದಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.