ಒಕ್ಕಲಿಗರ ಸಮಾವೇಶಕ್ಕೆ ತೆರಳಿದ ಮುಖಂಡರು
Team Udayavani, Mar 14, 2021, 1:44 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನೆಲಮಂಗಲದ ಬಳಿ ನಡೆಯುತ್ತಿರುವಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಬೆಂಗಳೂರು ವಿಭಾಗೀಯ ಸಮಾವೇಶಕ್ಕೆಜಿಲ್ಲೆಯಿಂದ ಒಕ್ಕಲಿಗ ಸಮಾಜದವರು ಅಪಾರ ಸಂಖ್ಯೆಯಲ್ಲಿ ತೆರಳಿದರು.
ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಸಮಾವೇಶ ದಲ್ಲಿ ಭಾಗವಹಿಸಲು ಎಲ್ಲಾ ತಾಲೂಕುಗಳಿಂದ ಒಕ್ಕಲಿಗ ಸಮಾಜದವರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಯಾತಾಲೂಕುಗಳು ಒಕ್ಕಲಿಗರ ಸಂಘದಪದಾಧಿಕಾರಿಗಳು ಮತ್ತು ಒಕ್ಕಲಿಗ ಸಮಾಜದ ಮುಖಂಡರು ಬಸ್ ಮೂಲಕ ನೆಲಮಂಗಲಕ್ಕೆ ಪ್ರಯಾಣ ಬೆಳೆಸಿದರು.
ರೈತ ಸಂಘ ಹಾಗೂ ಹಸಿರುಸೇನೆ (ದಿ.ಪುಟ್ಟಣ್ಣಯ್ಯ ಬಣ) ಶಿಡ್ಲಘಟ್ಟತಾಲೂಕು ಅಧ್ಯಕ್ಷ ರವಿಪ್ರಕಾಶ್ ಮಾತ ನಾಡಿ, ರಾಜ್ಯದಲ್ಲಿ(ಉತ್ತರ ಕರ್ನಾಟದ ಸಹಿತ) ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇನ್ನಿತರೆ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಸ್ವಾಮೀಜಿ ಗಳ ಮುಖಂಡತ್ವದಲ್ಲಿ 6 ಜಿಲ್ಲೆಗಳಒಕ್ಕಲಿಗರ ಸಮಾವೇಶ ನಡೆಯುತ್ತಿದ್ದು, ಅದರಲ್ಲಿ ಶಿಡ್ಲಘಟ್ಟ ತಾಲೂಕು ಸೇರಿದಂತೆಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿಸಮಾಜದ ಮುಖಂಡರು ಭಾಗವಹಿ ಸುತ್ತಿದ್ದಾರೆ ಎಂದರು.
ಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂ ಟದ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮಳಮಾಚನಹಳ್ಳಿ ರವಿಕುಮಾರ್, ಕೋಟೆ ಚನ್ನೇಗೌಡ, ನಂಜೇಗೌಡ, ಶಂರ್‌ನಾರಾಯಣ, ನಾಗೇಶ್, ಮಂಜುನಾಥ್, ರಮೇಶ್, ಶ್ರೀನಿವಾಸ್, ರಾಮಚಂದ್ರರೆಡ್ಡಿ, ಗೋಪಾಲರೆಡ್ಡಿ, ನಾಗರಾಜ್, ಸುಬ್ರಹ್ಮಣಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.